ವೀರಾಜಪೇಟೆ, ಫೆ. ೫: ಮಂಗಳೂರಿನಲ್ಲಿ ನಡೆಯುವ ‘ಅಂಡರ್ ೧೯’ ವಿಭಾಗೀಯ ಕ್ರಿಕೆಟ್ ಪಂದ್ಯಾಟಕ್ಕೆ ಕೊಡಗು ಜಿಲ್ಲಾ ತಂಡ ಪ್ರಕಟವಾಗಿದ್ದು, ೧೫ ಮಂದಿಯನ್ನೊಳಗೊAಡ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ. ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ಸಮೀರ್ ಅಫ್‌ಟಾಬ್ ಎಮ್.ಕೆ, ಮಿಲನ್ ಬೋಪಣ್ಣ, ಸಂತ ಮೈಕಲರ ಕಾಲೇಜಿನ ಎನ್.ಹೆಚ್. ಪೂರ್ವಿಕ್, ಪಿ.ಬಿ ಬಾಷಿತ್ ಆಲಿ, ಸಿ.ಐ.ಟಿ ಯ ತುಷಾರ್ ಮಂದಣ್ಣ, ಸಂತ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಫೆಲಿಕ್ಸ್ ರೋಷನ್, ಅಲೋಷಿಯನ್ ರೆಕ್ರಿಯೇಷನಲ್ ಕ್ಲಬ್‌ನ ಚಂದನ್ ರಾಜ್ ಬಿ.ಡಿ, ಆಳ್ವಾಸ್ ಕಾಲೇಜಿನ ವಿವಾನ್ ಬಿ.ಆರ್, ಬೆಂಗಳೂರು ಸಂತ ಜೋಸೆಫ್ ಕಾಲೇಜಿನ ಎಂ.ಎ. ತಿಮ್ಮಯ್ಯ, ಮಹಮ್ಮದ್ ಇಲ್ಹಾನ್ ಎಮ್.ಐ, ಮಂಗಳೂರು ಸ್ಪೋರ್ಟ್ ಕ್ಲಬ್‌ನ ಕರುಂಬಯ್ಯ, ಸಂತ ಅಲೋಷಿಯಸ್ ಕಾಲೇಜಿನ ಟಿ.ಸಿ. ಅರ್ಜುನ್ ದೇವಯ್ಯ, ಡಿ.ಕೆ.ಸಿ.ಎ.ಯ ಪ್ರಭವ್ ವೈ.ಡಿ, ಎಸ್.ಎಂ.ಎಸ್. ಅಕಾಡೆಮಿಯ ಮೋನಿಷ್ ಮಂದಣ್ಣ ಸಿ.ಬಿ. ಹಾಗೂ ಮಡಿಕೇರಿ ಕೆ.ವಿ. ಕಾಲೇಜಿನ ಧನಿಕ್ ನಾಚಪ್ಪ ಆಯ್ಕೆಯಾಗಿದ್ದಾರೆ.