ಸದಾಶಿವ ಸ್ವಾಮೀಜಿ

ಕುಶಾಲನಗರ, ಫೆ. ೧೩: ದಾಸ ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ದೃಷ್ಠಿಕೋನವಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು, ಕುಶಾಲನಗರ ತಾಲೂಕು ಘಟಕ ಮತ್ತು ಕುಶಾಲನಗರ ಮಹಿಳಾ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ, ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಎಂಬುದು ಧರ್ಮ, ಜಾತಿ, ಲಿಂಗ ಬೇಧವನ್ನು ಮೀರಿದ್ದಾಗಿದೆ. ದಾಸರು, ಶರಣರು ತಮ್ಮ ಕೀರ್ತನೆಗಳು, ವಚನಗಳು, ಜೀವನದ ಮುಖಾಂತರ ಜೀವನದ ಮೌಲ್ಯವನ್ನು ತಿಳಿಸಿಕೊಟ್ಟಿದ್ದು ಪ್ರತಿಯೊಬ್ಬರು ಜೀವನ ಮೌಲ್ಯವನ್ನು ಅರಿತು ನಡೆಯಬೇಕಿದೆ ಎಂದರು.

ಪ್ರತಿಯೊಬ್ಬರೂ ಕತ್ತಲಲ್ಲಿ ಬೆಳಕನ್ನು ಆಶ್ರಯದಲ್ಲಿ, ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಎಂಬುದು ಧರ್ಮ, ಜಾತಿ, ಲಿಂಗ ಬೇಧವನ್ನು ಮೀರಿದ್ದಾಗಿದೆ. ದಾಸರು, ಶರಣರು ತಮ್ಮ ಕೀರ್ತನೆಗಳು, ವಚನಗಳು, ಜೀವನದ ಮುಖಾಂತರ ಜೀವನದ ಮೌಲ್ಯವನ್ನು ತಿಳಿಸಿಕೊಟ್ಟಿದ್ದು ಪ್ರತಿಯೊಬ್ಬರು ಜೀವನ ಮೌಲ್ಯವನ್ನು ಅರಿತು ನಡೆಯಬೇಕಿದೆ ಎಂದರು.

ಪ್ರತಿಯೊಬ್ಬರೂ ಕತ್ತಲಲ್ಲಿ ಬೆಳಕನ್ನು ಕುಶಾಲನಗರ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು. ಈ ಸಂದರ್ಭ ಮಹಿಳಾ ಭಜನಾ ಮಂಡಳಿಯ ಹಿರಿಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಜೀವನದಿ ಕಾವೇರಿಗೆ ವಿಶೇಷ ಆರತಿ ಬೆಳಗಲಾಯಿತು.

ಜಾನಪದ ಪರಿಷತ್ ತಾಲೂಕು ಘಟಕದ ಕಾರ್ಯಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಕಾರ್ಯದರ್ಶಿ ವಿನೋದ್, ವನಿತಾ ಚಂದ್ರಮೋಹನ್, ಬಿ.ಎಸ್. ಪರಮೇಶ್, ಭಜನಾ ಮಂಡಳಿ ಪ್ರಮುಖರಾದ ರಮಾ ವಿಜಯೇಂದ್ರ, ಪದ್ಮಾ ಪುರುಷೋತ್ತಮ್, ನದಿ ಜಾಗೃತಿ ಸಮಿತಿ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ, ಮಂಡೇಪAಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು. ಪರಿಷತ್ ಖಜಾಂಚಿ ಸುನಿತಾ ಲೋಕೇಶ್ ಸ್ವಾಗತಿಸಿ, ವಂದಿಸಿದರು.