ಗೋಣಿಕೊಪ್ಪಲು, ಫೆ. ೧೩: ದ. ಕೊಡಗಿನಲ್ಲಿ ಹುಲಿ,ಕಾಡಾನೆ,ಕರಡಿ ಹಾವಳಿಯಿಂದಾಗಿ ಇಲ್ಲಿನ ರೈತರು ತತ್ತರಿಸಿದ್ದು ಇದೀಗ ಈ ಸಾಲಿಗೆ ಮೊಸಳೆಯೊಂದು ಸೇರಿಕೊಂಡಿದೆ. ನಲ್ಲೂರು, ಕಿರುಗೂರುವಿನ ರೈತರಾದ ತೀತರಮಾಡ ರಾಜ ಎಂಬವರ ಗದ್ದೆಯ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಂಡುಬಂದಿದ್ದು ಇಲ್ಲಿಯ ನಾಗರಿಕರು ಆತಂಕಗೊAಡಿದ್ದಾರೆ. ಸುದ್ದಿ ತಿಳಿದ ಪೊನ್ನಂಪೇಟೆ ಹಾಗೂ ತಿತಿಮತಿ ವಲಯದ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು, ಆರ್‌ಆರ್‌ಟಿ ತಂಡ ಸ್ಥಳಕ್ಕೆ ದೌಡಾಯಿಸಿದ್ದು ಆತಂಕಕ್ಕೆ (ಮೊದಲ ಪುಟದಿಂದ) ಕಾರಣವಾಗಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ರೈತರಾದ ತೀತರಮಾಡ ರಾಜ ತಮ್ಮ ಕೆರೆಯಿಂದ ಕಾಫಿ ಗಿಡಕ್ಕೆ ನೀರನ್ನು ಹಾಯಿಸುತ್ತಿದ್ದ ಸಂದರ್ಭ ಕಾರ್ಮಿಕರು ಮೋಟರನ್ನು ವೀಕ್ಷಿಸಲು ಆಗಮಿಸಿದ ಸಂದರ್ಭ ಕೆರೆಯ ದಡದಲ್ಲಿ ಬೃಹತ್ ಗಾತ್ರದ ಮೊಸಳೆಯು ಗೋಚರಿಸಿದೆ. ಕಾರ್ಮಿಕರನ್ನು ಕಂಡ ಮೊಸಳೆಯು ಕೆರೆಯಲ್ಲಿ ದುಮುಕಿದೆ.ವಿಷಯವನ್ನು ಕಾರ್ಮಿಕರು ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಮಾಲೀಕರು ರೈತ ಸಂಘದ ಪದಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ.

ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆಯಲ್ಲಿ ಅಡಗಿದ್ದ ಮೊಸಳೆಯ ಸೆರೆಗೆ ಕ್ರಮ ವಹಿಸಿದ್ದಾರೆ. ಮಧ್ಯಾಹ್ನ ೧೨ ಗಂಟೆಯಿAದ ೪ ಗಂಟೆಯವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಕೆರೆಯಲ್ಲಿರುವ ನೀರನ್ನು ಮೋಟರ್ ಮೂಲಕ ಮೇಲೆತ್ತಿ ಕೆರೆಯ ನೀರನ್ನು ಖಾಲಿ ಗೊಳಿಸಿದ ನಂತರ ಮೊಸಳೆಯು ಕೆರೆಯಲ್ಲಿ ಅಡಗಿರುವುದನ್ನು ಪತ್ತೆಹಚ್ಚಿದ ಸಿಬ್ಬಂದಿಗಳು ಬಲೆಯ ಮೂಲಕ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕೆರೆಯ ಅನತಿ ದೂರದಲ್ಲಿ ಕೀರೆ ಹೊಳೆಯು ಹರಿಯುತ್ತಿದ್ದು ಹೊಳೆಯ ಮೂಲಕ ಮೊಸಳೆಯು ಆಗಮಿಸಿ ಕೆರೆಯಲ್ಲಿ ಆಶ್ರಯ ಪಡೆದಿರಬಹುದೆಂದು ಅಂದಾಜಿಸಲಾಗಿದೆ. ಮೊಸಳೆಯ ಕಾರ್ಯಾಚರಣೆಯ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ,ಚೊಟ್ಟೆಕಾಳಪಂಡ ಮನು, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ್ ಹುನಗುಂದ,ದಿವಾಕರ್,ಮುAತಾದವರು ಹಾಜರಿದ್ದರು. ಮೊಸಳೆ ಇರುವುದನ್ನು ಮನಗಂಡ ಗ್ರಾಮಸ್ಥರು ಕೆರೆಯ ಬಳಿ ಸೇರಿದ್ದರು.

-ಹೆಚ್.ಕೆ. ಜಗದೀಶ್