ಮಡಿಕೇರಿ, ಜ. ೨೬: ಸಚಿವ ಸಂಪುಟದಲ್ಲಿ ಪದೇ ಪದೇ ಬದಲಾವಣೆಯಾಗುತ್ತಿರುವುದರಿಂದ ಸರ್ಕಾರಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ವಸತಿ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.

ಎಂ.ಟಿ.ಬಿ. ನಾಗರಾಜು ವಸತಿ ಖಾತೆ ಸಚಿವ ಸ್ಥಾನ ಕೇಳುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಕೃಷಿ ಕಾಯ್ದೆ ಬ್ರಿಟಿಷ್ ಕಾಲದ ಕಾಯ್ದೆಯಾಗಿತ್ತು, ಅದನ್ನು ಯುಪಿಎ ಸರ್ಕಾರ ರದ್ದುಪಡಿಸಲು ಚಿಂತಿಸಿದರು. ಅದನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ. ರೈತರ ಹೋರಾಟ ಶಾಂತಿಯುತವಾಗಿರಬೇಕು. ಕಾಯ್ದೆ ಬಗ್ಗೆ ಜನರಲ್ಲಿ ಹಂತ ಹಂತವಾಗಿ ಅರಿವು ಮೂಡಿಸಲಾಗುತ್ತದೆ ಎಂದರು.