ವೀರಾಜಪೇಟೆ, ಫೆ. ೮: ಇಲ್ಲಿನ ನೆಹರು ನಗರದ ನಿವಾಸಿ ಪ್ಲಂಬರ್ ಕೆಲಸಗಾರ ಶಕೀಲ್ (೩೬) ಎಂಬವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇಂದು ಅಪರಾಹ್ನ ಇಲ್ಲಿನ ಪೆರುಂಬಾಡಿಯ ಉದ್ಯಮಿ ಪ್ರಸಾದ್ ಎಂಬುವರ ಎರಡನೇ ಅಂತಸ್ತಿನ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿ ನಿನ್ನೆ ದಿನ ಸಂಜೆಯಿAದ ನಾಪತ್ತೆಯಾಗಿದ್ದನೆಂದೂ ಆತನ ಪತ್ನಿ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ್ದರು. ಶಕೀಲ್‌ನ ಸಹೋದರ ಸಂಬAಧಿಗಳು ನಿನ್ನೆ ರಾತ್ರಿಯಿಂದ ಇಂದು ಅಪರಾಹ್ನದವರೆಗೂ ಶೋಧಿಸಿದ ನಂತರ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಈ ಸಂಬAಧ ಘಟನ ಸ್ಥಳಕ್ಕೆ ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ.