*ಗೋಣಿಕೊಪ್ಪ, ಜ. ೨೬: ಸಾಲ ಹಿಂದಿರುಗಿಸುವAತೆ ಕೇಳಲು ಹೋದ ಮಹಿಳೆಯ ಮೇಲೆ ಸಾಲ ಪಡೆದುಕೊಂಡ ವ್ಯಕ್ತಿ ಹಲ್ಲೆ ಮಾಡಿದ ಘಟನೆ ಜೋಡುಬೀಟಿ ಗ್ರಾಮದಲ್ಲಿ ನಡೆದಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೋಡುಬೀಟಿ ಗ್ರಾಮದಲ್ಲಿ ಎಂ.ಎ. ವಿಜು ಎಂಬಾತ ಕೆಲ ವರ್ಷಗಳಿಂದ ಗ್ಯಾರೇಜ್ ನಡೆಸುತ್ತಿದ್ದ. ವಿಜು ಗ್ಯಾರೇಜ್ ನಡೆಸಲು ಬಂಡವಾಳಕ್ಕಾಗಿ ತನ್ನ ಸ್ನೇಹಿತ ಎಂ.ಆರ್. ವಿಜು ಎಂಬವರ ಪತ್ನಿ ಶಶಿಕಲಾ ಬಳಿ ಒಂದು ಲಕ್ಷದ ಮೂವತ್ತು ಸಾವಿರ ನಗದು ಸಾಲದ ರೂಪದಲ್ಲಿ ಪಡೆದುಕೊಂಡಿದ್ದ. ಮೂರು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ವ್ಯಕ್ತಿ ವರ್ಷ ಕಳೆದರೂ ಪಡೆದ ಹಣವನ್ನು ಹಿಂದಿರುಗಿಸಿರಲಿಲ್ಲ. ಸಾಲ ಹಿಂದಿರುಗಿಸುವAತೆ ವಿಜು ಬಳಿ ಕೇಳಿದಾಗ ನನಗೆ ಯಾವುದೇ ಸಾಲ ನೀಡಿಲ್ಲ ಎಂಬ ಉಡಾಫೆಯ ಮಾತುಗಳನ್ನಾಡಿ ಜನರ ಮುಂದೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾನೆ ಎಂದು ಶಶಿಕಲಾ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಎಂ.ಎ. ವಿಜು ಅವರ ವಿರುದ್ಧ ದೂರು ನೀಡಿದ್ದು, ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಸುಬ್ಬಯ್ಯ ಮುಂದಿನ ಕ್ರಮ ಕೈಗೊಂಡಿದ್ದಾರೆ.