ಕೂಡಿಗೆ, ಜ. ೨೫ : ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಸಂಚು ರೂಪಿಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಣಗಾಲ ಗ್ರಾಮದ ಪ್ರದೀಪ್ ಬಂಧಿತ ಆರೋಪಿ. ತಾ. ೨೨ ರಂದು ತೊರೆನೂರು ಗ್ರಾಮದ ಶಿವರಾಜ್ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ರಾತ್ರಿ ವೇಳೆ ಮನೆಗೆ ನುಗ್ಗಿ ಮನೆಯಲ್ಲಿದ್ದ ೮ ಗ್ರಾಂ ಕೂಡಿಗೆ, ಜ. ೨೫ : ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಸಂಚು ರೂಪಿಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಣಗಾಲ ಗ್ರಾಮದ ಪ್ರದೀಪ್ ಬಂಧಿತ ಆರೋಪಿ. ತಾ. ೨೨ ರಂದು ತೊರೆನೂರು ಗ್ರಾಮದ ಶಿವರಾಜ್ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ರಾತ್ರಿ ವೇಳೆ ಮನೆಗೆ ನುಗ್ಗಿ ಮನೆಯಲ್ಲಿದ್ದ ೮ ಗ್ರಾತೂಕದ ಚಿನ್ನದ ಸರ, ೨ ಗ್ರಾಂ ತೂಕದ ಬಳೆ, ಕಾಲು ಚೈನ್, ಬೆಳ್ಳಿಯ ವಸ್ತು ಸೇರಿದಂತೆ ರೂ ೫ ಸಾವಿರ ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬAಧ ಶಿವರಾಜ್ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣವನ್ನು ದಾಖಲಿಸಿ ಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಯನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪೋಬೇಷೆನರಿ ಪಿಎಸ್‌ಐ ಶ್ರವಣ್, ಸಹಾಯಕ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿಗಳಾದ ಸಜಿ, ದಯಾನಂದ, ಶ್ರೀನಿವಾಸ, ಮಂಜುನಾಥ್, ಪ್ರಸನ್ನ, ಸÀನತ್ ಇದ್ದರು. ಂ