ಮಡಿಕೇರಿ, ಜ. ೨೩: ಗೋಣಿಕೊಪ್ಪ ರೋಟರಿ ವತಿಯಿಂದ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ತಿಮ್ಮಯ್ಯ, ಅತ್ಯಧಿಕ ಮತಗಳಿಸಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ರೋಟರಿ ಸದಸ್ಯ ಸಜ್ಜನ್ ಚೆಂಗಪ್ಪ ಮತ್ತು ಅರಣ್ಯಾಧಿಕಾರಿ, ಡಿ.ಆರ್.ಎಫ್.ಓ. ಸತೀಶ್ಕುಮಾರ್ ಸನ್ಮಾನ ಸ್ವೀಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ತಿಮ್ಮಯ್ಯ ಅವರು, ಆರೋಗ್ಯಕರ ಭವಿಷ್ಯಕ್ಕೆ ಹಿತ್ತಲಲ್ಲಿ ಬೆಳೆವ ತರಕಾರಿ, ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವಂತೆ ಹೇಳಿದರು. ಕಾಲಿಫ್ಲವರ್ ಹಾಗೂ ಕೋಸುಗೆಡ್ಡೆ ಅತಿ ಹೆಚ್ಚು ಕ್ರಿಮಿಕೀಟಗಳ ಬಾಧೆಗೆ ಒಳಗಾಗುವದರಿಂದ ಅದಕ್ಕೆ ಅತಿ ಹೆಚ್ಚು ರಾಸಾಯನಿಕವನ್ನು ಬಳಸಲಾಗುತ್ತಿದ್ದು ಇದರ ಸೇವನೆ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು. ಟೊಮೆಟೊ ಸೇರಿದಂತೆ ಈ ಮೂರನ್ನೂ ವರ್ಜಿಸುವದು ಅವಶ್ಯ ಎಂದರು. ಇದರ ಅತಿಯಾದ ಸೇವನೆಯಿಂದ ಹುಟ್ಟುತ್ತಿರುವ ಮಕ್ಕಳಲ್ಲೂ ಅನಾರೋಗ್ಯ ಆರಂಭದಿAದಲೇ ಕಂಡು ಬರುತ್ತಿದೆ ಎಂದರು. ಗಣೇಶ್ ತಿಮ್ಮಯ್ಯ ಅವರಿಗೆ ರೋಟರಿಯ ಗೌರವ ಸದಸ್ಯತನ ನೀಡಲಾಯಿತು.
ಮುಖ್ಯ ಅತಿಥಿ, ಶಕ್ತಿಯ ಸಹ ಸಂಪಾದಕ ಬಿ.ಜಿ. ಅನಂತಶಯನ ಸಾಧಕರನ್ನು ಸನ್ಮಾನಿಸಿದರು. ವಿಶ್ವವನ್ನೇ ಅಲುಗಿಸಿದ ಕೋವಿಡ್-೧೯ ನ್ನು ದೊಷಿಸುವ ಬದಲು ಅದಕ್ಕೆ ವಂದಿಸಬೇಕು. ವೈರಾಣು- ವಿಶ್ವದ ಜನಮನಕ್ಕೆ ಏಕರೀತಿಯಾಗಿ ಮಾನವರ ಇತಿಮಿತಿಯನ್ನು, ಕ್ಷಣಿಕತೆಯ ಪಾಠವನ್ನು ತಿಳಿಯಹೇಳಿದೆ ಎಂದರು.
ಕೋವಿಡ್ ಲಾಕ್ಡೌನ್ ಸಂದರ್ಭ ವಿಶ್ವದಾದ್ಯಂತ ಚಟುವಟಿಕೆಗಳು ಸ್ತಭ್ಧವಾದರೂ, ರೋಟರಿ ಮತ್ತಷ್ಟು ಹುರುಪಿನಿಂದ ಸೇವೆಯಲ್ಲಿ ತೊಡಗಿತ್ತು ಎಂದು ಉದಾಹರಣೆ ಸಹಿತ ಅನಂತಶಯನ ವಿವರಿಸಿದರು. ಒಳಿತಾಗಲಿ-ಕೆಡುಕಾಗಲಿ ಎರಡರಿಂದಲೂ ಕಲಿಯುವ ಅವಕಾಶ ಇರುತ್ತದೆ ಎಂದರು.
ಈ ಸಂದರ್ಭ ರೋಟರಿಯು ಉನ್ನತ ಗೌರವ ಪಿ.ಹೆಚ್.ಎಫ್. ಪತ್ರವನ್ನು ಡಾ. ಆಶಿಕ್ ಚೆಂಗಪ್ಪ ಅವರಿಗೆ ನೀಡಲಾಯಿತು. ರೋಟರಿ ಉಪರಾಜ್ಯಪಾಲ ಮಾದಪ್ಪ ಅವರು ಇ- ಬುಲೆಟಿನ್ ಬಿಡುಗಡೆ ಮಾಡಿ ರಾಜ್ಯಪಾಲರ ಸಂದೇಶ ಹಂಚಿಕೊAಡರು.
ಅಧ್ಯಕ್ಷೆ ಎಂ.ಸಿ. ಬೇಟಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೀನಾಕ್ಷಿ ಪಿ.ಸಿ., ಕಿಶೋರ್ ಮಾದಪ್ಪ, ಶಶಿ ಉತ್ತಪ್ಪ, ನವೀನ್ ಕೆ.ಬಿ. ಪರಿಚಯ ಮಾಡಿದರು. ಕಾರ್ಯದರ್ಶಿ ಕೆ.ಸಿ. ಮುತ್ತಪ್ಪ ವಂದನಾರ್ಪಣೆ ಸಲ್ಲಿಸಿದರು. ವಲಯ ಲೆಫ್ಟಿನೆಂಟ್ ದಿಲನ್ ವೇದಿಕೆಯಲ್ಲಿದ್ದರು.