ವೀರಾಜಪೇಟೆ, ಜ. ೨೬: ವೀರಾಜಪೇಟೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್ ಗಣರಾಜ್ಯೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮ್ ಕುಮಾರ್, ಸಿಬ್ಬಂದಿಗಳು ಹೊರತುಪಡಿಸಿ ಉಪಾಧ್ಯಕ್ಷರು ಸೇರಿದಂತೆ ಯಾವುದೇ ಚುನಾಯಿತ ಸದಸ್ಯರುಗಳು ಹಾಜರಿರಲಿಲ್ಲ.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಎ¯್ಲ ರಾಷ್ಟಿçÃಯ ಹಬ್ಬಗಳಲ್ಲ್ಲೂ ಸಂಪ್ರದಾಯದAತೆ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಆದರೆ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭ ಪಂಚಾಯಿತಿಯಲ್ಲಿ ೧೮ ಜನ ಚುನಾಯಿತ ಸದಸ್ಯರಾಗಲಿ, ನಾಮ ನಿರ್ದೇಶಿತ ಸದಸ್ಯರಾಗಲಿ ಪಾಲ್ಗೊಳ್ಳಲಿಲ್ಲ.
ಮುಖ್ಯಾಧಿಕಾರಿ ಶ್ರೀಧರ್ ಅವರು ಒಂದು ವಾರದ ಮುಂಚಿತವಾಗಿ ೨೧ ಸದಸ್ಯರುಗಳಿಗೂ ಗಣರಾಜ್ಯೋತ್ಸವದ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದರು. ಆದರೆ ಇಂದು ಅಧ್ಯಕ್ಷರನ್ನು ಹೊರತುಪಡಿಸಿ ಎಲ್ಲರೂ ಗೈರಾಗಿದ್ದಾರೆ.