ಬೆಂಗಳೂರು, ಫೆ. ೧೨: ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ದ್ವಿತೀಯ ಪಿ.ಯು ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಮೇ.೨೪ ರಂದು ದ್ವಿತೀಯ ಪಿ.ಯು ಅಂತಿಮ ಪರೀಕ್ಷೆ ಪ್ರಾರಂಭಗೊಳ್ಳಲಿದ್ದು ಜೂನ್ ೧೬ ರವರೆಗೆ ನಡೆಯಲಿದೆ. ಪಿ.ಯು ಪರೀಕ್ಷೆ ವೇಳಾಪಟ್ಟಿ ಪ್ರಕಟ(ಮೊದಲ ಪುಟದಿಂದ) ಕಳೆದ ವರ್ಷ ಮಾರ್ಚ್ ತಿಂಗಳಲ್ಲೇ ನಡೆದ ಪರೀಕ್ಷೆ, ಈ ವರ್ಷ ಕೋವಿಡ್ ಹಿನ್ನೆಲೆ ಕಾಲೇಜು ಆರಂಭದ ದಿನಾಂಕವೂ ಮುಂದೂಡಲ್ಪಟ್ಟ ಕಾರಣ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ.