ಅಮ್ಮತ್ತಿ, ಫೆ. ೮: ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ನವೋದಯ ಫ್ರೆಂಡ್ಸ್ ವತಿಯಿಂದ ಪ್ರಥಮ ವರ್ಷದ ಬಿಟ್ಟಂಗಾಲ ಪ್ರೀಮಿಯರ್ ಲೀಗ್ಗೆ ಚಾಲನೆ ದೊರೆಯಿತು. ಬಿಟ್ಟಂಗಾಲದ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯನ್ನು ಬ್ಯಾಟ್ ಬೀಸುವ ಮೂಲಕ ಕುಪ್ಪಂಡ ಬೋಪಯ್ಯ ಅವರು ಉದ್ಘಾಟಿಸಿದರು.
ತದನಂತರ ಮಾತನಾಡಿದ ಅವರು ಮೂಲೆ ಗುಂಪಾಗಿರುವ ಪ್ರತಿಭೆಗಳನ್ನು ಬೆಳೆಸಲು ಪ್ರತಿ ಗ್ರಾಮದಲ್ಲೂ ಈ ರೀತಿಯ ಕ್ರೀಡಾಹಬ್ಬವನ್ನು ಹಮ್ಮಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಅಮ್ಮೆಕಂಡ ಜನಿತಾ, ಅಮ್ಮೆಕಂಡ ಸುಬ್ರಮಣಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ನಂತರ ನಡೆದ ಪಂದ್ಯಾವಳಿಯಲ್ಲಿ ಮುಖಾಮುಖಿಗಳಾದ ರೈಸಿಂಗ್ ಸ್ಟಾರ್ ಅಂಬಟ್ಟಿ, ಗಾಲಾ ಕ್ರಿಕೆಟರ್ಸ್, ಕ್ರಿಕ್ ಟೈಗರ್ಸ್, ವಾರ್ ಈಗಲ್ಸ್ ಹಾಗೂ ಬ್ಲಾಕ್ ಪ್ಯಾಂಥರ್ಸ್ ತಂಡಗಳು ತಲ ನಾಲ್ಕು ಪಂದ್ಯಗಳನ್ನು ಆಡಿ ರೈಸಿಂಗ್ ಸ್ಟಾರ್ ಅಂಬಟ್ಟಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.
ತೀರ್ಪುಗಾರರಾಗಿ ಅಂಕಿತ್, ಅಜಿತ್, ರಚನ್ ಪೂಜಾರಿ ಕಾರ್ಯನಿರ್ವಹಿಸಿದರು. ತೌಸೀಫ್ ಅಹ್ಮದ್ ವೀಕ್ಷಕ ವಿವರಣೆ ನೀಡಿದರು.