ಕುಶಾಲನಗರ, ಜ. ೨೬: ಜೆಸಿ ಕುಶಾಲನಗರ ಕಾವೇರಿಯ ೧೯ನೇ ಪದಗ್ರಹಣ ಸಮಾರಂಭ ನಡೆಯಿತು.

ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೆಸಿ ಪ್ರಶಾಂತ್ ನೂತನ ಅಧ್ಯಕ್ಷ ಜೆಸಿ ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕರಾದ ಕೆ.ವಿ. ಸುರೇಶ್ ಮಾತನಾಡಿದರು. ಜೆಸಿಐ ಭಾರತದ ವಲಯ ಹದಿನಾಲ್ಕರ ಪೂರ್ವ ವಲಯ ಅಧ್ಯಕ್ಷ ಜೆಸಿ ದೇವಿಪ್ರಸಾದ್ ಸಮ್ಮುಖದಲ್ಲಿ ಉಪಾಧ್ಯಕ್ಷರಾದ ಜೆಸಿ ರಾಜೀವ್ ಜಿ.ಪಿ. ಸಾರಥಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಕಾರ್ಯಕಾರಿ ಮಂಡಳಿಗೆ ನೂತನ ಅಧ್ಯಕ್ಷ ಜೆಸಿ ಮಂಜುನಾಥ್ ಪ್ರಮಾಣ ವಚನ ಬೋಧಿಸಿದರು.

ಜೆಸಿರೇಟ್ ಚೇರ್ ಪರ್ಸನ್ ಮೀನಾ ಮಂಜುನಾಥ್, ಜೆಜೆಸಿ ಪ್ರಣವ್ ಗೀತ್, ಕಾರ್ಯದರ್ಶಿಯಾಗಿ ರಾಕೇಶ್, ಉಪಾಧ್ಯಕ್ಷರುಗಳಾಗಿ ಕವಿತಾ ಪ್ರವೀಣ್, ಜಿತೇಶ್ ಪುರಿ, ಹಿತನ್ ಗೌಡ, ಕೃಷ್ಣಮೂರ್ತಿ, ನಿರ್ದೇಶಕರುಗಳಾಗಿ ಶೋಭಾ, ಲೋಕೇಶ್, ಸುಶಾಂತ್, ಪ್ರಮಾಣ ವಚನವನ್ನು ಸ್ವೀಕರಿಸಿದರು. ಇದೇ ಸಂದರ್ಭ ಘಟಕದ ನೂತನ ಲಾಂಛನ ಬಿಡುಗಡೆ ಮಾಡಲಾಯಿತು.

ಹದಿನಾಲ್ಕರ ವಲಯ ನಿರ್ದೇಶಕರಾದ ಕೆ ಪ್ರವೀಣ್, ಘಟಕದ ಪೂರ್ವ ಅಧ್ಯಕ್ಷರುಗಳಾದ ಅಮೃತರಾಜ್, ಎಸ್.ಎನ್. ರಾಜೇಂದ್ರ, ರಂಗಸ್ವಾಮಿ, ನಂದಕುಮಾರ್, ನಂದೀಶ್ ಕುಮಾರ್, ರೋಟರಿ ಅಧ್ಯಕ್ಷ ಚಂದ್ರಶೇಖರ್, ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.