ಕಡಂಗ, ಜ. ೨೨: ನಾಪೋಕ್ಲು ಎಬಿಸಿ ಟವರ್‌ನ ಅಲ್ ಝೂಕ್ ಸಭಾಂಗಣದಲ್ಲಿ ನಡೆದ ಡಿವಿಷನ್ ವಾರ್ಷಿಕ ಕೌನ್ಸಿಲ್‌ನಲ್ಲಿ ಎಸ್‌ಎಸ್‌ಎಫ್ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.
ಮಹೂAð ರಫೀಕ್ ಸಖಾಫಿ ಚೆರಿಯಪರಂಬು ಉಸ್ತಾದರ ಖಬರ್ ಝಿಯಾರತ್‌ನೊಂದಿಗೆ ಡಿವಿಷನ್ ಅಧ್ಯಕ್ಷ ಅಶ್ಕರ್ ಸಖಾಫಿ ಕೊಟ್ಟಮುಡಿಯವರ ಅಧ್ಯಕ್ಷತೆಯಲ್ಲಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಝೀಝ್ ಕುಂಜಿಲ ಸ್ವಾಗತಿಸಿದರು. ನಂತರ ಸೆಲೆಕ್ಷನ್ ಆಫೀಸರ್‌ಗಳಾಗಿ ಆಗಮಿಸಿದ ಜಿಲ್ಲಾ ಸಮಿತಿ ನಾಯಕರಾದ ಝುಬೈರ್ ಸಅದಿ ಮತ್ತು ಜುನೈದ್ ಅಮ್ಮತ್ತಿ ಇವರ ಮೇಲ್ನೊಟದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು
ಅಧ್ಯಕ್ಷರಾಗಿ ಮೂಸ ಅಮಾನಿ ಕೊಂಡAಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಉವೈಸ್ ತಾವೂರು, ಕೋಶಾಧಿಕಾರಿಯಾಗಿ ಶಿಹಾಬ್ ಆಝಾದ್ ನಗರ ಆಯ್ಕೆಯಾದರು. ಎರಡು ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಒಳಗೊಂಡು ಒಟ್ಟು ಹದಿನೆಂಟು ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಕಿಲ್ಲೂರ್ ದುಆ ನಿರ್ವಹಿಸಿದರು.
ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುಬಶ್ಶಿರ್ ಅಹ್ಸನಿ, ಕೊಡಗು ಜಿಲ್ಲಾಧ್ಯಕ್ಷ ಅಝೀಝ್ ಸಖಾಫಿ ಕೊಡ್ಲಿಪೇಟೆ, ಕೊಡಗು ಜಿಲ್ಲಾ ಕ್ಯೂ ಟೀಂ ಡೈರೆಕ್ಟರ್ ರಫೀಕ್ ಲತೀಫಿ, ಕೊಡಗು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡAಗೇರಿ ಹಾಗೂ ಝಕರಿಯಾ ಕೊಂಡAಗೇರಿ, ಶೌಕತ್ ಎಮ್ಮೆಮಾಡು, ರಹೀಂ ಹೊಸ್ತೋಟ ಹಾಗೂ ಇತರ ನಾಯಕರು ಭಾಗಿಯಾದರು.