ಪೊನ್ನಂಪೇಟೆ, ಜ. ೨೩: ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ಹೆಚ್.ಎಸ್. ಸುರೇಶ್ ನೇತೃತ್ವದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವಿರುದ್ಧ ಲಸಿಕೆ ನೀಡಲಾಯಿತು. ತಾ. ೧೮ ರಂದು ೨೨ ಮಂದಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ತಾ. ೨೨ ರಂದು ೨೨ ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಲಸಿಕೆ ನೀಡಲಾಯಿತು. ಕೋವಿಡ್ ಲಸಿಕೆ ನೀಡುವ ತಂಡದಲ್ಲಿ ಡಾ. ಪ್ರಪುಲ್ಲ, ಶುಶ್ರೂಷಕಿ ನಳಿನಿ, ಕಿರಿಯ ಆರೋಗ್ಯ ಸಹಾಯಕಿ ಕಾವೇರಮ್ಮ, ಸಿಬ್ಬಂದಿಗಳಾದ ಡೈಸನ್, ಗೋಪಾಲ, ಕಾಂತಿ, ವಿಶ್ಮ, ದರ್ಶನ್, ಹಂಸಶ್ರೀ ಇನ್ನಿತರರು ಇದ್ದರು.