ಸೋಮವಾರಪೇಟೆ, ಫೆ. ೯: ಹಲವಷ್ಟು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ದೂರವಾಣಿ ಕರೆಯನ್ನು ಸ್ವೀಕರಿಸುವುದಿಲ್ಲ. ಯಾವುದೇ ಸಮಸ್ಯೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು.ಪಿಡಿಓಗಳು ಹೆಚ್ಚಿನ ದಿನಗಳಲ್ಲಿ ಕಚೇರಿಯಲ್ಲಿ ಇರುವುದಿಲ್ಲ. ಕಚೇರಿ ಯಲ್ಲಿ ವಿಚಾರಿಸಿದರೆ, ಅಧಿಕಾರಿಗಳ ಮೀಟಿಂಗ್ ಹೋಗಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ಸಭೆ ಸೂಚಿಸಿತು.ಪಟ್ಟಣದ ಕೆಲವು ವರ್ತಕರು ಹಾಗು ಮೀನುಮಾಂಸ ಮಾರುಕಟ್ಟೆಯ ವ್ಯಾಪಾರಸ್ಥರು ತ್ಯಾಜ್ಯಗಳನ್ನು ನೇರವಾಗಿ ಕಕ್ಕೆಹೊಳೆಗೆ ಸುರಿಯುತ್ತಿರು ವುದರಿಂದ ನೀರು ಮಲೀನಗೊಂಡಿದೆ. ಇದರ ಬಗ್ಗೆ ಸಂಬAಧಿಸಿದ ಗ್ರಾಮ ಸಬೂಬು ನೀಡುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ಸಭೆ ಸೂಚಿಸಿತು.ಪಟ್ಟಣದ ಕೆಲವು ವರ್ತಕರು ಹಾಗು ಮೀನುಮಾಂಸ ಮಾರುಕಟ್ಟೆಯ ವ್ಯಾಪಾರಸ್ಥರು ತ್ಯಾಜ್ಯಗಳನ್ನು ನೇರವಾಗಿ ಕಕ್ಕೆಹೊಳೆಗೆ ಸುರಿಯುತ್ತಿರು ವುದರಿಂದ ನೀರು ಮಲೀನಗೊಂಡಿದೆ. ಇದರ ಬಗ್ಗೆ ಸಂಬAಧಿಸಿದ ಗ್ರಾಮ ಗುಣಮಟ್ಟ ಖಾತ್ರಿಪಡಿಸುವ ಯಾವುದೇ ಸೌಲಭ್ಯಗಳಿಲ್ಲ ಎಂದು ಆರೋಪಿಸಿದರು.

ಈ ಮಾಂಸದAಗಡಿಗಳಲ್ಲಿ ವಯಸ್ಸಾದ ಮತ್ತು ರೋಗಪೀಡಿತ ಕುರಿಗಳನ್ನು ಮಾಂಸಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ನಿರಂತರವಾಗಿ ಬರುತ್ತಿವೆ. ಪಶುವೈದ್ಯ ಇಲಾಖೆ ವೈದ್ಯರು ಮತ್ತು ಪ.ಪಂನ ಆರೋಗ್ಯಾಧಿಕಾರಿ ಸಮ್ಮುಖದಲ್ಲಿ ಪ್ರತಿದಿನ ಪರೀಕ್ಷಿಸಿ, ಮುದ್ರೆ ಒತ್ತಿದ ನಂತರ ಮಾರಬೇಕೆಂಬ ನಿಯಮ ವಿದ್ದರೂ, ಕಳೆದ ಮೂರು ವರ್ಷ ಗಳಿಂದ ನಿಯಮ ಜಾರಿಯಲ್ಲಿ ಇಲ್ಲ ಎಂದು ಅಭಿಮನ್ಯುಕುಮಾರ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ. ಬದಾಮಿ,

(ಮೊದಲ ಪುಟದಿಂದ) ಇದಕ್ಕೆ ಬಳಸುವ ಮುದ್ರೆ ಎಲ್ಲಿದೆ ಎಂಬದೇ ನನಗೆ ಗೊತ್ತಿಲ್ಲ. ಕಚೇರಿಯಲ್ಲೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಜವಾಬ್ದಾರಿಯನ್ನು ವೈದ್ಯರೊಬ್ಬರಿಗೆ ನೀಡಲಾಗಿದೆ. ಅವರಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದರು.

ಪಟ್ಟಣ ಪಂಚಾಯಿತಿ ಮತ್ತು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಸ್ಮಶಾನ ಹಾಗು ಕಸವಿಲೇವಾರಿ ಜಾಗದ ಸಮಸ್ಯೆ ತಲೆದೋರಿದ್ದು ಶೀಘ್ರದಲ್ಲಿ ಇದನ್ನು ಪರಿಹರಿಸಿಕೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.

ಉದ್ಯೋಗಖಾತ್ರಿ ಯೋಜನೆ ಯಡಿ ಇಂಗುಗುAಡಿ ಮತ್ತು ಕೃಷಿಹೊಂಡಗಳ ಸೌಲಭ್ಯದ ಬಗ್ಗೆ ಹಲವಾರು ರೈತರಿಗೆ ಮಾಹಿತಿಯೇ ಇಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸರಿಯಾದ ವಿವರಣೆ ನೀಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗೆ ಸೂಚಿಸಲಾಯಿತು.

ಸೋಮವಾರಪೇಟೆ ವಲಯಾರಣ್ಯ ಕಚೇರಿಯಿಂದ ಅನುಪಾಲನ ವರದಿ ಸಭೆಗೆ ಬಂದಿಲ್ಲ. ಅಧಿಕಾರಿಗಳು ಗೈರುಹಾಜರಾಗಿ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಕಾರಣ ಕೇಳಿ ನೋಟೀಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಉಳಿದಂತೆ ವಿವಿಧ ಇಲಾಖಾಧಿಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದು, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.