ಮಡಿಕೇರಿ, ಜ.೨೫ : ತಾ. ೨೧ರ “ಶಕ್ತಿ”ಯ ‘ನಿಮ್ಮ ಪತ್ರ’ ವಿಭಾಗದಲ್ಲಿ ಗೋಮಾಂಸ ವಿಚಾರದ ಕುರಿತು ತಾನು ಪ್ರಮಾಣ ಮಾಡಲು ತೆರಳಿ ತಪ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಕೆಲವರು ಸಲ್ಲದ ಹೇಳಿಕೆ ನೀಡಿರುವ ದಾಗಿ ತಿಳಿಸಿರುವ ಕಾಕೋಟು ಪರಂಬು ಕಾಂಗ್ರೆಸ್ ವಲಯ ಅಧ್ಯಕ್ಷರೊಬ್ಬರು ಇದೀಗ “ಶಕ್ತಿ” ಗೆ ಈ ಕೆಳಗಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

“ಈ ಹಿಂದೆ ವಿವಾದ ತಲೆದೋರಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಮುಖಂಡರುಗಳು ಒಂದೆಡೆ ಸೇರಿದರು. ಮಧ್ಯೆ ಪ್ರವೇಶಿಸಿದ ಗ್ರಾಮಸ್ಥರು ಇದರ ಕುರಿತು ದೇವರ ಮುಂದೆ ಪ್ರಮಾಣ ಮಾಡುವದು ಬೇಡ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಇದಕ್ಕೆ ಸಂಬAಧ ಪಟ್ಟಂತೆ ಪರ-ವಿರೋಧ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡದಂತೆ ಮನವೊಲಿಸಿದರು. ಇದಕ್ಕೆ ಎರಡೂ ಪಕ್ಷಗಳ ಮುಖಂಡರುಗಳು ಒಪ್ಪಿಗೆ ನೀಡಿ ಸೌಹಾರ್ದಯುತವಾಗಿ ಇದನ್ನು ಇತ್ಯರ್ಥಗೊಳಿಸಲಾಗಿದೆ. ಹೀಗಿರುವಾಗ ಮತ್ತೆ ಇದನ್ನು ಕೆದಕಿದುದು ಸರಿಯಲ್ಲ”