ಟ್ರಾö್ಯಕ್ಟರ್ ಪೆರೇಡ್‌ಗೆ ಅನುಮತಿ ನಿರಾಕರಣೆ

ಬೆಂಗಳೂರು, ಜ. ೨೫: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ತಾ.೨೬ ರಂದು ನಗರದಲ್ಲಿ ಟ್ರಾö್ಯಕ್ಟರ್ ಪೆರೇಡ್ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅನುಮತಿ ನಿರಾಕರಿಸಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು ೨೦,೦೦೦ ರೈತರು ತುಮಕೂರು ರಸ್ತೆಯ ನೈಸ್ ರಸ್ತೆಯಿಂದ ಸ್ವಾತಂತ್ರ‍್ಯ ಉದ್ಯಾನವನದವರೆಗೆ ಟ್ರಾö್ಯಕ್ಟರ್ ಪೆರೇಡ್ ನಡೆಸಲು £ರ್ಧರಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್ ಆಯುಕ್ತರು, ಗಣರಾಜ್ಯೋತ್ಸವ ಭದ್ರತೆ ಸಂಬAಧ ಅಧಿಕಾರಿಗಳ ಸಭೆ ನಡೆಸಲಾಯಿತು. ಇದೇ ವೇಳೆಯೇ ರೈತ ಟ್ರಾö್ಯಕ್ಟರ್ ರ‍್ಯಾಲಿ ಬಗ್ಗೆಯೂ ಚರ್ಚೆ ಆಯಿತು ಎಂದರು. ಗಣರಾಜ್ಯೋತ್ಸವ ಆಚರಣೆ ಶಾಂತಿಯುತವಾಗಿ ನಡೆಸಲು ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ತಾ. ೨೫ರ ಸಂಜೆಯಿAದಲೇ ನಗರದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ ಎಂದೂ ಹೇಳಿದರು. ನಗರದಲ್ಲಿ ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ £Ãಡಲಾಗುವುದು. ಟ್ರಾö್ಯಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ, ಅಂಥ ಪ್ರತಿಭಟನಾಕಾರರನ್ನು ನಗರದ ಒಳಗೆ ಬಿಡುವುದಿಲ್ಲ ನಗರದಲ್ಲಿ ಹಿಂದೆ ಎಂದು ಟ್ರಾö್ಯಕ್ಟರ್ ಮೂಲಕ ಪ್ರತಿಭಟನೆ ನಡೆದಿಲ್ಲ.

ಪ್ರಶ್ನೆ ಪತ್ರಿಕೆ ಸೋರಿಕೆ: ಕಿಂಗ್ ಪಿನ್‌ಗಳ ಬಂಧನ

ಬೆAಗಳೂರು, ಜ. ೨೫: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಕಿಂಗ್ ಪಿನ್ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ದ್ವಿತೀಯ ದರ್ಜೆ ಸಹಾಯಕ ರಮೇಶ್ ಹಾಗೂ ಕಂಟ್ರೋಲ್ ಆಫ್ ಎಕ್ಸಾಂ ಡಿವಿಷನ್‌ನಲ್ಲಿ ಸ್ಟೆನೋಗ್ರಾಫರ್ ಆಗಿ ಕಾರ್ಯ£ರ್ವಹಿಸುತ್ತಿದ್ದ ಸನಾ ಬೇಡಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳು ಕೆಪಿಎಸ್ ಸಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ಬಂಧಿತ ಸನಾ, ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಟೈಪ್ ಮಾಡುವ ಕೆಲಸ ಮಾಡುತ್ತಿದ್ದ. ಅಲ್ಲದೇ, ಸ್ವತಃ ಆರೋಪಿ ರಮೇಶ್ ಎಫ್‌ಡಿಎ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ. ಆದ್ದರಿಂದಲೇ ಅಕ್ರಮವಾಗಿ ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದರು. ನಂತರ ಇವರು ತಮ್ಮ ಸ್ನೇಹಿತ ಆರೋಪಿ ಚಂದ್ರು ಎಂಬುವವರಿಗೆ ಪ್ರಶ್ನೆ ಪತ್ರಿಕೆ £Ãಡಿದ್ದರು. ಬಳಿಕ ಒಬ್ಬರಿಂದ ಒಬ್ಬರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಅನುದಾನ ನೀಡಲು ಕೇಂದ್ರ ಒಪ್ಪಿಗೆ

ಬೆಂಗಳೂರು, ಜ. ೨೫: ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಎರಡು ದಿನಗಳಲ್ಲೇ ಕೇಂದ್ರ ರಾಸಾಯ£ಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ವಿವರವಾದ ಯೋಜನಾ ವರದಿಯನ್ನು ಶೀಘ್ರದಲ್ಲಿ ಸಲ್ಲಿಸುವಂತೆ ರಾಜ್ಯವನ್ನು ಕೋರಿದ್ದಾರೆ. ಯೋಜನಾ ವೆಚ್ಚದ ಶೇಕಡಾ ೫೦ ರಷ್ಟು, ನಾಲ್ಕು ಕಂತುಗಳಲ್ಲಿ ೪೦ ಕೋಟಿ ರೂ.ಗಳನ್ನು ನೀಡಲು ಕೇಂದ್ರ ಸರ್ಕಾರ ತಯಾರಾಗಿದೆ ಎಂದು ಹೇಳಿದ ಸಚಿವ ಸದಾನಂದ ಗೌಡ ಯೋಜನೆಗಾಗಿ ಆರು ತಿಂಗಳಲ್ಲಿ ಅಂತಿಮ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಆದ್ದರಿಂದ ಯೋಜನೆ ಯಾವ ವಿಳಂಬವಿಲ್ಲದೆ ಜಾರಿಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಕರ್ನಾಟಕದ ಕರಾವಳಿ ನಗರ ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ತಲಾ ಒಂದೊAದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವ ಬಗ್ಗೆ ಮೊನ್ನೆ ನಡೆದ ರಾಸಾಯ£ಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದರು. ಪ್ಲಾಸ್ಟಿಕ್ ಉದ್ಯಾನವನ ಇಕೋಸಿಸ್ಟಮ್ ಅನ್ನು ಒಳಗೊಂಡಿದ್ದು ಮೂಲಮಾದರಿ ಮತ್ತು ವರ್ಚುವಲೈಸೇಶನ್, ವಿನಾಶಕಾರಿಯಲ್ಲದ ವಸ್ತುಗಳ ಪರೀಕ್ಷೆ, ತರಬೇತಿ, ಉಗ್ರಾಣ, ಪ್ಲಾಸ್ಟಿಕ್ ಮರುಬಳಕೆ, ಉಪಕರಣಗಳ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ಸಾಮಾನ್ಯ ಸೌಲಭ್ಯಗಳನ್ನು ಶಕ್ತಗೊಳಿಸುವ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಇದು ಆರ್ಥಿಕತೆಗೆ ಹೆಚ್ಚು ಪರಿಣಾಮಕಾರಿಯಾದ ಕೊಡುಗೆ ನೀಡಲಿದೆ ಎಂದು ಸದಾನಂದ ಗೌಡ ಹೇಳಿದರು.

ಸಿಆರ್‌ಪಿಎಫ್ ಎಎಸ್‌ಐಗೆ ಮರಣೋತ್ತರ ರಾಷ್ಟçಪತಿ ಪೊಲೀಸ್ ಪದಕ

ನವದೆಹಲಿ, ಜ. ೨೫: ೨೦೧೯ರಲ್ಲಿ ಪುಲ್ವಾಮಾದಲ್ಲಿ ೪೦ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಸ್ಫೋಟಕ ತುಂಬಿದ ಉಗ್ರರ ಕಾರು ಬೆನ್ನಟ್ಟಿ ಗುಂಡು ಹಾರಿಸಿದ್ದ ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್‌ಐ) ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಪೊಲೀಸ್ ಗೌರವವಾದ ರಾಷ್ಟçಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ ಪಟ್ಟಿಯ ಪ್ರಕಾರ, ಈ ವರ್ಷ ಒಟ್ಟು ೨೦೭ ಪೊಲೀಸ್ ಪದಕಗಳು ಮತ್ತು ೮೯ ರಾಷ್ಟçಪತಿಗಳ ಪೊಲೀಸ್ ಪದಕ ಹಾಗೂ ಶ್ರೇಷ್ಠ ಸೇವೆಗಾಗಿ ೬೫೦ ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.

ಆಕಾಶ್ ಕ್ಷಿಪಣಿ ಚೊಚ್ಚಲ ಉಡಾವಣೆ ಪರೀಕ್ಷೆ ಯಶಸ್ವಿ

ನವದೆಹಲಿ, ಜ. ೨೫: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹೊಸ ತಲೆಮಾರಿನ ಆಕಾಶ್ ಕ್ಷಿಪಣಿಯ ಚೊಚ್ಚಲ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ. ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಯ ಪರೀಕ್ಷೆಯನ್ನು ಡಿಆರ್ ಡಿಒ ನಡೆಸಿತ್ತು. ಆಕಾಶ್ ಕ್ಷಿಪಣಿ ನಿರ್ದಿಷ್ಟ ಗುರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ವಿಜ್ಞಾ£ಗಳ ತಂಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.

ಸೈನಿಕರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ; ಚೀನಾಗೆ ಭಾರತ ತಾಕೀತು

ನವದೆಹಲಿ, ಜ. ೨೫: ವಾಸ್ತವ ಗಡಿ £ಯಂತ್ರಣ ರೇಖೆಯಲ್ಲಿನ £ಯೋಜಿಸಿರುವ ಸಾವಿರಾರು ಚೀನಾ ಯೋಧರನ್ನು ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಭಾರತ ಚೀನಾಕ್ಕೆ ತಾಕೀತು ಮಾಡಿದೆ. ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನಡುವೆ ನಡೆದ ೯ನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತ ಪ್ರಬಲವಾಗಿ ಒತ್ತಾಯಿಸಿದೆ. ಚೀನಾ ಪೂರ್ವ ಲಡಾಖ್ ಪ್ರದೇಶದಲ್ಲಿ ನವೆಂಬರ್ ೬ ರಂದು ಟ್ಯಾಂಕ್‌ಗಳು, ವೈಮಾನಿಕ ರಕ್ಷಣಾ ಸಾಮಗ್ರಿಗಳೊಂದಿಗೆ ಸುಮಾರು ೫೦ ಸಾವಿರ ಪಡೆಗಳನ್ನು ನಿಯೋಜಿಸಿದ ಬಳಿಕ ಎರಡು ದೇಶಗಳ ನಡುವೆ ಮಾತುಕತೆ ನಡೆದಿತ್ತು. ಮಾತುಕತೆ ತಡರಾತ್ರಿವರೆಗೂ ಜರುಗಿದೆ ಭಾರತ ನಿಯೋಗದ ನೇತೃತ್ವ ವಹಿಸಿದ್ದ ಲೇಹ್ ಮೂಲದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಎಲ್‌ಎಸಿಯಲ್ಲಿನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾಕ್ಕೆ ಒತ್ತಾಯಿಸಿದರು ಎಂದು ಸೇನಾ ಮೂಲಗಳು ಹೇಳಿವೆ. ಕಳೆದ ವರ್ಷದ ಆರಂಭದಿAದ ಇದುವರೆಗೂ ಎಲ್‌ಎಸಿಯಲ್ಲಿ ಭಾರತ ಮತ್ತು ಚೀನಾದ ಲಕ್ಷಕ್ಕೂ ಅಧಿಕ ಪಡೆಗಳು ಗಡಿಯಲ್ಲಿ ಬೀಡುಬಿಟ್ಟಿವೆ.

ರಾಗಿಣಿ ಬಿಡುಗಡೆ

ಬೆಂಗಳೂರು, ಜ. ೨೫: ಡ್ರಗ್ಸ್ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೆ ಒಳಗಾಗಿದ್ದ ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಜಾಮೀನು ಪಡೆದು ೧೪೫ ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ರೂ. ೩ ಲಕ್ಷ ಮೌಲ್ಯದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗೆ ಒಪ್ಪಿ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ.