ಕೂಡಿಗೆ, ಜ. ೨೨: ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮ ದಾವಣಗೆರೆ ಜಿಲ್ಲೆಯ ಕಲಾ ತಂಡದವರಿAದ ಹುದುಗೂರು, ಮದಲಾಪುರ, ಕೂಡಿಗೆ, ಬಾಣವಾರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಡೆಯಿತು.
ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭ ಬೆಂಕಿ ನಂದಿಸುವ ಬಗ್ಗೆ ಮಾಹಿತಿ ನೀಡಿದರು. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ವಿಷಯಗಳ ಕುರಿತು ಅಲ್ಲದೆ ಶುದ್ಧ ಕುಡಿಯುವ ನೀರಿನ ಬಳಕೆ ಮತ್ತು ಅರಣ್ಯ ಸಂರಕ್ಷಣಾ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಿತದೃಷ್ಟಿಯಿಂದ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವು ದಾವಣಗೆರೆ ಆಸರೆ ಎನ್‌ಜಿಓ ತಂಡದ ವತಿಯಿಂದ ನಡೆಯಿತು. ತಂಡದ ಪ್ರಮುಖರಾದ ಮುತ್ತುರಾಜ ಸೇರಿದಂತೆ ಎಂಟು ಮಂದಿ ಇದ್ದು ಜಾಗೃತಿ ಮೂಡಿಸಿದರು. ಈ ಸಂದರ್ಭ ಹುದುಗೂರು, ಹೆಬ್ಬಾಲೆ, ಬಾಣವಾರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.