ಗೋಣಿಕೊಪ್ಪಲು, ಫೆ. ೧೩: ಜಾತಿ, ಮತ, ಪಕ್ಷ ಭೇದ ಮರೆತು ಗ್ರಾಮಸ್ಥರು ಊರಿನ ಅಭಿವೃದ್ಧಿಗೆ ದುಡಿಯಲು ವಿಶೇಷ ಯೋಜನೆ ರೂಪಿಸಿದರು. ಸದಾ ರಾಜಕೀಯ ಗುಂಗಿನಲ್ಲಿರುವ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಆಹ್ವಾನಿಸುವ ಮೂಲಕ ವಿಶೇಷ ಸಭೆ ನಡೆಸಿ ಗಮನ ಸೆಳೆದರು. ಗ್ರಾಮದ ಅಭಿವೃದ್ಧಿಗೆ ಯಾವುದೇ ರಾಜಕೀಯ ನುಸುಳದಂತೆ ಎಚ್ಚರವಹಿಸಬೇಕು. ಈ ಗ್ರಾಮವು ಜಿಲ್ಲೆಯಲ್ಲಿಯೇ ಮಾದರಿ ಗೋಣಿಕೊಪ್ಪಲು, ಫೆ. ೧೩: ಜಾತಿ, ಮತ, ಪಕ್ಷ ಭೇದ ಮರೆತು ಗ್ರಾಮಸ್ಥರು ಊರಿನ ಅಭಿವೃದ್ಧಿಗೆ ದುಡಿಯಲು ವಿಶೇಷ ಯೋಜನೆ ರೂಪಿಸಿದರು. ಸದಾ ರಾಜಕೀಯ ಗುಂಗಿನಲ್ಲಿರುವ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಆಹ್ವಾನಿಸುವ ಮೂಲಕ ವಿಶೇಷ ಸಭೆ ನಡೆಸಿ ಗಮನ ಸೆಳೆದರು. ಗ್ರಾಮದ ಅಭಿವೃದ್ಧಿಗೆ ಯಾವುದೇ ರಾಜಕೀಯ ನುಸುಳದಂತೆ ಎಚ್ಚರವಹಿಸಬೇಕು. ಈ ಗ್ರಾಮವು ಜಿಲ್ಲೆಯಲ್ಲಿಯೇ ಮಾದರಿ ಇತ್ತೀಚೆಗೆ ಗ್ರಾಮ ಪಂಚಾಯ್ತಿಯಲ್ಲಿ ವಿವಿಧ ಪಕ್ಷದ ಬೆಂಬಲದೊAದಿಗೆ ಸ್ಪರ್ಧಿಸಿದ್ದ ಸದಸ್ಯರು ಆಯ್ಕೆಯಾಗಿ ಬಂದ ನಂತರ ಗ್ರಾಮದ ಹಿತ ದೃಷ್ಟಿಯಿಂದ ಅಮ್ಮತ್ತಿ ಕಾರ್ಮಾಡುವಿನ ಸಂಘ ಪರಿವಾರ, ಗ್ರಾಮದ ಹಿರಿಯರು,ವಿವಿಧ ಪಕ್ಷದ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಒಟ್ಟಾಗಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಸಭೆಗೆ ಆಹ್ವಾನಿಸಿ ಮುಂದಿನ ದಿನದಲ್ಲಿ ಗ್ರಾಮದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿದರು. ಗ್ರಾಮದ ಹಿರಿಯ ಮುಖಂಡ ಮಾಚಿಮಂಡ ಸುವಿನ್ ಗಣಪತಿ ಮುಂದಾಳತ್ವದಲ್ಲಿ ಸೇರಿದ್ದ ವಿಶೇಷ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

(ಮೊದಲ ಪುಟದಿಂದ) ಸಭೆ ಆರಂಭದಲ್ಲಿ ಮಾತನಾಡಿದ ಸಂಘ ಪರಿವಾರದ ಹಿರಿಯರಾದ ಕುಟ್ಟಂಡ ಪ್ರಿನ್ಸ್ಗಣಪತಿ ಗ್ರಾಮದ ಅಭಿವೃದ್ಧಿ ಹಿತದೃಷ್ಟಿಯಿಂದ ರಾಜಕೀಯ ಸಲ್ಲದು. ಅವಶ್ಯವಿರುವ ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು. ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾದಲ್ಲಿ ಜನಪ್ರತಿನಿಧಿಗಳು ಗ್ರಾಮದ ಹಿರಿಯರಿಗೆ ವಿಷಯ ತಿಳಿಸಬೇಕು. ಸರ್ಕಾರದ ಅನುದಾನಗಳು ಪಾರದರ್ಶಕವಾಗಿ ವಿನಿಯೋಗವಾಗಬೇಕು. ಸದಸ್ಯರು ಕಮಿಷನ್ ದಂಧೆಯಿAದ ಆರಂಭದಿAದಲೇ ದೂರ ಸರಿಯಬೇಕು. ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳು ತಮ್ಮ ವಾರ್ಡ್ಗೆ ಆಧ್ಯತೆ ಮೇರೆ ಕೆಲಸ ನಿರ್ವಹಿಸಿ ಮತದಾರರಿಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.

ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ ಚುನಾವಣೆ ಸಂದರ್ಭ ಮತ ಪಡೆಯಲು ಅಭ್ಯರ್ಥಿಗಳು ಮನೆ ಮನೆಗೆ ಹಲವು ಬಾರಿ ತೆರಳಿದ್ದೀರ,ಪಂಚಾಯಿತಿಯಲ್ಲಿ ನಡೆಯುವ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗೂ ಮನೆ ಮನೆಗೆ ತೆರಳಿ ಗ್ರಾಮಸ್ಥರನ್ನು ಸಭೆಗೆ ಆಹ್ವಾನಿಸಬೇಕು. ಗ್ರಾಮಸ್ಥರ ಸಮ್ಮುಖದಲ್ಲಿ ಪಾರದರ್ಶಕವಾಗಿ ಯೋಜನೆಗಳು ಜನರಿಗೆ ತಿಳಿಸಬೇಕು. ಶುಚಿತ್ವಕ್ಕೆ ಆಧ್ಯತೆ ನೀಡುವ ಮೂಲಕ ಪಂಚಾಯಿತಿಯನ್ನು ಜಿಲ್ಲೆಯಲ್ಲಿಯೇ ಮಾದರಿ ಪಂಚಾಯಿತಿಯನ್ನಾಗಿ ಮಾಡಬೇಕು. ಯೋಜನೆಗಳನ್ನು ತಯಾರಿಸುವ ವೇಳೆ ಅನುಭವಿ ಜನಪ್ರತಿನಿಧಿಗಳ ಸಲಹೆ ಪಡೆದು ಕಾರ್ಯನಿರ್ವಹಿಸಬೇಕು. ಪಂಚಾಯ್ತಿ ಸದಸ್ಯರ ಉತ್ತಮ ಕೆಲಸಕ್ಕೆ ಗ್ರಾಮಸ್ಥರ ಸಹಕಾರ ಸದಾ ಇದೆ ಎಂದು ಕಿವಿ ಮಾತು ಹೇಳಿದರು.

ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಮಾತನಾಡಿ ಅಮ್ಮತ್ತಿ ಕಾರ್ಮಾಡುವಿಗೆ ಜಿಲ್ಲೆಯಲ್ಲಿ ವಿಶೇಷ ಗೌರವವಿದ್ದು ಇದನ್ನು ಕಾಪಾಡುವುದು ಪಂಚಾಯಿತಿ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಕೇವಲ ರಾಜಕೀಯವನ್ನೇ ಮುಂದಿಟ್ಟು ಕೆಲಸ ನಿರ್ವಹಿಸುವುದು ಸರಿಯಲ್ಲ ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಸೀಮಿತವಾಗಿರಲಿ ನಂತರ ಒಂದು ಕುಟುಂಬದ ಸದಸ್ಯರಂತೆ ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು. ಹಿರಿಯರಾದ ಮಾಚಿಮಂಡ ವಸಂತ್, ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾಚಿಮಂಡ ಮಧುಮಾದಪ್ಪ, ಕಾವಡಿಚಂಡ ಗಣಪತಿ, ಮಾಚಿಮಂಡ ಚಿಣ್ಣಪ್ಪ, ಮುಂತಾದವರು ಸಭೆಯಲ್ಲಿ ತಮ್ಮ ಅನುಭವಗಳನ್ನು ವಿವರಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಂಞAಡ ನಿರುನಾಣಯ್ಯ, ಉಪಾಧ್ಯಕ್ಷ ಮುಕ್ಕಾಟೀರ ಬೋಪಣ್ಣ, ಪಂಚಾಯ್ತಿಯ ಹಿರಿಯ ಸದಸ್ಯರಾದ ಕೆ.ಎಂ. ಹಂಸ, ಸಮೀರ, ರತ್ನ, ಸಲೀನ, ಮಾತನಾಡಿದರು. ಹಿರಿಯರ ಅನುಭವವನ್ನು ಪಡೆದುಕೊಂಡು ಪಂಚಾಯಿತಿಯನ್ನು ಮಾದರಿ ಪಂಚಾಯ್ತಿಯನ್ನಾಗಿ ಮಾಡುವ ಹಾಗೂ ಶುಚಿತ್ವದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುವುದು. ಪಂಚಾಯಿತಿಗೆ ಆಗಮಿಸುವ ಗ್ರಾಮಸ್ಥರನ್ನು ಗೌರವದಿಂದ ಕಾಣಲಾಗುವುದೆಂದು ಉಪಾಧ್ಯಕ್ಷ ಮುಕ್ಕಾಟೀರ ಬೋಪಣ್ಣ ಸಭೆಗೆ ತಿಳಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು, ಸ್ಥಳೀಯರಿಗೆ ಗ್ರಾಮ ಪಂಚಾಯ್ತಿತಿಯ ಕೆಲಸ ಕಾಮಗಾರಿಗಳನ್ನು ನೀಡುವುದು, ವಿದ್ಯುತ್ ದೀಪಗಳನ್ನು ಅಳವಡಿಸುವುದು. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮೊದಲ ಆಧ್ಯತೆಯಾಗಿ ಕೆಲಸ ನಿರ್ವಹಿಸುವುದಾಗಿ ಅಧ್ಯಕ್ಷ ನಿರು ನಾಣಯ್ಯ ಹೇಳಿದರು. ರಾಧಾಕೃಷ್ಣ, ಚೇತನ್, ಜಯ ಉತ್ತಪ್ಪ, ಕಾವಡಿಚಂಡ ಬೋಪಣ್ಣ, ದೀಪಕ್, ಮುಂತಾದವರು ಪಾಲ್ಗೊಂಡಿದ್ದರು.

-ಹೆಚ್.ಕೆ.ಜಗದೀಶ್