ಮಡಿಕೇರಿ, ಜ. ೨೫: ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಆಡಳಿತ ಮಂಡಳಿ ಸಭೆ ಸೀತಾಲಕ್ಷಿö್ಮ ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿದ್ದ ಮೋಹನ್ ಮೊಣ್ಣಪ್ಪ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಎಸ್. ಪ್ರಕಾಶ್ ಅವರನ್ನು ಒಮ್ಮತ ದಿಂದ ಆಯ್ಕೆ ಮಾಡ ಲಾಯಿತು ಹಾಗೂ ಕಾರ್ಯಾಧ್ಯಕ್ಷರಾಗಿ ರವೀಂದ್ರ ರೈ ಬಿ.ಕೆ. ಇವರು ಆಯ್ಕೆಯಾದರು.