ಪಟಾಕಿ ಘಟಕದಲ್ಲಿ ಸ್ಫೋಟ : ೧೧ ಮಂದಿ ಸಾವು

ವಿರುಧುನಗರ, ಫೆ, ೧೨: ತಮಿಳುನಾಡಿನಲ್ಲಿ ಪಟಾಕಿ ಘಟಕದಲ್ಲಿ ಸ್ಫೋಟಗೊಂಡಿದ್ದು ೧೧ ಮಂದಿ ಸಾವನ್ನಪ್ಪಿದ್ದರೆ ೨೨ ಮಂದಿಗೆ ಗಾಯಗಳಾಗಿವೆ. ತಾ. ೧೨ ರಂದು ಮಧ್ಯಾಹ್ನ ಈ ಬಗ್ಗೆ ವೆಂಬಕೊಟೈನ ಕೊಟೈಪಾಟಿಯಲ್ಲಿರುವ ಅಚಂಕುಲA ಈ ಅವಘಡ ನಡೆದಿದ್ದು, ಮೃತಪಟ್ಟವರ ೧೧ ಮಂದಿಯ ಪೈಕಿ ೯ ಮೃತದೇಹಗಳನ್ನು ಹೊರತೆಗೆಯ ಲಾಗಿದೆ. ಇಬ್ಬರು ಸಟ್ಟೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ಗುರುತು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆ ವರದಿಯಾದ ಬೆನ್ನಲ್ಲೇ ಮೂರು ಅಗ್ನಿಶಾಮಕ ವಾಹನಗ ಳೊಂದಿಗೆ, ೩೦ ರಕ್ಷಣಾ ಸಿಬ್ಬಂದಿಗಳು ಹಾಗೂ ಐವರು ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಫೋಟದಲ್ಲಿ ೧೦ ಕೊಠಡಿಗಳು ನಾಶವಾಗಿದ್ದು, ಘಟನೆ ನಡೆದಾಗ ಕನಿಷ್ಟ ೫೦ ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೇಶನ್ ಹೇಳಿದ್ದಾರೆ, ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಮೂಲಗಳ ಪ್ರಕಾರ ಯುನಿಟ್‌ನ್ನು ಹಲವು ಮಂದಿ ಗುತ್ತಿಗೆದಾರರಿಗೆ ಅಕ್ರಮವಾಗಿ ನೀಡಲಾಗಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ದಿನೇಶ್ ತ್ರಿವೇದಿ

ನವದೆಹಲಿ, ಫೆ, ೧೨: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿನೇಶ್ ತ್ರಿವೇದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ರಾಜ್ಯಸಭೆಯಲ್ಲಿ ಪ್ರಕಟಿಸಿದ್ದಾರೆ. ರಾಜ್ಯಸಭೆಯಲ್ಲಿ ಇದು ನನ್ನ ಕೊನೆಯ ಭಾಷಣ ಎಂದ ದಿನೇಶ್ ತ್ರಿವೇದಿ ಅವರು, ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರವೇ ತಾವು ಟಿಎಂಸಿ ತೊರೆಯಲು ಕಾರಣ ಎಂದು ಹೇಳಿದ್ದಾರೆ. ನಾವು ಇಲ್ಲಿ ಸದ್ದಿಲ್ಲದೆ ಸುಮ್ಮನೆ ಕುಳಿತು ಏನೂ ಮಾಡಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ. ಹೀಗಾಗಿ ಇಲ್ಲಿಂದ ರಾಜೀನಾಮೆ ನೀಡಿ ಬಂಗಾಳ ಭೂಮಿಗೆ ಹೋಗಿ ಜನರೊಂದಿಗೆ ಇರುವುದು ಉತ್ತಮ ಎಂದು ಅವರು ಸಂಸತ್ತಿನ ಮೇಲ್ಮನೆಯಲ್ಲಿ ಹೇಳಿದ್ದಾರೆ. ದೇಶದಲ್ಲಿ ಏನಾದರೂ ಸಂಭವಿಸಿದಾಗ ಜಗತ್ತು ಭಾರತವನ್ನು ನೋಡುತ್ತದೆ. ನಾನು ಹೇಳುತ್ತಿರುವುದು ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಬಗ್ಗೆ. ಆದರೆ ಇಲ್ಲಿ ಕುಳಿತು ನಾನು ಏನು ಮಾಡಬೇಕು ಎಂದು ಗೊಂದಲಕ್ಕೊಳಗಾಗಿದ್ದೇನೆ ಎಂದಿದ್ದಾರೆ.

ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ : ಸಿಎಂ ಯಡಿಯೂರಪ್ಪ

ಬೆಂಗಳೂರು, ಫೆ, ೧೨: ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಇಂತಹ ಅಪರಾಧಗಳನ್ನು ನಿಯಂತ್ರಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಬಲ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು. ಪೊಲೀಸರ ಮನೋಸ್ಥೆöÊರ್ಯವನ್ನು ಹೆಚ್ಚಿಸಿ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಪೊಲೀಸ್ ಗೃಹ-೨೦೨೦ ಯೋಜನೆಯಡಿ ೨೦೨೦ರ ಅಕ್ಟೋಬರ್ ಅಂತ್ಯಕ್ಕೆ ಒಟ್ಟು ೯,೮೨೦ ವಸತಿ ಗೃಹಗಳು ನಿರ್ಮಾಣಗೊಂಡಿವೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿ ಹಾಗೂ ಪರಿಹಾರ ಭತ್ಯೆಗಳ ಮಂಜೂರಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ಪೊಲೀಸ್ ಸಿಬ್ಬಂದಿಯ ಕುರಿತ ನಮ್ಮ ಕಾಳಜಿಯ ಪ್ರತೀಕವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಸೈಬರ್ ಎಕನಾಮಿಕ್ ಮತ್ತು ನಾರ್ಕೊಟಿಕ್ಸ್ ಪೊಲೀಸ್ ಠಾಣೆ, ಹೊಸ ಸಂಚಾರಿ ಪೊಲೀಸ್ ಠಾಣೆಗಳನ್ನು ಸೃಜಿಸಲಾಗಿದೆ. ಅಪರಾಧ ನಿಯಂತ್ರಣ, ಅಪರಾಧ ಪತ್ತೆಯಲ್ಲಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಸೈಬರ್ ಅಪರಾಧ, ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಜೊತೆಗೆ ಠಾಣೆಗೆ ದೂರು ನೀಡಲು ಬರುವ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಸಲಹೆ ನೀಡಿದರು.

ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಫೆ, ೧೨: ರಾಜ್ಯಸಭೆ ಸಂಸದ ಗುಲಾಮ್ ನಬಿ ಆಜಾದ್ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ತೆರವುಗೊಂಡಿರುವ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಖರ್ಗೆ ಅವರ ಹೆಸರನ್ನು ಕಳಿಸಿದ್ದು, ಇದೇ ಅಂತಿಮಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ೨೦೧೪ ರಿಂದ ೨೦೧೯ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ತಾ. ೧೫ ಕ್ಕೆ ಗುಲಾಂ ನಬಿ ಆಜಾದ್ ಅವರ ಅವಧಿ ಪೂರ್ಣಗೊಳ್ಳಲಿದ್ದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ತೆರವುಗೊಳ್ಳಲಿದೆ.

ರಕ್ಷಣಾ ಇಲಾಖೆಗೆ ತುಮಕೂರಿನಲ್ಲಿ ಭೂಮಿ ಮಂಜೂರು

ಕಾರವಾರ, ಫೆ. ೧೨: ಬೆಂಗಳೂರು ಬಳಿ ಸ್ವಲ್ಪ ಜಮೀನು ಪಡೆಯಲು ಹೆಣಗಾಡುತ್ತಿರುವ ರಕ್ಷಣಾ ಘಟಕವಾದ ಎಡಿಡಿ ಇಂಜಿನಿಯರಿAಗ್‌ಗೆ ಶೀಘ್ರದಲ್ಲೇ ತುಮಕೂರು ಮೆಷಿನ್ ಟೂಲ್ ಪಾರ್ಕ್ನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿಯನ್ನು ಹಂಚಿಕೆ ಮಾಡಿದೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಎಸ್‌ಐಡಿಸಿ) ೨೦೧೮ ರಿಂದ ಕೈಬಿಟ್ಟಿತು. ಭಾರತದ ಸ್ಥಳೀಯ ಯುದ್ಧ ವಿಮಾನ ತೇಜಸ್ ಎಂಕೆ ೧ ಎ ಮತ್ತು ಎಂಕೆ ೨ ಆವೃತ್ತಿಗಳನ್ನು ತಯಾರಿಸಲು ಒಂದು ಘಟಕವನ್ನು ಸ್ಥಾಪಿಸುವ ಸಂಸ್ಥೆಯ ಯೋಜನೆಗೆ ಕೆಐಎಡಿಬಿ ಗ್ರೀನ್ ಸಿಗ್ನಲ್ ನೀಡಿದೆ. ಏಕ ಗವಾಕ್ಷಿ ಯೋಜನೆ ಮೂಲಕ ಕರ್ನಾಟಕ ಉದ್ಯೋಗ ಮಿತ್ರ ಯೋಜನೆಯಡಿ ಭೂಮಿ ಮಂಜೂರಾತಿಗೆ ಕ್ಲಿಯರ್ ಮಾಡಲಾಗಿದೆ ಎಂದು ಉದ್ಯೋಗ ಮಿತ್ರ ಯೋಜನೆ ನಿರ್ದೇಶಕ ಎಲ್ ಗಿರೀಶ್ ತಿಳಿಸಿದ್ದಾರೆ. ಜರ್ಮನ್ ಮೂಲದ ಎಡಿಡಿ ಎಂಗ್ ಜಿಎಂಬಿಹೆಚ್‌ನ ಅಂಗಸAಸ್ಥೆಯಾಗಿದೆ. ಜರ್ಮನಿಯ ನಾರ್ಬರ್ಟ್ ಕ್ರೆಲ್ಲರ್ ಕಂಪನಿಯು ಭಾರತದಲ್ಲಿ ಯಶಸ್ಸಿನ ನಂತರ, ಯುದ್ಧ ವಿಮಾನಗಳನ್ನು ತಯಾರಿಸಲು ಕಟ್ಟಿಂಗ್ ಟೂಲ್ ಸಲ್ಯೂಷನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿತು.

ಕೋರ್ಟ್ ನಿರ್ದೇಶನದಂತೆ ಮನೆ ತೆರವು : ವಿ. ಸೋಮಣ್ಣ

ಬೆಂಗಳೂರು, ಫೆ. ೧೨: ಕೋರ್ಟ್ ನಿರ್ದೇಶನದಂತೆ ಅಗ್ರಹಾರ ದಾಸರಹಳ್ಳಿಯಲ್ಲಿ ಮನೆ ತೆರವು ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಅಗ್ರಹಾರ ದಾಸರಹಳ್ಳಿ ಮನೆ ತೆರವು ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ನಮ್ಮ ಅಧಿಕಾರ ಅವಧಿಯಲ್ಲಿ ಮನೆ ಕಟ್ಟಲಾಗಿತ್ತು. ಬಳಿಕ ೨೦ ಕುಟುಂಬ ಇಂದಿಗೂ ಅಲ್ಲಿ ಅಕ್ರಮವಾಗಿ ನೆಲೆಸಿವೆ. ಈ ಸಂಬAಧ ನಾನು ತಪಾಸಣೆ ಮಾಡಿ, ತೆರವು ಮಾಡಲು ಹೇಳಿದ್ದೆ. ಆಗ ಸಿದ್ದರಾಮಯ್ಯ ಅವರು ಕರೆ ಮಾಡಿ ತೆರವು ಮಾಡದಂತೆ ಹೇಳಿದರು. ಬಳಿಕ ಅವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಜನವರಿ ಒಳಗೆ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಮನೆಗಳನ್ನ ತೆರವು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆದರೆ, ಈ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ. ಹಲವು ವರ್ಷಗಳಿಂದ ಅವರು ಅಲ್ಲಿ ವಾಸಿಸುತ್ತಿದ್ದಾರೆ. ಇದೀಗ ಏಕಾಏಕಿ ತೆರವು ಮಾಡಿದರೆ? ಎಂದು ಯಾರೋ ಜನರನ್ನು ಕೂರಿಸಿ ಸೀನ್ ಕ್ರಿಯೇಟ್ ಮಾಡುತ್ತಿದ್ದಾರೆ, ಮಾಧ್ಯಮಗಳೂ ಕೂಡ ಅದನ್ನೇ ತೋರಿಸುತ್ತಿದವೆ. ಆದರೆ ವಾಸ್ತವವೇ ಬೇರೆ ಇದೆ ಎಂದಿದ್ದಾರೆ.