ನಾಪೋಕ್ಲು, ಜ. ೨೩: ಸಮೀಪದ ಬಲ್ಲಮಾವಟಿ ನೇತಾಜಿ ಪ್ರೌಢಶಾಲಾ ಮೈದಾನದಲ್ಲಿ ನೆಲಜಿ ನಾಡ್ ಮುಕ್ತ ಹಿಂದೂ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ೨೪ ತಂಡಗಳು ಭಾಗವಹಿಸಲಿದ್ದÄ, ಫೈನಲ್ ಪಂದ್ಯಾಟ ತಾ. ೨೪ ರಂದು (ಇಂದು) ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಜಿ ನಾಡು ಯೂತ್‌ಕ್ಲಬ್‌ನ ಅಧ್ಯಕ್ಷ ಕೈಬುಲಿರ ವಚನ್ ಕುಟ್ಟಪ್ಪ ವಹಿಸಿದ್ದರು. ವೇದಿಕೆಯಲ್ಲಿ ನೇತಾಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಚ್ಚೂರ ರವೀಂದ್ರ, ಚೋಕಿರ ಬಾಬಿ ಭೀಮಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಣವಟ್ಟಿರ ಹರೀಶ್ ಕುಶಾಲಪ್ಪ, ಬಾಳೆಯಡ ದೀನಾ ಮಾಯಮ್ಮ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಮತ್ತಿತರರಿದ್ದರು.