ಶನಿವಾರಸಂತೆ, ಫೆ. ೫: ಸಮೀಪದ ಶಿಡಿಗಳಲೆ ಮಠದ ಆವರಣದ ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಕಲ್ಲುಮಠಾಧೀಶ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.
ಶ್ರೀಮಠದ ಹಿರಿಯ ಸ್ವಾಮೀಜಿಯಾಗಿದ್ದ ಬಸವರಾಜ ಸ್ವಾಮೀಜಿ ಅವರ ಗದ್ದುಗೆಯನ್ನು ರೂ. ೧೫ ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಸಾನ್ನಿಧ್ಯ ವಹಿಸಿದ್ದ ಶಿಡಿಗಳಲೆ ಮಠಾಧೀಶ ಇಮ್ಮಡಿ ಶಿವಲಿಂಗಸ್ವಾಮೀಜಿ ತಿಳಿಸಿದರು.
ಮಠದ ಹೋರಾಟ ಸಮಿತಿ ಅಧ್ಯಕ್ಷ ಎಸ್.ಕೆ. ವೀರಪ್ಪ, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಮುಖಂಡರಾದ ಕೆ.ಬಿ. ಹಾಲಪ್ಪ, ನಂಜಪ್ಪ, ಸೋಮಪ್ಪ ಮತ್ತಿತರರು ಉಪಸ್ಥಿತರಿದ್ದರು.