ಪೊನ್ನಂಪೇಟೆ, ಫೆ. ೫: ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಉರಗ ಪ್ರೇಮಿ ಕೊರಕುಟ್ಟಿರ ರತನ್ ಒಂದು ತಿಂಗಳ ಹಿಂದೆ ಪೊನ್ನಂಪೇಟೆಯ ಎಂ.ಜಿ. ನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ಹಿಡಿದು ಅದನ್ನು ಡಬ್ಬದ ಒಳಗೆ ಹಾಕಿ ಮುಚ್ಚಳ ಮುಚ್ಚುತಿದ್ದ ಸಂದರ್ಭ, ಆಕಸ್ಮಿಕವಾಗಿ ಮುಚ್ಚಳ ಜಾರಿ ಬಿದ್ದ ಪರಿಣಾಮ ಡಬ್ಬದೊಳಗಿದ್ದ ಹಾವು ಹೊರಗೆ ಬಂದು ರತನ್ ರವರ ಬಲಗೈಯ ಹೆಬ್ಬೆರಳಿಗೆ ಕಚ್ಚಿದೆ. ಈ ಸಂದರ್ಭ ಧೈರ್ಯಗುಂದದ ರತನ್ ಹಾವನ್ನು ಡಬ್ಬದೊಳಗೆ ಮುಚ್ಚಿ, ಅದನ್ನು ಸುರಕ್ಷಿತವಾಗಿ ಬೇರೆ ಕಡೆಗೆ ಬಿಟ್ಟು ಬರಲು ವ್ಯಕ್ತಿಯೊಬ್ಬರಿಗೆ ತಿಳಿಸಿ, ಕೂಡಲೇ ಗೋಣಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ತೆರಳಿ ಚುಚ್ಚು ಮದ್ದು ತೆಗೆದುಕೊಂಡಿದ್ದಾರೆ.

ನಂತರ ಪೊನ್ನಂಪೇಟೆ ಸಮೀಪದ ಗ್ರಾಮವೊಂದರಲ್ಲಿ ಆಯುರ್ವೇದಿಕ್ ಔಷಧಿ ಮಾಡಿಸಿದ್ದರು. ಕೆಲವು ದಿನಗಳ ಬಳಿಕ ಹಾವು ಕಚ್ಚಿದ ಭಾಗದಲ್ಲಿ ಕೀವು ತುಂಬಿಕೊAಡು ಊತ ಕಾಣಿಸಿಕೊಂಡಿದೆ. ನಂತರ ಅಮ್ಮತ್ತಿಯ ಆರ್.ಐ. ಎಚ್.ಪಿ. ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಹಾವುಕಚ್ಚಿದ ಕೈಯ ಚರ್ಮದ ಭಾಗ ಕೀವು ತುಂಬಿ ಕೊಳೆಯಲು ಪ್ರಾರಂಭಿಸಿದ್ದರಿAದ, ಚಿಕಿತ್ಸೆ ನಡೆಸಿ ಕೈಯ ಭಾಗದ ಚರ್ಮವನ್ನು ಕತ್ತರಿಸಿ ತೆಗೆದು ಹಾಕಿ, ಬಲಗಾಲಿನ ತೊಡೆಯ ಭಾಗದ ಚರ್ಮವನ್ನು ತೆಗೆದು ಹಾವು ಕಚ್ಚಿದ್ದ ಭಾಗಕ್ಕೆ ಜೋಡಿಸಿದ್ದಾರೆ. ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರತನ್ ಈಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗಾಯ ಇನ್ನೂ ಸಂಪೂರ್ಣವಾಗಿ ವಾಸಿಯಾಗದೆ ಇರುವ ಕಾರಣ ಎರಡು ದಿನಕೊಮ್ಮೆ ಡ್ರೆಸಿಂಗ್ ಮಾಡಿಸುತ್ತಿದ್ದಾರೆ.

ಚಿಕಿತ್ಸೆಗೆ ೧ ಲಕ್ಷ ಖರ್ಚು: ರತನ್ ಚಿಕಿತ್ಸೆಗೆ ದಾಖಲಾದ ದಿನದಿಂದ ಇದುವರೆಗೆ ಸುಮಾರು ೧ ಲಕ್ಷಕಿಂತಲೂ ಅಧಿಕ ಹಣ ಖರ್ಚಾಗಿದೆ. ಹಾವು ಹಿಡಿಯಲು ಕರೆಸಿಕೊಂಡಿದ್ದ ಮನೆಯವರು ೧೦ ಸಾವಿರ ನೀಡಿದ್ದಾರೆ. ರತನ್ ಪರಿಸ್ಥಿತಿಯನ್ನು ತಿಳಿದ ಕೆಲವು ದಾನಿಗಳು ಹಾಗೂ ಸ್ನೇಹಿತರಿಂದ ೨೦ ಸಾವಿರ ರೂಪಾಯಿ ಸಂಗ್ರಹವಾಗಿದೆ. ಚಿಕನ್ ಸೆಂಟರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ರತನ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಚಿಕಿತ್ಸೆಗಾಗಿ ರೂ. ೮೦ ಸಾವಿರ ರೂಪಾಯಿ ಸಾಲ ಮಾಡಿಕೊಂಡು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಚಿಕಿತ್ಸೆಗಾಗಿ ಮಾಡಿರುವ ಸಾಲ ತೀರಿಸಲು ಸಾರ್ವಜನಿಕರ ಸಹಾಯ ಬೇಕಾಗಿದ್ದು, ಇವರಿಗೆ ಧನ ಸಹಾಯ ಮಾಡ ಬಯಸುವವರು ಇವರ ಬ್ಯಾಂಕ್ ಖಾತೆ ರತನ್ ಕೆ.ಪಿ. ೦೪೫೬೧೦೧೦೨೫೩೭೫ IಈSಅ ಅಓಖಃ೦೦೦೦೪೫೬ ಗೆ ಪಾವತಿಸುವಂತೆ ಕೋರಿದೆ. ಅವರ ಮೊ. ಸಂಖ್ಯೆ: ೭೨೫೯೩೧೫೨೦೯