ನಾಪೋಕ್ಲು, ಜ. ೨೨: ಈ ಬಾರಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಬಹುತೇಕ ಬೆಳೆಗಾರರಿಗೆ ಇನ್ನೂ ಪರಿಹಾರ ದೊರಕಿಲ್ಲ. ಕೂಡಲೇ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ನಾಪೋಕ್ಲು ವ್ಯಾಪ್ತಿಯ ಬೆಳೆಗಾರರು ನಾಪೋಕ್ಲು ಕಂದಾಯ ಪರಿವೀಕ್ಷಕರಿಗೆ ಮನವಿ ಮಾಡಿದರು. ಹಾಗೆಯೇ ಪೌತಿ ಖಾತೆ, ಮತ್ತಿತರ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದರು.
ಅದಕ್ಕೆ ಉತ್ತರಿಸಿದ ಕಂದಾಯ ಪರಿವೀಕ್ಷಕ ರವಿ ಕುಮಾರ್, ಬೆಳೆ ಪರಿಹಾರದ ಕೆಲಸ ಪ್ರಗತಿಯಲ್ಲಿದೆ. ಸದ್ಯದಲ್ಲಿಯೇ ಎಲ್ಲರಿಗೂ ಪರಿಹಾರ ನೀಡಲಾಗುವದು. ಪೌತಿ ಖಾತೆಯ ಸಮಸ್ಯೆ ಕೊಡಗಿನಲ್ಲಿ ಮಾತ್ರ ಇದೆ. ಆದರೆ, ಕಾನೂನು ರಾಜ್ಯಕ್ಕೆ ಒಂದೇ ಆಗಿದೆ. ಆದುದರಿಂದ ನಾವು ಏನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ನೀವು ಮನವಿ ಸಲ್ಲಿಸಿದ್ದಲ್ಲಿ ಅದನ್ನು ಮೇಲಾಧಿಕಾರಿಗಳು ಸರಕಾರಕ್ಕೆ ಕಳುಹಿಸಿಕೊಡಲಾಗುವದು ಎಂದರು.
ಈ ಸಂದರ್ಭ ಬೆಳೆಗಾರರಾದ ಬಿದ್ದಾಟಂಡ ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್, ಕಂಗಾAಡ ಜಾಲಿ ಪೂವಪ್ಪ, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಜಗದೀಶ್, ಕೇಟೋಳಿರ ಡಾಲಿ ಅಪ್ಪಚ್ಚ, ಚೀಯಕಪೂವಂಡ ಗಣೇಶ್, ಮತ್ತಿತರರು ಇದ್ದರು.