*ಗೋಣಿಕೊಪ್ಪ, ಜ. ೨೩: ನಾಟಿ ಹಸುಗಳ ವ್ಯವಸ್ಥಿತ ಪಾಲನೆಯಿಂದ ತಮ್ಮ ಆಸಕ್ತಿದಾಯಕ ಹೈನುಗಾರಿಕೆ ಯಲ್ಲಿ ಯಶಸ್ವಿ ಹಾದಿಯನ್ನು ತಿತಿಮತಿ ಸಮೀಪದ ನೊಕ್ಯ ಭದ್ರಗೊಳ ಗ್ರಾಮದ ದಂಪತಿ ಮಂಜುನಾಥ್ ಮತ್ತು ಹರಿಣಿ ಅವರು ಕಂಡುಕೊAಡಿದ್ದಾರೆ. ನಿತ್ಯ ಸುಮಾರು ೬೦ ರಿಂದ ೭೦ ಲೀಟರ್ ಹಾಲು ಪಡೆಯುವ ಮೂಲಕ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ. ಸುಮಾರು ೯ ನಾಟಿ ಹಸುಗಳನ್ನು ಪಾಲನೆ ಮಾಡುತ್ತಿರುವ ಇವರು ಕಳೆದ ಎರಡು ವರ್ಷಗಳಿಂದ ಹೈನುಗಾರಿಕೆ ಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ತಿತಿಮತಿ, ಗೋಣಿಕೊಪ್ಪ ಭಾಗಗಳಿಗೆ ನಿತ್ಯ ತಮ್ಮ ವಾಹನದಲ್ಲಿ ಹಾಲು ಸರಬರಾಜು ಮಾಡುವ ಮೂಲಕ ಸ್ವತಃ ತಾವೇ ಹಾಲಿನ ವ್ಯಾಪಾರದಲ್ಲೂ ತೊಡಗಿಸಿ ಕೊಂಡಿದ್ದಾರೆ. ಇದಕ್ಕಾಗಿ ಸುಮಾರು ೫೦ ಸಾವಿರ ರೂಪಾಯಿಗಳನ್ನು ವ್ಯಯಿಸಿ ಗಾಜಿನ ಬಾಟಲಿಗಳನ್ನು ಖರೀದಿಸಿ. ಒಂದು ಲೀಟರ್ ಹಾಗೂ ಅರ್ಧ ಲೀಟರ್ ಬಾಟಲ್ ಗಳಲ್ಲಿ ಹಾಲು ತುಂಬಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಜತೆಗೆ ಬೆಣ್ಣೆ-ತುಪ್ಪ ಕೂಡ ಮಾರಾಟ ಮಾಡುತ್ತಾರೆ.

ಹಸುವಿನ ಆಹಾರಕ್ಕಾಗಿ ಎರಡು ಎಕರೆ ಗದ್ದೆಯಲ್ಲಿ ಮೂರು ವಿವಿಧ ತಳಿಯ ಹುಲ್ಲುಗಳನ್ನು ತಾವೇ ಸ್ವತಃ ಬೆಳೆದು ಹಸಿ ಹುಲ್ಲಿನ ಜೊತೆಗೆ ಒಣ ಹುಲ್ಲು ಜೋಳದ ಹುಡಿ, ಫೀಡ್‌ಗಳನ್ನು ಒಂದು ಹಸುವಿಗೆ ೧೫ ಕೆ.ಜಿ.ಯಷ್ಟು ನಿತ್ಯ ಆಹಾರ ನೀಡುತ್ತಿದ್ದಾರೆ. ಆಹಾರದ ಗುಣಮಟ್ಟದಿಂದ ಹಸು ಹೆಚ್ಚಿನ ಹಾಲು ನೀಡಲು ಸಾಧ್ಯವಾಗು ತ್ತಿದೆ ಎಂಬದು ಮಂಜುನಾಥ್ ಅವರ ಅಭಿಮತ. ಬಿ.ಬಿ.ಎಂ. ಪದವೀಧರ ರಾದ ಮಂಜುನಾಥ್ ಅವರು ಖಾಸಗಿ ಕಂಪೆನಿಗಳಲ್ಲಿ ಉತ್ತಮ ಹುದ್ದೆಗಳ ಅವಕಾಶಗಳಿದ್ದರೂ ಕೃಷಿ ಮತ್ತು ಹೈನುಗಾರಿಕೆಯನ್ನು ತಮ್ಮ ಬದುಕಿನ ಹಾದಿಯಾಗಿಸಿ ಪತ್ನಿ ಹರಿಣಿ ಅವರ ಸಹಕಾರದೊಂದಿಗೆ ನೆಮ್ಮದಿ ಕಂಡುಕೊAಡಿದ್ದಾರೆ.

ಹಾಲಿನ ಡೈರಿಗೆ ಒತ್ತಾಯ: ಪೊನ್ನಂಪೇಟೆ ತಾಲೂಕಿನ ಈ ಭಾಗದಲ್ಲಿ ಹಾಲಿನ ಡೈರಿ ಸರ್ಕಾರ ತೆರೆದರೆ ಬಹಳಷ್ಟು ರೈತರಿಗೆ ಉಪಯೋಗವಾಗಲಿದೆ. ಅಲ್ಲದೆ ಹೈನುಗಾರಿಕೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಈ ವಿಚಾರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ.

ಪ್ರೋತ್ಸಾಹಕರವಾದ ಯಾವುದೇ ವ್ಯವಸ್ಥೆ ದೊರೆಯದೆ ಇರುವುದು ಉದ್ಯಮದಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಸರ್ಕಾರದಿಂದ ದೊರೆತರೆ ಬಹಳಷ್ಟು ಜನ ಉದ್ಯಮವನ್ನು ಆರಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಪೊನ್ನಂಪೇಟೆ ತಾಲೂಕಿನಲ್ಲಿ ಹೈನುಗಾರಿಕೆ ಪ್ರಗತಿ ಕಾಣಲು ಹಾಲಿನ ಡೈರಿ ಅವಶ್ಯಕತೆ ಇದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ. ಮೈಸೂರು-ಮಂಡ್ಯ ಭಾಗಗಳಲ್ಲಿ ಇರುವ ವ್ಯವಸ್ಥೆ ಕೊಡಗಿನ ದಕ್ಷಿಣ ಭಾಗದಲ್ಲಿ ಸಿಗುವಂತಾಗಬೇಕು ಹೀಗಾದರೆ ಹೈನುಗಾರಿಕೆ ಚೇತರಿಸಿಕೊಂಡು ರೈತರು ದುಪ್ಪಟ್ಟು ಆದಾಯವನ್ನು ಗಳಿಸಬಹುದಾಗಿದೆ.

ತಿತಿಮತಿಯ ಬಹುತೇಕ ರೈತರು ಹಾಲನ್ನು ಸುಮಾರು ೨೦ ಕಿ.ಮೀ. ದೂರದ ಪಿರಿಯಾಪಟ್ಟಣ ತಾಲೂಕಿನ ಅಳ್ಳೂರು ಹಾಲಿನ ಡೈರಿಗೆ ವಿತರಿ ಸುತ್ತಾರೆ. ಇದರಿಂದ ಸಮಯ ಮತ್ತು ಆದಾಯ ಎರಡು ಸಹ ವ್ಯರ್ಥವಾ ಗುತ್ತಿದೆ ಎಂಬದು ರೈತರ ಆರೋಪವಾಗಿದೆ.