ಮಡಿಕೇರಿ: ೭೨ನೇ ಗಣರಾಜ್ಯೋತ್ಸವ ಪ್ರಯುಕ್ತ ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ, ಬಂಗಾರಕೋಡಿ ಉದಯಕುಮಾರ್, ನಡುಮನೆ ಕಾರ್ಯಪ್ಪ, ಪೂಜಾರಿ ಬೆಳ್ಯಪ್ಪ, ಮೊಟ್ಟೆರ ಬೆಳ್ಯಪ್ಪ, ಪುದಿನೆರವನ ಪೊನ್ನಪ್ಪ, ಚೆರಿಯಮನೆ ತಿಮ್ಮಯ್ಯ, ಕೋಡಿ ಮುತ್ತಪ್ಪ, ವ್ಯವಸ್ಥಾಪಕ ರಮೇಶ್ ಮತ್ತಾರಿ, ಕಡ್ಯದ ದಿನೇಶ್ ಹಾಗೂ ಇನ್ನಿತರರು ಹಾಜರಿದ್ದರು.ಮಡಿಕೇರಿ: ೭೨ನೇ ಗಣರಾಜ್ಯೋತ್ಸವ ಪ್ರಯುಕ್ತ ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ, ಬಂಗಾರಕೋಡಿ ಉದಯಕುಮಾರ್, ನಡುಮನೆ ಕಾರ್ಯಪ್ಪ, ಪೂಜಾರಿ ಬೆಳ್ಯಪ್ಪ, ಮೊಟ್ಟೆರ ಬೆಳ್ಯಪ್ಪ, ಪುದಿನೆರವನ ಪೊನ್ನಪ್ಪ, ಚೆರಿಯಮನೆ ತಿಮ್ಮಯ್ಯ, ಕೋಡಿ ಮುತ್ತಪ್ಪ, ವ್ಯವಸ್ಥಾಪಕ ರಮೇಶ್ ಮತ್ತಾರಿ, ಕಡ್ಯದ ದಿನೇಶ್ ಹಾಗೂ ಇನ್ನಿತರರು ಹಾಜರಿದ್ದರು.ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ೭೨ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆಯ ಅರಣ್ಯ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ ಹಾಗೂ ಎನ್‌ಸಿಸಿ ವಿಭಾಗದ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ ಮತ್ತು ಶಾಲೆಯ ಅಧಿಕಾರಿಗಳು ಶಾಲಾ ಆವರಣದಲ್ಲಿರುವ ಯುದ್ಧ ವೀರ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನು ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು.

ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲದ ಸದುಪಯೋಗವನ್ನು ಪಡೆದು ಅಧಿಕಾರಿಗಳಾಗಿ ಹೊರ ಹೊಮ್ಮುವುದರ ಮೂಲಕ ರಾಷ್ಟçಸೇವೆಗೆ ಮುಂದಾಗಬೇಕೆAದು ಅವರು ಕಿವಿಮಾತು ಹೇಳಿದರು. ಜೊತೆಗೆ ಸೈನಿಕ ಶಾಲೆಯಲ್ಲಿ ಹೆಣ್ಣು ಮಕ್ಕಳ ದಾಖಲಾತಿಗೆ ಇರುವ ಅವಕಾಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವ ಅತಿಥಿ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ ಮಾತನಾಡಿ, ಕೋವಿಡ್-೧೯ ಸಾಂಕ್ರಾಮಿಕ ರೋಗದ ಕರಾಳ ನೆರಳಿನಲ್ಲಿ ನಾವುಗಳು ಗಣತಂತ್ರ ದಿನವನ್ನು ಕನಿಷ್ಟ ಸಂಪನ್ಮೂಲಗಳನ್ನು ಬಳಸಿಕೊಂಡು ಸರಳವಾಗಿ ಆಚರಿಸುವಂತಾಗಿದೆ. ರಾಷ್ಟçದಲ್ಲಿ ಪ್ರಸ್ತುತ ತಲೆದೋರಿರುವ ಆರ್ಥಿಕ ದುಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಆರ್ಥಿಕ ಪುನಶ್ಚೇತನ ಪಡೆಯುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದರು.

ಈ ಸಂದರ್ಭ ಮುಖ್ಯ ಅತಿಥಿಗಳು ಶಾಲೆಯಲ್ಲಿ ಮಹತ್ತರ ಸಾಧನೆಗೈದ ಆಂಗ್ಲಭಾಷಾ ಶಿಕ್ಷಕ ಅಶೋಕನ್ ಎನ್.ವಿ., ಲೆಕ್ಕಪತ್ರ ವಿಭಾಗದ ದ್ವಿತೀಯ ದರ್ಜೆ ಸಹಾಯಕ ರಾಮಚಂದ್ರ ರಾವ್ ಹಾಗೂ ಸಾಮಾನ್ಯ ಸಿಬ್ಬಂದಿ ವರ್ಗದ ನವೀನ್‌ಕುಮಾರ್ ಸಾಹು ಅವರಿಗೆ ಪ್ರಶಂಸನಾ ಪತ್ರವನ್ನು ವಿತರಿಸಿ ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ 'ಹೆಣ್ಣು ಮಕ್ಕಳ ಸಬಲೀಕರಣ' ವಿಷಯವನ್ನಾಧರಿಸಿದ ಕಿರುನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕಾ÷್ವಡ್ರನ್ ಲೀಡರ್ ಆರ್.ಕೆ.ಡೇ., ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ೭೨ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆಯ ಅರಣ್ಯ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ ಹಾಗೂ ಎನ್‌ಸಿಸಿ ವಿಭಾಗದ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ ಮತ್ತು ಶಾಲೆಯ ಅಧಿಕಾರಿಗಳು ಶಾಲಾ ಆವರಣದಲ್ಲಿರುವ ಯುದ್ಧ ವೀರ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನು ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು.

ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲದ ಸದುಪಯೋಗವನ್ನು ಪಡೆದು ಅಧಿಕಾರಿಗಳಾಗಿ ಹೊರ ಹೊಮ್ಮುವುದರ ಮೂಲಕ ರಾಷ್ಟçಸೇವೆಗೆ ಮುಂದಾಗಬೇಕೆAದು ಅವರು ಕಿವಿಮಾತು ಹೇಳಿದರು. ಜೊತೆಗೆ ಸೈನಿಕ ಶಾಲೆಯಲ್ಲಿ ಹೆಣ್ಣು ಮಕ್ಕಳ ದಾಖಲಾತಿಗೆ ಇರುವ ಅವಕಾಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವ ಅತಿಥಿ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ ಮಾತನಾಡಿ, ಕೋವಿಡ್-೧೯ ಸಾಂಕ್ರಾಮಿಕ ರೋಗದ ಕರಾಳ ನೆರಳಿನಲ್ಲಿ ನಾವುಗಳು ಗಣತಂತ್ರ ದಿನವನ್ನು ಕನಿಷ್ಟ ಸಂಪನ್ಮೂಲಗಳನ್ನು ಬಳಸಿಕೊಂಡು ಸರಳವಾಗಿ ಆಚರಿಸುವಂತಾಗಿದೆ. ರಾಷ್ಟçದಲ್ಲಿ ಪ್ರಸ್ತುತ ತಲೆದೋರಿರುವ ಆರ್ಥಿಕ ದುಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಆರ್ಥಿಕ ಪುನಶ್ಚೇತನ ಪಡೆಯುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದರು.

ಈ ಸಂದರ್ಭ ಮುಖ್ಯ ಅತಿಥಿಗಳು ಶಾಲೆಯಲ್ಲಿ ಮಹತ್ತರ ಸಾಧನೆಗೈದ ಆಂಗ್ಲಭಾಷಾ ಶಿಕ್ಷಕ ಅಶೋಕನ್ ಎನ್.ವಿ., ಲೆಕ್ಕಪತ್ರ ವಿಭಾಗದ ದ್ವಿತೀಯ ದರ್ಜೆ ಸಹಾಯಕ ರಾಮಚಂದ್ರ ರಾವ್ ಹಾಗೂ ಸಾಮಾನ್ಯ ಸಿಬ್ಬಂದಿ ವರ್ಗದ ನವೀನ್‌ಕುಮಾರ್ ಸಾಹು ಅವರಿಗೆ ಪ್ರಶಂಸನಾ ಪತ್ರವನ್ನು ವಿತರಿಸಿ ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ 'ಹೆಣ್ಣು ಮಕ್ಕಳ ಸಬಲೀಕರಣ' ವಿಷಯವನ್ನಾಧರಿಸಿದ ಕಿರುನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕಾ÷್ವಡ್ರನ್ ಲೀಡರ್ ಆರ್.ಕೆ.ಡೇ., ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.ಕಡಂಗ: ಎಸ್.ಎಸ್.ಎಫ್. ಕುಂಜಿಲ ಶಾಖೆ ವತಿಯಿಂದ ೭೨ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಜಿಲ ಶಾಖೆ ಅಧ್ಯಕ್ಷ ಮೂಹಮ್ಮದ್ ಅಲಿ ಜೌಹರ್ ವಹಿಸಿದ್ದರು. ಶಾಖೆ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫೀಕ್ ಸ್ವಾಗತಿಸಿ, ನಿರೂಪಿಸಿದರು. ಊರಿನ ಸೈನಿಕ ಸುಬೇದಾರ್ ಮೊಯ್ದಿನ್ ಕುಂಜ್ಞಿ ಮತ್ತು ಊರಿನ ಹಿರಿಯ ರೈತರಾದ ಉಮ್ಮರ್ ಕೀತಂಗೋಡು ಧ್ವಜಾರೋಹಣ ನೆರವೇರಿಸಿದರು.

ಕುಂಜಿಲ ರೌಲತುಲ್ ಉಲೂಂ ಮದ್ರಸ ಸದರ್ ಮುಅಲ್ಲಿಂ ಅಬ್ದುಲ್ಲಾ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹಾಜಿ ಹಾಗೂ ಸೈನಿಕ ಸುಬೇದಾರ್ ಮೊಯ್ದಿನ್ ಕುಂಜ್ಞಿ ಗಣರಾಜ್ಯೋತ್ಸವದ ಕುರಿತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಭಾಷಣವನ್ನು ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್ ಶಾಫಿ ಕುಂಜಿಲ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕುಂಜಿಲದ ಸೈನಿಕ ಸುಬೇದಾರ್ ಮೊಯ್ದಿನ್ ಕುಂಜ್ಞಿ ಅವರನ್ನು ಎಸ್.ಎಸ್.ಎಫ್. ಕುಂಜಿಲ ಶಾಖೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಕುಂಜಿಲ ಶಾಖೆ ಪ್ರಧಾನ ಕಾರ್ಯದರ್ಶಿ ಹಾರಿಸ್ ಝೈನಿ, ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯೀದ್ ಪಯಡತ್, ಕುಂಜಿಲ ಪೈನರಿ ರಿಲೀಫ್ ಫಂಡ್ ಅಧ್ಯಕ್ಷ ಬಶೀರ್ ಪೊಯಕರೆ, ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಪುದರೇಲ್ ಹಾಜರಿದ್ದರು. ಕುಂಡAಡ ಈಚು ಅವರ ಗದ್ದೆಯಲ್ಲಿ ಆಯೋಜಿಸಿದ್ದ ಕಿಸಾನ್ ರಿಪಬ್ಲಿಕ್ ಯಶಸ್ವಿಯಾಗಿ ನಡೆಸಲಾಯಿತು.ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಕುಲ್ಲಚಂಡ ಬೋಪಣ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವ ಜನತೆ ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿಂನೆAಟ್ ಐ.ಡಿ. ಲೇಪಾಕ್ಷಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾ, ರೋವರ್ಸ್ ರೇಂಜರ್ ಅಧಿಕಾರಿಗಳಾದ ಪವಿತ್ರ, ಸೀಮಾ, ರೆಡ್‌ಕ್ರಾಸ್ ಅಧಿಕಾರಿ ಕುಶಾಲಪ್ಪ ಕಾಲೇಜಿನ ಅಧೀಕ್ಷಕ ಸೋಮನಾಥ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎನ್‌ಸಿಸಿ ಕೆಡೆಟ್‌ಗಳಿಗೆ ಬಹುಮಾನ ನೀಡಲಾಯಿತು.ಮಡಿಕೇರಿ: ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ, ದೈಹಿಕ ಶಿಕ್ಷಕ ನಾಗಯ್ಯ ಶೆಟ್ಟಿ, ಹಿರಿಯ ಶಿಕ್ಷಕಿ ಸುಲ್‌ಹತ್ ಧ್ವಜಾರೋಹಣವನ್ನು ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಕ ನಾಗಯ್ಯಶೆಟ್ಟಿ ಧ್ವಜರೋಹಣವನ್ನು ನೆರವೇರಿಸಿ, "ನಾವು ಎಲ್ಲೇ ಇದ್ದರೂ, ನಮ್ಮ ರಾಷ್ಟಿçÃಯ ಹಬ್ಬಗಳ ಆಚರಣೆ ಮತ್ತು ಹಿರಿಯರ ತ್ಯಾಗ ಬಲಿದಾನಗಳ ಸ್ಮರಣೆ ನಮ್ಮ ಕರ್ತವ್ಯ" ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲೆ ಜೋಯಿಸಿ ವಿನಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ, ಸಂವಿಧಾನದ ಮಹತ್ವವನ್ನು ಅರಿಯಬೇಕಾದರೆ ಪ್ರತಿಯೊಬ್ಬರಿಗೂ ವಿದ್ಯೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ, ದೇಶ ಭಕ್ತಿಗೀತೆ, ಭಾಷಣ ಸ್ಪರ್ಧೆ ಆಯೋಜಿಸಲಾಯಿತು. ಸುಜ್ಯೋತಿ ವಂದಿಸಿದರು.ಮಡಿಕೇರಿ: ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ, ದೈಹಿಕ ಶಿಕ್ಷಕ ನಾಗಯ್ಯ ಶೆಟ್ಟಿ, ಹಿರಿಯ ಶಿಕ್ಷಕಿ ಸುಲ್‌ಹತ್ ಧ್ವಜಾರೋಹಣವನ್ನು ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಕ ನಾಗಯ್ಯಶೆಟ್ಟಿ ಧ್ವಜರೋಹಣವನ್ನು ನೆರವೇರಿಸಿ, "ನಾವು ಎಲ್ಲೇ ಇದ್ದರೂ, ನಮ್ಮ ರಾಷ್ಟಿçÃಯ ಹಬ್ಬಗಳ ಆಚರಣೆ ಮತ್ತು ಹಿರಿಯರ ತ್ಯಾಗ ಬಲಿದಾನಗಳ ಸ್ಮರಣೆ ನಮ್ಮ ಕರ್ತವ್ಯ" ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲೆ ಜೋಯಿಸಿ ವಿನಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ, ಸಂವಿಧಾನದ ಮಹತ್ವವನ್ನು ಅರಿಯಬೇಕಾದರೆ ಪ್ರತಿಯೊಬ್ಬರಿಗೂ ವಿದ್ಯೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ, ದೇಶ ಭಕ್ತಿಗೀತೆ, ಭಾಷಣ ಸ್ಪರ್ಧೆ ಆಯೋಜಿಸಲಾಯಿತು. ಸುಜ್ಯೋತಿ ವಂದಿಸಿದರು.ಸುAಟಿಕೊಪ್ಪ: ಯುವ ಪೀಳಿಗೆಯವರು ಹಾದಿ ತಪ್ಪದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ಕೊಡಗು ಜಿಲ್ಲಾ ಸತ್ರ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.

ಗದ್ದೆಹಳ್ಳದ ವಿಕಾಸ ಜನಸೇವಾ ಟ್ರಸ್ಟ್ ಆಶ್ರಮ ಜೀವನ ದಾರಿ ಆಶ್ರಮದ ವತಿಯಿಂದ ಆಚರಿಸಲಾದ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಸದಾಕಣ್ಗಾವಲು ಹಾಕಬೇಕು ಎಂದು ಹಿತವಚನ ನೀಡಿದರು.

ಹಾಸನ ಜಿಲ್ಲಾ ಗ್ರಾಹಕರ ಪರಿಹಾರ ವ್ಯಾಜ್ಯ ಆಯೋಗದ ಅಧ್ಯಕ್ಷ ಎ. ಲೋಕೇಶ್‌ಕುಮಾರ್ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತದ ಸಂವಿಧಾನ ಶ್ರೇಷ್ಟವಾಗಿದ್ದು ಎಂದರು. ‘ನಮ್ಮ ಸುಂಟಿಕೊಪ್ಪ’ ಬಳಗದ ಅಧ್ಯಕ್ಷ ಡೆನ್ನಿಸ್ ಡಿಸೋಜ ಅಧ್ಯಕ್ಷತೆ ವಹಿಸಿ ವಂದಿಸಿದರು. ಜಾಹೀದ್ ಆಹ್ಮದ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ರಂಜಿತ್ ಕುಮಾರ್, ನೂತನ ಸಾಲಿನ ಸುಂಟಿಕೊಪ್ಪ ಜೆಸಿಐ ಅಧ್ಯಕ್ಷ ಪ್ರೀತಮ್ ಪ್ರಭಾಕರ್, ಗದ್ದೆಹಳ್ಳದ ವಿಕಾಸ ಜನಸೇವಾ ಟ್ರಸ್ಟ್ ಆಶ್ರಮ ಜೀವನ ದಾರಿ ಆಶ್ರಮದ ಮೇಲ್ವಿಚಾರಕ ರಮೇಶ್ ಹಾಗೂ ಸ್ವಸ್ಥ ಸಂಸ್ಥೆಯ ಸಿಬಿಆರ್ ಸಂಯೋಜಕರಾದ ಮುರುಗೇಶ್, ದಿನೇಶ್ ಮತ್ತಿತರರು ಇದ್ದರು.ನಾಪೋಕ್ಲು: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಮೊಟ್ಟೆಯ ಆದರ್ಶ ನಗರದ ಅಂಬೇಡ್ಕರ್ ಯುವಕ ಸಂಘದಿAದ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲ ಕೆ.ಎಂ. ಅಬ್ದುಲ್ಲ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಇಂದು ಮಹತ್ವ ಬಂದ ದಿನವಾಗಿದೆ. ಈ ದಿನವನ್ನು ದೇಶದಾದ್ಯಂತ ಗಣರಾಜ್ಯದ ದಿನ ಎಂದು ಆಚರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ನಾಡಿನ ಸಮಾಜ ಸೇವಕರಾದ ಬಾಳೆಯಡ ದೀವ್ಯಾ ಮಂದಪ್ಪ, ಮಹಮ್ಮದ್ ಮುಸ್ತಾಫ್, ಮತ್ತು ವಕೀಲ ಕೆ.ಎಂ. ಅಬ್ದುಲ್ಲ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ.ಎA. ಸೀನ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಅಜೀಜ್, ಆಲಿ, ಬಸೀರ್ ಅಲಿ, ಪುಲಿಯಂಡ ಮೊಯಿದು, ಟಿ.ಪಿ. ರಮೇಶ್, ಹುಸೇನ್, ಮಹಮ್ಮದ್, ಸುಶೀಲಮ್ಮ, ಪುಲಿಯಂಡ ಮಮ್ಮದ್, ನಜೀರ್ ಮತ್ತಿತರರು ಇದ್ದರು.ನಾಪೋಕ್ಲು: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಮೊಟ್ಟೆಯ ಆದರ್ಶ ನಗರದ ಅಂಬೇಡ್ಕರ್ ಯುವಕ ಸಂಘದಿAದ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲ ಕೆ.ಎಂ. ಅಬ್ದುಲ್ಲ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಇಂದು ಮಹತ್ವ ಬಂದ ದಿನವಾಗಿದೆ. ಈ ದಿನವನ್ನು ದೇಶದಾದ್ಯಂತ ಗಣರಾಜ್ಯದ ದಿನ ಎಂದು ಆಚರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ನಾಡಿನ ಸಮಾಜ ಸೇವಕರಾದ ಬಾಳೆಯಡ ದೀವ್ಯಾ ಮಂದಪ್ಪ, ಮಹಮ್ಮದ್ ಮುಸ್ತಾಫ್, ಮತ್ತು ವಕೀಲ ಕೆ.ಎಂ. ಅಬ್ದುಲ್ಲ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ.ಎA. ಸೀನ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಅಜೀಜ್, ಆಲಿ, ಬಸೀರ್ ಅಲಿ, ಪುಲಿಯಂಡ ಮೊಯಿದು, ಟಿ.ಪಿ. ರಮೇಶ್, ಹುಸೇನ್, ಮಹಮ್ಮದ್, ಸುಶೀಲಮ್ಮ, ಪುಲಿಯಂಡ ಮಮ್ಮದ್, ನಜೀರ್ ಮತ್ತಿತರರು ಇದ್ದರು.ಮಡಿಕೇರಿ: ಇಂದಿರಾನಗರದ ಜ್ಯೋತಿ ಯುವಕ ಸಂಘದ ವತಿಯಿಂದ ೭೨ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಹಿರಿಯರಾದ ಕೆ.ಎಂ. ಪ್ರಕಾಶ್ ಧ್ವಜಾರೋಹಣವನ್ನು ನೆರವೇರಿಸಿದರು. ಗಣರಾಜ್ಯೋತ್ಸವದ ಪ್ರಯುಕ್ತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇಂದಿರಾನಗರದಲ್ಲಿ ಶ್ರಮದಾನ ಮಾಡುವ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.ಮಡಿಕೇರಿ: ಇಂದಿರಾನಗರದ ಜ್ಯೋತಿ ಯುವಕ ಸಂಘದ ವತಿಯಿಂದ ೭೨ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಹಿರಿಯರಾದ ಕೆ.ಎಂ. ಪ್ರಕಾಶ್ ಧ್ವಜಾರೋಹಣವನ್ನು ನೆರವೇರಿಸಿದರು. ಗಣರಾಜ್ಯೋತ್ಸವದ ಪ್ರಯುಕ್ತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇಂದಿರಾನಗರದಲ್ಲಿ ಶ್ರಮದಾನ ಮಾಡುವ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.ಕುಶಾಲನಗರ: ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕಾರ್ಯದರ್ಶಿ ವಿನೋದ್, ಸದಸ್ಯರಾದ ಸಬಲಂ ಭೋಜಣ್ಣ ರೆಡ್ಡಿ, ಸುನಿಲ್ ಪೊನ್ನೇಟಿ, ಕುಡೆಕಲ್ ಗಣೇಶ್, ವಿ.ಪಿ. ಸುಖೇಶ್ ಇದ್ದರು.ಕುಶಾಲನಗರ: ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕಾರ್ಯದರ್ಶಿ ವಿನೋದ್, ಸದಸ್ಯರಾದ ಸಬಲಂ ಭೋಜಣ್ಣ ರೆಡ್ಡಿ, ಸುನಿಲ್ ಪೊನ್ನೇಟಿ, ಕುಡೆಕಲ್ ಗಣೇಶ್, ವಿ.ಪಿ. ಸುಖೇಶ್ ಇದ್ದರು.