ಕುಶಾಲನಗರ, ಫೆ. ೮: ಕೊಪ್ಪ ಗ್ರಾಪಂ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ಸಿ.ಎಸ್. ರೇಣುಕಾಸ್ವಾಮಿ, ಉಪಾಧ್ಯಕ್ಷರಾಗಿ ಸಿಂಧು ಆಯ್ಕೆಯಾಗಿದ್ದಾರೆ. ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ರೇಣುಕಾಸ್ವಾಮಿ ಮತ್ತು ಕಾಂಗ್ರೆಸ್‌ನ ಸಯ್ಯದ್ ರಿಯಾಜ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸಿಂಧು, ಕಾಂಗ್ರೆಸ್‌ನ ದಾಕ್ಷಾಯಿಣಿ ನಾಮಪತ್ರ ಸಲ್ಲಿಸಿದ್ದರು. ೨೪ ಮಂದಿ ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಣುಕಾಸ್ವಾಮಿಗೆ ೧೩, ಸಯ್ಯದ್ ರಿಯಾಜ್‌ಗೆ ೧೧ ಮತ ಲಭ್ಯವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಂಧು ಜೆಡಿಎಸ್ ಬೆಂಬಲಿತ ರೇಣುಕಾಸ್ವಾಮಿ ಮತ್ತು ಕಾಂಗ್ರೆಸ್‌ನ ಸಯ್ಯದ್ ರಿಯಾಜ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸಿಂಧು, ಕಾಂಗ್ರೆಸ್‌ನ ದಾಕ್ಷಾಯಿಣಿ ನಾಮಪತ್ರ ಸಲ್ಲಿಸಿದ್ದರು. ೨೪ ಮಂದಿ ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಣುಕಾಸ್ವಾಮಿಗೆ ೧೩, ಸಯ್ಯದ್ ರಿಯಾಜ್‌ಗೆ ೧೧ ಮತ ಲಭ್ಯವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಂಧು ಅವರಿಗೆ ೧೩ ಮತ ಲಭಿಸಿದರೆ ದಾಕ್ಷಾಯಿಣಿಗೆ ೧೧ ಮತ ಲಭಿಸಿದೆ.
ನೂತನ ಅಧ್ಯಕ್ಷ ರೇಣುಕಾಸ್ವಾಮಿ ಮಾತನಾಡಿ, ಅಧ್ಯಕ್ಷನಾಗಿ ಪಂಚಾಯ್ತಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಚುನಾವಣಾಧಿಕಾರಿ ಯಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿ ನಾಗರಾಜು ಚುನಾವಣಾ ಪ್ರಕ್ರಿಯೆ ನಡೆಸಿದರು.