ಗೋಣಿಕೊಪ್ಪ ವರದಿ, ಜ. ೨೬ : ಕಾವೇರಿ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಮತ್ತು ಗೋಣಿಕೊಪ್ಪ ರೋಟರಿ ಸಹಯೋಗದಲ್ಲಿ ಸುಮಾರು ೩೯ ವಿಶೇಷ ಚೇತನರಿಗೆ ವಾಕಿಂಗ್ ಸ್ಟಿಕ್, ವಾಕರ್ ಕ್ರಚಾಸ್ ಮತ್ತು ವಾಟರ್ ಬೆಡ್ ವಿತರಿಸಲಾಯಿತು.

ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸದಸ್ಯ ಡಾ. ಕೆ. ಎನ್. ಚಂದ್ರಶೇಖರ್ ಮಾತನಾಡಿ, ವಿಶೇಷಚೇತನರು ವಿಶೇಷ ವ್ಯಕ್ತಿಗಳು. ಸಾಮಾನ್ಯರಂತಿಲ್ಲದೆ ಸಾಧಕರಾಗಿ ಬದುಕು ಸಾಗಿಸುವ ಅವರು ಎಂದಿಗೂ ಮಾದರಿ. ಇವರ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸಾ ಯೋಜನೆಯಂತೆ ವಿಶೇಷ ಚೇತನರಿಗೆ ಸಲಕರಣೆಗಳ ನೀಡಲಾಗಿದೆ ಎಂದರು. ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷಣ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ವಿವೇಕಾನಂದ ಯೂತ್ ಮೂಮೆಂಟ್ ಜಿಲ್ಲಾ ಅಧಿಕಾರಿ ಅಂಕಚಾರಿ, ತಾಲೂಕು ವಿಶೇಷಚೇತನ ಸಂಯೋಜಕ ಪ್ರಥಮ್, ರೋಟರಿ ಸಂಸ್ಥೆಯ ಪ್ರಮುಖರಾದ ಕಿಶೋರ್ ಮಾದಪ್ಪ, ಇಮ್ಮಿ ಉತ್ತಪ್ಪ, ಚಂದನ್ ಕಾಮತ್ ಇದ್ದರು.