ವೀರಾಜಪೇಟೆ, ಜ. ೨೫: ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷ ಮಹಾಸಭೆ ಇಂದು ಅಧ್ಯಕ್ಷ ಎಂ.ಎA. ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಮಾಜಿ ಸಿಇಒ, ಹಾಲಿ ನಿರ್ದೇಶಕ ಸಿ.ಎಂ. ಅಚ್ಚಯ್ಯ ಅವರ ವಿರುದ್ಧ ಕೇಳಿ ಬಂದ ರೂ. ೩೫ ಲಕ್ಷದ ಹಣ ದುರುಪಯೋಗಕ್ಕೆ ಸಂಬAಧ ಪಟ್ಟಂತೆ ಇಂದು ಬಿರುಸಿನ ಚರ್ಚೆ ನಡೆಯಿತು.೨೦೧೯-೨೦೨೦ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಉಲ್ಲೇಖಿಸಿದಂತೆ ಮಾಜಿ ಸಿಇಒ ಅವರ ಅವಧಿಯಲ್ಲಿ ಕಂಡುಬAದಿರುವ ಹಣದ ವ್ಯತ್ಯಾಸಕ್ಕೆ ಸಹಕಾರ ಸಂಘಗಳ ಲೆಕ್ಕ ಪರಿಶೋಧಕರು ೨೦೧೯-೨೦ರ ಮೇಲ್ವಿಚಾರಣಾ ವರದಿ ಸಲ್ಲಿಸಿದ್ದು, ಹಣ ವಸೂಲಾತಿಗೆ ಆದೇಶಿಸಿದ್ದನ್ನು ಪ್ರಶ್ನಿಸಿದ ಸಂಘದ ಸದಸ್ಯರು ಮಾಜಿ ಸಿಇಒ ಅಚ್ಚಯ್ಯನವರಿಂದ ಹಣ ವಸೂಲಾತಿಗೆ ಪಟ್ಟು ಹಿಡಿದರು.ಈ ನಡುವೆ ೨೦೧೯-೨೦ನೇ ಲೆಕ್ಕಪರಿಶೋಧನಾ ವರದಿ ಬಂದ ನಂತರ ಸಭೆ ನಡೆಸಿದ ಆಡಳಿತ ಮಂಡಳಿ ಸಿ.ಎಂ. ಅಚ್ಚಯ್ಯನವರ ಜಾಗ (೨.೬೫ ಎಕರೆ) ವನ್ನು ಸಂಘದ ಹೆಸರಿಗೆ ಬರೆಸಿಕೊಂಡಿರುವ ಒಪ್ಪಂದ -ಕರಾರು ಪತ್ರವನ್ನು ಪ್ರದರ್ಶಿಸಿ ದರಲ್ಲದೆ, ಇನ್ನೂ ಎರಡು ತಿಂಗಳ ಅವಧಿಯೊಳಗೆ ಸಿ.ಎಂ. ಅಚ್ಚಯ್ಯ ನವರು ತಮ್ಮ ಸ್ವಂತ ಖರ್ಚಿನಲ್ಲಿ ಲೆಕ್ಕಪರಿಶೋಧಕರನ್ನು ನೇಮಿಸಿ ಕೊಂಡು ರೂ. ೩೫ ಲಕ್ಷದ ಹಣ ದುರು ಪಯೋಗಕ್ಕೆ ಸೂಕ್ತ ಸಮಜಾಯಿಷಿಕೆ ನೀಡುವಂತೆ, ಮೊದಲ ಪುಟದಿಂದ) ತಪ್ಪಿದಲ್ಲಿ ಸಿ.ಎಂ. ಅಚ್ಚಯ್ಯ ಅವರ ಜಾಗವನ್ನು ಹರಾಜು ಮಾಡಿ ಸಂಘದ ನಷ್ಟವನ್ನು ಭರಿಸಿಕೊಳ್ಳುವಂತೆ ತೀರ್ಮಾನಿಸ ಲಾಯಿತು.
ಇದಕ್ಕೆ ಬೇಕಾದಂತಹ ಪುಸ್ತಕ - ಲೆಕ್ಕಪತ್ರಗಳನ್ನು ಬೇರೆಯೇ ಕಪಾಟಿನಲ್ಲಿ ಇರಿಸಿ, ಅದರ ಕೀಲಿ ಕೈಯನ್ನು ಉಪಾಧ್ಯಕ್ಷ ಕೆ.ಎನ್. ಅಯ್ಯಪ್ಪ ಅವರಿಗೆ ಹಸ್ತಾಂತರಿ ಸಲಾಯಿತು. ನಾಮ ನಿರ್ದೇಶಕರುಗಳ ಸಮ್ಮುಖದಲ್ಲಿ ಲೆಕ್ಕ ಪರಿಶೋಧನೆ ನಡೆಸುವಂತೆ ತೀರ್ಮಾನಿಸಲಾಯಿತು. -ಪ್ರವೀಣ್ ಚಂಗಪ್ಪ