ಮೂರ್ನಾಡು, ಫೆ.೧೦: ಮೂರ್ನಾಡಿನ ನಾಪೋಕ್ಲು ರಸ್ತೆಯಲ್ಲಿರುವ ಚೌರೀರ ಮಂದಣ್ಣ ಅವರಿಗೆ ಸೇರಿದ ಲೈನ್‌ಮನೆಯಲ್ಲಿ ಎರಡು ಮನೆಗಳಿಗೆ ಬೆಂಕಿ ತಗುಲಿ ನಷ್ಟ ಉಂಟಾಗಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿವೆ. ಕಾರ್ಮಿಕರು ಉಟ್ಟ ಬಟ್ಟೆಯಲ್ಲೇ ಮರುಗುತ್ತಿದ್ದಾರೆ.