ನಾಪೋಕ್ಲು, ಫೆ. ೧೩: ರಸ್ತೆ ಕಾಮಗಾರಿ ಆರಂಭಿಸದಿರುವುದರಿAದ ತಾ. ೧೫ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಕಕ್ಕಬ್ಬೆ ಪಟ್ಟಣದಲ್ಲಿ ರಸ್ತೆ ತಡೆ ಹಾಗೂ ಧರಣಿ ಸತ್ಯಾಗ್ರಹ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಅಭಿಯಂತರರು ಆಗಮಿಸುವವರೆಗೆ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾಪೋಕ್ಲು ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ವೈ. ಹಂಸ ಕುಂಜಿಲ ಪರಂಬು ಬಾಣೆಯಿಂದ ಪಯ್ಯನರಿ ದರ್ಗಾದ ಮೂಲಕ ಕಕ್ಕಬ್ಬೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪುರರಾರಂಭಿಸ ಬೇಕು ಎಂದು ಒತ್ತಾಯಿಸಿ ತಾರೀಕು ೨ ರಂದು ಕಕ್ಕಬ್ಬೆ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದಾಗ ಸ್ಥಳಕ್ಕೆ ಆಗಮಿಸಿದ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಮತ್ತು ನಾಪೋಕ್ಲು ಪೊಲೀಸ್ ಠಾಣಾಧಿಕಾರಿಯವರ ಸಮ್ಮುಖದಲ್ಲಿ ಗುತ್ತಿಗೆದಾರರಾದ ವೇಣುರವರು ಈ ಕಾಮಗಾರಿಯನ್ನು ಒಂದು ವಾರದೊಳಗೆ ಮುಗಿಸಿಕೊಡುವುದಾಗಿ ಕಾಮಗಾರಿಯನ್ನು ಪುರರಾರಂಭಿಸ ಬೇಕು ಎಂದು ಒತ್ತಾಯಿಸಿ ತಾರೀಕು ೨ ರಂದು ಕಕ್ಕಬ್ಬೆ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದಾಗ ಸ್ಥಳಕ್ಕೆ ಆಗಮಿಸಿದ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಮತ್ತು ನಾಪೋಕ್ಲು ಪೊಲೀಸ್ ಠಾಣಾಧಿಕಾರಿಯವರ ಸಮ್ಮುಖದಲ್ಲಿ ಗುತ್ತಿಗೆದಾರರಾದ ವೇಣುರವರು ಈ ಕಾಮಗಾರಿಯನ್ನು ಒಂದು ವಾರದೊಳಗೆ ಮುಗಿಸಿಕೊಡುವುದಾಗಿ ತಡೆಯನ್ನು ನಡೆಸಿ ಸತ್ಯಾಗೃಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಕುಂಜಿಲ ಪೈನರಿ ಮುಸ್ಲಿಂ ಜಮಅತ್ ಅಧ್ಯಕ್ಷ ಸೌಕತ್ತಾಲಿ, ಉಪಾಧ್ಯಕ್ಷ ಇಬ್ರಾಹಿಂ (ಇಬು), ಅಬುಬಕ್ಕರ್ ಸಫಾ, ಮಹಮ್ಮದ್ ಹಾಜಿ ಮಾಜಿ ಅಧ್ಯಕ್ಷರು, ಕುಂಡAಡ ರಜಾಕ್ ಗ್ರಾ.ಪಂ. ಸದಸ್ಯ ಶಹಿದ್, ಜಮಅತ್ ಕಾರ್ಯದರ್ಶಿ ಮತ್ತಿತರರು ಇದ್ದರು.