ಗೋಣಿಕೊಪ್ಪ ವರದಿ, ಜ. ೨೫ : ನಾಲ್ಕು ದಿನಗಳ ಕಾಲ ಕೇರಳದ ಉಳಿಕಲ್‌ನಲ್ಲಿ ನಡೆದ ಬೈತೂರು ಉತ್ಸವ ಸಂಪನ್ನಗೊAಡಿತು.

ಕೊಡಗು-ಕೇರಳ ದೇವರುಗಳ ಸಮ್ಮಿಲನದ ಸಾಂಪ್ರದಾಯಿಕ ಆಚರಣೆಯಂತೆ ಎಟ್ಟೂಟದಿಂದ ಪನಂದೂಟ ಎಂಬ ಆಚರಣೆ ನಡೆಯಿತು. ಎಟ್ಟೂಟ, ಒಯಿಂಬದೂಟ, ಪತ್ತೂಟ, ಪನಂದೂಟ ಎಂಬ ಆಚರಣೆ ನಡೆಯಿತು. ಆಚರಣೆಯಂತೆ ಪುಗ್ಗೇರ ಕುಟುಂಬದ ಹಾಗೂ ಕೇರಳದ ನಾಡಿನ ಎತ್ತುಪೋರಾಟಕ್ಕೆ ದೇವರಿಗೆ ಅಕ್ಕಿ ಸಮರ್ಪಿಸುವ ಕಾರ್ಯ ನಡೆಯಿತು.

ನೈಯಾಟ್‌ಕಾರ, ಅಭಿಷೇಕ, ಉತ್ಸವ ಮೂರ್ತಿ ಪ್ರದಕ್ಷಿಣೆ, ಮೃತ್ಯುಂಜಯ ಪೂಜೆ ನಡೆಯಿತು. ಪುಗ್ಗೇರ ಕುಟುಂಬ ಹಾಗೂ ಬೆರಳೆಣಿಕೆಯ ಭಕ್ತರು ಪಾಲ್ಗೊಂಡರು. ಕೊಡಗಿನ ಎತ್ತ್ ಪೋರಾಟ, ದುಡಿಕೊಟ್ಟ್ ಪಾಟ್, ಒಂದಷ್ಟು ದೇವರುಗಳ ಸಮಾಗಮದಿಂದ ಆಚರಣೆಗೆ ತೆರೆ ಎಳೆಯಲಾಯಿತು. ತಕ್ಕ ಪುಗ್ಗೇರ ಪೊನ್ನಪ್ಪ ನೇತೃತ್ವದಲ್ಲಿ ನಡೆಯಿತು.