ವೀರಾಜಪೇಟೆ,ಫೆ.೧೨; ಕಡು ಬಡವರಿಗೂ., ಪ್ರತಿಯೋರ್ವರಿಗೂ ಸೂರನ್ನೊದಗಿಸುವ ಸದುದ್ದೇಶದೊಂದಿಗೆ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ,. ಇಂತಹ ಯೋಜನೆಗಳು ಫಲಪ್ರದವಾಗಲು ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರಮುಖವಾಗಿರುತ್ತದೆ. ಆದರೆ ಒಂದಿಷ್ಟು ನಿರ್ಲಕ್ಷö್ಯ ತಾಳಿದರೆ ಬಡವರು ಯೋಜನೆಗಳಿಂದ ವಮಚಿತರಾಗಿ ಸೊರಗಬೇಕಾಗುತ್ತದೆ. ಇದಕ್ಕೊಂದು ಸ್ಪಷ್ಟ ನಿರ್ದೇಶನದಂತಿದೆ ಬಾರಿಕಾಡು ವಸತಿ ಯೋಜನೆ.ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದ ಬಾರಿಕಾಡು ಎಂಬಲ್ಲಿ

(ಮೊದಲ ಪುಟದಿಂದ) ನಿವೇಶನ ರಹಿತ ೧೨೯ ಮಂದಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿ ಕೊಡುವ ಸಲುವಾಗಿ ನಿವೇಶನ ಗುರುತಿಸಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಮೂಲಕ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿತ್ತು. ಆದರೆ., ವರ್ಷ ಮೂರು ಕಳೆದರೂ ಮನೆಗಳು ಮಾತ್ರ ಮೇಲೇಳುವಂತೆ ಕಾಣುತ್ತಿಲ್ಲ.ಕೆದಮುಳ್ಳೂರು ಪಂಚಾಯ್ತಿ ವ್ಯಾಪ್ತಿಯ ೭೧ ಹಾಗೂ ಕುಟ್ಟ, ಬಾಳೆಲೆ, ಶ್ರೀಮಂಗಲ, ಹುದಿಕೇರಿ ಕಡೆಗಳಿಂದ ಬಂದಿರುವ ೫೮ ಕುಟುಂಗಳು ಸೇರಿದಂತೆ ೧೨೯ ಮಂದಿ ಬಾರಿಕಾಡುವಿನ ಸ.ನಂ.೩೭೦/೧ರಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಮಾಡಿ ಕೊಂಡಿದ್ದಾರೆ. ಇವರುಗಳಿಗೆ ಅದೇ ಜಾಗದಲ್ಲಿ ಮನೆ ನಿರ್ಮಿಸುವ ಸಲುವಾಗಿ ೭ ಎಕರೆ ಜಾಗವನ್ನು ಗುರುತಿಸಿ ಐಟಿಡಿಪಿ ಇಲಾಖೆಗೆ ಪಹಣಿ ಪತ್ರ ಕೂಡ ಮಾಡಿಕೊಡಲಾಗಿದೆ. ಪ್ರತಿ ಮನೆಗೆ (ಮೊದಲ ಪುಟದಿಂದ) ನಿವೇಶನ ರಹಿತ ೧೨೯ ಮಂದಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿ ಕೊಡುವ ಸಲುವಾಗಿ ನಿವೇಶನ ಗುರುತಿಸಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಮೂಲಕ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿತ್ತು. ಆದರೆ., ವರ್ಷ ಮೂರು ಕಳೆದರೂ ಮನೆಗಳು ಮಾತ್ರ ಮೇಲೇಳುವಂತೆ ಕಾಣುತ್ತಿಲ್ಲ.

ಕೆದಮುಳ್ಳೂರು ಪಂಚಾಯ್ತಿ ವ್ಯಾಪ್ತಿಯ ೭೧ ಹಾಗೂ ಕುಟ್ಟ, ಬಾಳೆಲೆ, ಶ್ರೀಮಂಗಲ, ಹುದಿಕೇರಿ ಕಡೆಗಳಿಂದ ಬಂದಿರುವ ೫೮ ಕುಟುಂಗಳು ಸೇರಿದಂತೆ ೧೨೯ ಮಂದಿ ಬಾರಿಕಾಡುವಿನ ಸ.ನಂ.೩೭೦/೧ರಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಮಾಡಿ ಕೊಂಡಿದ್ದಾರೆ. ಇವರುಗಳಿಗೆ ಅದೇ ಜಾಗದಲ್ಲಿ ಮನೆ ನಿರ್ಮಿಸುವ ಸಲುವಾಗಿ ೭ ಎಕರೆ ಜಾಗವನ್ನು ಗುರುತಿಸಿ ಐಟಿಡಿಪಿ ಇಲಾಖೆಗೆ ಪಹಣಿ ಪತ್ರ ಕೂಡ ಮಾಡಿಕೊಡಲಾಗಿದೆ. ಪ್ರತಿ ಮನೆಗೆ ಕೊರೆದ ಕೊಳವೆ ಬಾವಿ ನೀರನ್ನು ಅವಲಂಭಿಸಿದ್ದು, ಅದೂ ಕೂಡ ಕಂದು ಬಣ್ಣದಿಂದ ಕೂಡಿದೆ’ ಎಂದು ಶ್ರೀಮಂಗಲದಿAದ ಬಂದು ಗುಡಿಸಲು ಕಟ್ಟಿಕೊಂಡಿರುವ ಸರಸು ಹೇಳುತ್ತಾರೆ. ‘ಸರಕಾರದಿಂದ ಪರಿಶಿಷ್ಟ ಪಂಗಡಕ್ಕೆ ನೀಡುವ ಅಕ್ಕಿ, ಮೊಟ್ಟೆ, ಕಾಳು ಎಣ್ಣೆ ಮುಂತಾದುವುಗಳನ್ನು ತಂದು ಕೊಡುತ್ತಾರೆ. ಆದರೆ, ಪಡಿತರ ಚೀಟಿಗೆ ನೀಡುವ ಪಡಿತರಕ್ಕಾಗಿ ನಾವು ಮೊದಲು ಇದ್ದ ಊರಿಗೆ ಹೋಗಬೇಕಾಗಿದೆ’ ಎಂದು ಕುಟ್ಟದ ಬೊಳ್ಳಚ್ಚಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘ನಮಗೆ ನಿವೇಶನದ ಹಕ್ಕು ಪತ್ರಗಳು ಸಿಗದ ಕಾರಣ ಪಂಚಾಯಿತಿಯಿAದ ಯಾವದೇ ದಾಖಲೆಗಳು ಸಿಗುತ್ತಿಲ್ಲ, ಸೂರಿನ ಆಸೆಗೆ ನಾವು ಇದ್ದ ಸ್ಥಳದಿಂದ ಬಿಟ್ಟು ಬಂದೆವು, ಇದೀಗ ಅನಾಥ ಭಾವ ಮೂಡಿದೆ’ ಎಂದು ಬಾಳೆಲೆಯಿಂದ ಬಂದಿರುವ ರಾಜಪ್ಪ ಹಾಗೂ ಬೋಜ ನೊಂದು ನುಡಿಯುತ್ತಾರೆ.

ತುಕ್ಕು ಹಿಡಿದ ಸಾಮಗ್ರಿಗಳು

ಮನೆಗಳನ್ನು ನಿಮಿಸಲು ಮೂರು ವರ್ಷದ ಹಿಂದೆ ತಂದು ಹಾಕಲಾಗಿರುವ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದು ಗುಣಮಟ್ಟ ಕಳೆದುಕೊಂಡಿವೆ. ಮನೆ ನಿರ್ಮಾಣ ಮಾಡುವ ಕೆಲಸಗಾರರಿಗೆ ತಂಗಲು ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳ ಹೊದಿಕೆಗಳೆಲ್ಲ ಹಾರಿ ಹೋಗಿ ಅಸ್ಥಿಪಂಜರದAತೆ ಗೋಚರಿಸುತ್ತಿವೆ. ಮನೆ ನಿರ್ಮಾಣಕ್ಕೆ ಸಮತಟ್ಟು ಮಾಡಿರುವ ಜಾಗದಲ್ಲಿ ಮತ್ತೆ ಗಿಡ, ಗಂಟಿಗಳು ಬೆಳೆದು ಕಾಡು ಪ್ರದೇಶವಾಗಿ ಮಾರ್ಪಾಟಾಗಿದೆ.

ರಸ್ತೆಗೆ ಹಾನಿ

ಈ ಪ್ರದೇಶದಲ್ಲಿ ಈಗಾಗಲೇ ೧೦ ಮಾದರಿ ಮನೆಗಳು ಶೇ.೮೦ರಷ್ಟು ಪೂರ್ಣಗೊಂಡಿದ್ದು, ಸಾಮಗ್ರಿಗಳನ್ನು ಸಾಗಿಸುವ ಸಂದರ್ಬದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ಮಾರ್ಗವಾಗಿ ಸಂಚರಿಸುವ ನಾಯಮಂಡ, ಪುದಿಯನೆರವನ, ಅಡ್ಕಡ, ಮೇದುರ, ಪಟ್ಟಡ ಕುಟುಂಬ ದವರಿಗೆ ತೊಂದರೆಯಾಗುತ್ತಿದೆ. ಕಾಫಿ ಸಾಗಾಟ ಮಾಡಲು ಕಷ್ಟವಾಗುತ್ತಿದೆ. ರಸ್ತೆ ಸರಿಪಡಿಸದಿದ್ದಲ್ಲಿ ಮುಂದಕ್ಕೆ ಸಾಮಗ್ರಿಗಳನ್ನು ಸಾಗಾಟ ಮಾಡುವ ಸಂದರ್ಭ ತಡೆ ಒಡ್ಡುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕಾದು ನೋಡುವ ತೀರ್ಮಾನ

‘ಮುಂದಿನ ವಾರದೊಳಗೆ ಕಾಮಗಾರಿ ಆರಂಭಿಸಲಾಗುವದೆAದು ಅಧಿಕಾರಿಗಳು ಹೇಳಿದ್ದಾರೆ, ಮೂರು ವರ್ಷಗಳಿಂದ ಕಾದಿದ್ದೇವೆ, ಇನ್ನೂ ಒಂದು ವಾರ ಕಾದು ನೋಡುತ್ತೇವೆ. ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂಬದು ನಿವೇಶನ ರಹಿತರ ತೀರ್ಮಾನವಾಗಿದೆ.