ಮಡಿಕೇರಿ, ಫೆ. ೮ : ಸಾಹಿತ್ಯ ಕ್ಷೇತ್ರದ ಬೆಳವಣಿಗೆ, ಕನ್ನಡ ಭಾಷೆ ವೃದ್ಧಿಗೆ ರಚನೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ಘೋಷಣೆ ಯಾಗಿದ್ದು, ಮೇ ೯ರ ಭಾನುವಾರ ದಂದು ಚುನಾವಣೆ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಅಂದೇ ಜಿಲ್ಲಾಧ್ಯಕ್ಷರುಗಳ ಚುನಾವಣೆ ಫಲಿತಾಂಶ ಪ್ರಕಟ ವಾಗಲಿದ್ದು, ಕೇಂದ್ರ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಚುನಾವಣಾ ಫಲಿತಾಂಶ ಮೇ.೧೨ರಂದು ಘೋಷಣೆಯಾಗಲಿದೆ. ಈ ಬಾರಿ ರಾಜ್ಯದಲ್ಲಿ ಸರಿ ಸುಮಾರು ೩ ಲಕ್ಷದ ೧೦ ಸಾವಿರದ ೫೨೦ ಮತದಾರರು ಇದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣಾಧಿಕಾರಿಯಾಗಿ ನೇಮಕ ಗೊಂಡಿರುವ ಜಿ.ಎಂ. ಗಂಗಾಧರ ಸ್ವಾಮಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕೇಂದ್ರದ ತಹಶೀಲ್ದಾರ್ ಚುನಾವಣಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಲಿದ್ದು, ಇತರ ಮತಗಟ್ಟೆ ಯಿರುವ ತಾಲೂಕು ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿ ಯಾಗಿಯೂ, ನೇಮಕ ಮಾಡಲಾಗಿದೆ. ಉಪವಿಭಾಗಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳು ಚುನಾವಣೆ ಮೇಲ್ವಿಚಾರಕಾಗಿಯೂ, ಜಿಲ್ಲಾಧಿಕಾರಿ ಗಳು ಚುನಾವಣೆ ಉಸ್ತುವಾರಿ ಗಳಾಗಿಯೂ, ಈ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಮಾರ್ಚ್ ೨೯ ರಿಂದ ಏ.೭ರ ವರೆಗೆ ನಾಮ ಪತ್ರಗಳನ್ನು ಪ್ರತಿದಿನ ಬೆಳಗ್ಗೆ ೧೧ರಿಂದ ಸಂಜೆ ೫ ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಏ.೮ರಂದು ನಾಮ ಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏ.೧೨ರ ಸೋಮವಾರ ಮಧ್ಯಾಹ್ನ ೩ ಗಂಟೆಯವರೆಗೆ ಅವಕಾಶ ಇದ್ದು, ಅಂದೆ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿರುವವರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮೂರು ವರ್ಷ ಸತತವಾಗಿ ಪರಿಷತ್‌ನ ಸದಸ್ಯರಾದರೂ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಹಾಗೆಯೇ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣೆ ದಿನಾಂಕಕ್ಕೆ ಐದು ವರ್ಷಗಳ ಹಿಂದಿನಿAದ ಸತತವಾಗಿ ಪರಿಷತ್‌ನ ಸದಸ್ಯರಾಗಿರಬೇಕು. ಕೇಂದ್ರ ಸಾಹಿತ್ಯ ಪರಿಷತ್‌ಗೆ ಸ್ಪರ್ಧಿಸುವವರು ಹತ್ತು ವರ್ಷಗಳ ಹಿಂದಿನಿAದ ಸತತವಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿ ರಬೇಕು ಎಂದು ಚುನಾವಣಾ ನಿಯಮ ಹೇಳಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆ ನಿಬಂಧನೆಗಳAತೆ ಹಾಲಿ ಇರುವ ಹೋಬಳಿ ಮತ ಕೇಂದ್ರಗಳಲ್ಲಿ ಹೊಸದಾಗಿ ಮತ ಕೇಂದ್ರಗಳ ಪ್ರಸ್ತಾವನೆ ಬಂದರೆ, ಪರಿಶೀಲಿಸಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.