ಪ್ರವಾಸಿಗರಿಂದ ವರದಿ ಪಡೆಯಲು ಜಿಲ್ಲಾಧಿಕಾರಿ ಮನವಿ ಮಡಿಕೇರಿ, ಫೆ. ೧೨: ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಆಗಮಿಸಿ ರೆಸಾರ್ಟ್ ಹಾಗೂ ಹೊಟೇಲ್‌ಗಳಲ್ಲಿ ತಂಗಲಿಚ್ಚಿಸುವವರಿAದ, ೭೨ ಗಂಟೆಗಳ ಮುಂಚಿತವಾಗಿ ಕೋವಿಡ್-೧೯ ಪರೀಕ್ಷೆ ಮಾಡಿಸಿರುವ ವರದಿ ಪಡೆಯಬೇಕು ಎಂದು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್‌ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದ್ದಾರೆ. ಕೇರಳ ರಾಜ್ಯದಲ್ಲಿ ಕೋವಿಡ್-೧೯ ವೈರಾಣು ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿದ್ದು ದಿನಕ್ಕೆ ಸುಮಾರು ೫,೦೦೦ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟನಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇರಳ ರಾಜ್ಯಕ್ಕೆ ನೆರೆಯ ಜಿಲ್ಲೆ ಯಾಗಿರುವ ಕೊಡಗಿಗೆ ಆಗಮಿಸುವ ಕೇರಳಿಗರ ಮೇಲೆ ನಿಗಾ ಇಡುವ ಅಗತ್ಯವಿದ್ದು, ಈ ಕ್ರಮವನ್ನು ಜಿಲ್ಲಾಧಿಕಾರಿ ತೆಗೆದುಕೊಂಡಿದ್ದಾರೆ. ಹೊಟೇಲ್ ಹಾಗೂ ರೆಸಾರ್ಟ್ಗಳಲ್ಲಿ ತಂಗಿರುವ ಎಲ್ಲಾ ಕೇರಳಿಗರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆಯೂ ಮನವಿಯಲ್ಲಿ ತಿಳಿಸಲಾಗಿದೆ.