ನಾಪೋಕ್ಲು, ಜ. ೨೫: ಕುಂಜಿಲ ಪಯ್‌ನರಿ ರಿಲೀಫ್ ಫಂಡ್ ವತಿಯಿಂದ ಆಯೋಜಿಸಲಾಗಿದ್ದ ೧೩ನೇ ವರ್ಷದ ಬಡ ಕನ್ಯೆಯರ ಸಾಮೂಹಿಕ ವಿವಾಹ ವಿಜೃಂಭಣೆ ಯಿಂದ ನೆರವೇರಿತು.

ಕುಂಜಿಲ ಗ್ರಾಮದ ಸಾಜಿದಾ ಹಾಗೂ ಸುಳ್ಯದ ರುಕೈದಾ ಎಂಬ ವಧುಗಳು ಕುಂಜಿಲ ರಿಲೀಫ್ ಫಂಡ್‌ನ ಸಹಕಾರದಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಶೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಂಜಿಲದ ರೌಳತುಲ್ ಉವಾಂ ದಕ್ಸಿನ ಮರ‍್ರಿಸ್ ವಧುಗಳು ಕುಂಜಿಲ ರಿಲೀಫ್ ಫಂಡ್‌ನ ಸಹಕಾರದಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಶೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಂಜಿಲದ ರೌಳತುಲ್ ಉವಾಂ ದಕ್ಸಿನ ಮರ‍್ರಿಸ್ ನಡೆಸಿಕೊಟ್ಟರು. ವೇದಿಕೆಯಲ್ಲಿ ರಿಲೀಫ್ ಫಂಡ್‌ನ ಅಧ್ಯಕ್ಷ ಅಹ್ಮದ್ ಬಶೀರ್ ಪೊಯಕರೆ, ಕಾರ್ಯದರ್ಶಿ ಹಾರಿಸ್ ಝೈನಿ, ಕಣ್ಣೂರಿನ ಮರ್ಕಝುಲ್ ಹುದಾ ಪ್ರಾಂಶುಪಾಲ ಅಲ್ ಹಾಜಿ ಅಬ್ದರ‍್ರಶೀದ್ ಧಾರಮಿ, ಎಡಪಲಂ ನಾಯಿಬ್ ಖಾಝಿ ಅಲ್ ಹಾಜಿ ಮಹಮೂದ್ ಮುಸ್ಲಿಯಾರ್, ಅಲ್ ಹಾಜಿ ಅಬ್ದುಲ್ ಫೈಝಿ, ರಿಲೀಫ್ ಫಂಡ್‌ನ ಕೋಶಾಧಿಕಾರಿ ಫೈಝಲ್ ಜೌಹರಿ ಮತ್ತಿತರರಿದ್ದರು.

ಈ ಸಂದರ್ಭದಲ್ಲಿ ರಿಲೀಫ್ ಫಂಡ್ ವತಿಯಿಂದ ನಿರ್ಮಿಸಲಾದ ಮನೆಯ ಕೀಯನ್ನು ಕುಂಜಿಲ- ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ಕಡುಬಡವರಾದ ಹಮೀದ್ ಅವರಿಗೆೆ ಹಸ್ತಾಂತರಿಸಲಾಯಿತು.