ಮಡಿಕೇರಿ, ಫೆ. ೧೩: ಮಡಿಕೇರಿ ತಾಲೂಕು ಜಾನಪದ ಪರಿಷತ್‌ಗೆ ಹೊಸದಾಗಿ ಯುವ ಬಳಗವನ್ನು ಸೇರ್ಪಡೆಗೊಳಿಸಲಾಗಿದ್ದು, ಈ ಮೂಲಕ ಯುವಪೀಳಿಗೆಯ ಜಾನಪದ ಕಲಾವಿದರು, ಯುವ ಕಲಾಸಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸಲು ಜಾನಪದ ಪರಿಷತ್ ಮುಂದಾಗಿದೆ.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಭೆಯು ನಗರದ ಲಯನ್ಸ್ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭ ಮಾತನಾಡಿದ ಅನಿಲ್, ಪುರಾತನವಾದ ಜಾನಪದ ಸಂಸ್ಕೃತಿಯನ್ನು ಭವಿಷ್ಯಕ್ಕೂ ರಕ್ಷಿಸುವ ನಿಟ್ಟಿನಲ್ಲಿ ಯುವಪೀಳಿಗೆಯಲ್ಲಿ ಜಾನಪದದ ಬಗ್ಗೆ ಆಸಕ್ತಿ ಬೆಳೆಸಬೇಕಾದ ಅಗತ್ಯ ಇದೆ. ಅನೇಕ ಯುವಕ, ಯುವತಿಯರು ಜಾನಪದದ ಬಗ್ಗೆ ಆಸಕ್ತರಾಗಿದ್ದಾರೆ. ಹೀಗಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಯುವ ಬಳಗವನ್ನು ಸ್ಥಾಪಿಸಿ ಯುವ ಕಲಾವಿದರಿಗೆ ಸೂಕ್ತ ಅವಕಾಶ ಮಡಿಕೇರಿ, ಫೆ. ೧೩: ಮಡಿಕೇರಿ ತಾಲೂಕು ಜಾನಪದ ಪರಿಷತ್‌ಗೆ ಹೊಸದಾಗಿ ಯುವ ಬಳಗವನ್ನು ಸೇರ್ಪಡೆಗೊಳಿಸಲಾಗಿದ್ದು, ಈ ಮೂಲಕ ಯುವಪೀಳಿಗೆಯ ಜಾನಪದ ಕಲಾವಿದರು, ಯುವ ಕಲಾಸಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸಲು ಜಾನಪದ ಪರಿಷತ್ ಮುಂದಾಗಿದೆ.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಭೆಯು ನಗರದ ಲಯನ್ಸ್ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭ ಮಾತನಾಡಿದ ಅನಿಲ್, ಪುರಾತನವಾದ ಜಾನಪದ ಸಂಸ್ಕೃತಿಯನ್ನು ಭವಿಷ್ಯಕ್ಕೂ ರಕ್ಷಿಸುವ ನಿಟ್ಟಿನಲ್ಲಿ ಯುವಪೀಳಿಗೆಯಲ್ಲಿ ಜಾನಪದದ ಬಗ್ಗೆ ಆಸಕ್ತಿ ಬೆಳೆಸಬೇಕಾದ ಅಗತ್ಯ ಇದೆ. ಅನೇಕ ಯುವಕ, ಯುವತಿಯರು ಜಾನಪದದ ಬಗ್ಗೆ ಆಸಕ್ತರಾಗಿದ್ದಾರೆ. ಹೀಗಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಯುವ ಬಳಗವನ್ನು ಸ್ಥಾಪಿಸಿ ಯುವ ಕಲಾವಿದರಿಗೆ ಸೂಕ್ತ ಅವಕಾಶ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭ ಮಡಿಕೇರಿ ತಾಲೂಕು ಜಾನಪದ ಪರಿಷತ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ. ರವಿ ಅವರನ್ನು ಆಯ್ಕೆ ಮಾಡಲಾಯಿತು.

ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ರವಿ ವಂದಿಸಿದ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಪ್ರಭಾಕರ್, ಸ್ನೇಹಾ, ಸಪ್ನ ಮಧುಕರ್ ಅವರಿಂದ ಗೀತಗಾಯನ ನಡೆಯಿತು.

ಜಿಲ್ಲಾ ಜಾನಪದ ಪರಿಷತ್ ನಿರ್ದೇಶಕ ಪಿ.ಆರ್.ರಾಜೇಶ್, ವೀಣಾಕ್ಷಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪದಾಧಿಕಾರಿಗಳ ಆಯ್ಕೆ

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ಅನಿಲ್ ಎಚ್.ಟಿ, ಪ್ರಧಾನ ಕಾರ್ಯದರ್ಶಿ ಯಾಗಿ ಎಂ.ಸಿ. ರವಿ, ಖಜಾಂಚಿ ಯಾಗಿ ಅಂಬೆಕಲ್ ನವೀನ್ ಕುಶಾಲಪ್ಪ ಮರು ನೇಮಕವಾಗಿದ್ದಾರೆ.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಉಪಾಧ್ಯಕ್ಷರಾಗಿ ರವಿ ಪಿ., ಪ್ರತಿಮಾ ಹರೀಶ್ ರೈ, ಜಂಟಿ ಕಾರ್ಯದರ್ಶಿಯಾಗಿ ಎಂ. ಧನಂಜಯ್, ಸಂಘಟನಾ ಕಾರ್ಯದರ್ಶಿಯಾಗಿ ಚೋಕಿರ ಅನಿತಾ ದೇವಯ್ಯ, ಪಿ.ವಿ. ಪ್ರಭಾಕರ್, ನಾಜಿಯಾ, .ಯೋಜನಾ ಸಮಿತಿ ನಿರ್ದೇಶಕರಾಗಿ ಕೌಸರ್, ಅಕ್ಷತಾ ಶೆಟ್ಟಿ, ಪಿ.ಜಿ.ಸುಕುಮಾರ್, ಕಲಾವಿದರ ಆಯ್ಕೆ ಸಮಿತಿಗೆ ಪೂರ್ಣಿಮಾ ಜೋಷಿ, ಭಾರತಿ ಕಡಗದಾಳು, ಅನುಷಾ, ಶೀಲಾ ಮತ್ತು ಶಿಲ್ಪ ವೀಣಾ ಹೊಳ್ಳ ಆಯ್ಕೆಯಾಗಿದ್ದಾರೆ.

ಜಾನಪದ ಯುವ ಬಳಗ

ಹೊಸದಾಗಿ ಅಸ್ತಿತ್ವಕ್ಕೆ ಬಂದ ಮಡಿಕೇರಿ ತಾಲೂಕು ಜಾನಪದ ಯುವ ಬಳಗದ ಸಂಚಾಲಕರಾಗಿ ಗಾಯತ್ರಿ ಚೆರಿಯಮನೆ, ಶ್ರೀರಕ್ಷಾ ಪ್ರಭಾಕರ್, ಸಪ್ನಾ ಮಧುಕರ್ ಶೇಟ್, ಸ್ನೇಹಾ ಮಧುಕರ್ ಶೇಟ್, ಸುಪ್ರಿತಾ, ಯಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ. ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯಾದ್ಯಂತಲಿನ ಯುವ ಕಲಾವಿದರಿಗೂ ಈ ಬಳಗದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.