ಮಡಿಕೇರಿ, ಜ. ೨೩: ೨೦೧೯-೨೦ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪೂರ್ಣಗೊಂಡ ಮಳೆಹಾನಿ ಕಾಮಗಾರಿಗಳಿಗೆ ಶೇ. ೭೫ ರಷ್ಟು ಅನುದಾನವನ್ನು ಬಿಡುಗಡೆ ಗೊಳಿಸದಿದ್ದಲ್ಲಿ ತಾ. ೨೫ ರಂದು ಜಿಲ್ಲಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎ. ರವಿ ಚಂಗಪ್ಪ, ಸಮರ್ಪಕವಾಗಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಯಾಗದೆ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಮೊದಲು ಕಾಮಗಾರಿ ಪ್ರಾರಂಭವಾಗು ವಾಗ ಶೇ. ೭೫ ಹಾಗೂ ಪರಿಶೀಲನೆ ಬಳಿಕ ಮಡಿಕೇರಿ, ಜ. ೨೩: ೨೦೧೯-೨೦ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪೂರ್ಣಗೊಂಡ ಮಳೆಹಾನಿ ಕಾಮಗಾರಿಗಳಿಗೆ ಶೇ. ೭೫ ರಷ್ಟು ಅನುದಾನವನ್ನು ಬಿಡುಗಡೆ ಗೊಳಿಸದಿದ್ದಲ್ಲಿ ತಾ. ೨೫ ರಂದು ಜಿಲ್ಲಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎ. ರವಿ ಚಂಗಪ್ಪ, ಸಮರ್ಪಕವಾಗಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಯಾಗದೆ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಮೊದಲು ಕಾಮಗಾರಿ ಪ್ರಾರಂಭವಾಗು ವಾಗ ಶೇ. ೭೫ ಹಾಗೂ ಪರಿಶೀಲನೆ ಬಳಿಕ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಗೆ ಬಾಕಿ ಇದೆ. ಶೀಘ್ರದಲ್ಲಿ ಹಣ ಬಿಡುಗಡೆ ಗೊಳಿಸಬೇಕು. ಕಾಮಗಾರಿಗಳಿಗೆ ೭೫:೨೫ ಅನುಪಾತದಲ್ಲಿ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ರಾಜೀವ್ ಲೋಚನ್, ಸದಸ್ಯ ಸದಾಶಿವ ರೈ ಇದ್ದರು.