ಮಡಿಕೇರಿ, ಜ. ೨೧: ಮೂರ್ನಾಡು ಚೆಟ್ಟಿಮಾಡ ಜಯಂತ್ ಕುಮಾರ್ ಮತ್ತು ಗೆಳೆಯರ ಬಳಗ ವತಿಯಿಂದ ಜಿಲ್ಲೆಯ ಹಿಂದೂ ಸಮಾಜ ಬಾಂಧವರಿಗಾಗಿ ‘ಹಿಂದೂ ಕ್ರಿಕೆಟ್ ಕಪ್’ ಫೆ.೧೨ ರಿಂದ ೧೪ರವರೆಗೆ ಮೂರ್ನಾಡುವಿನ ಪಿಯು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ಎ.ಕೆ. ಹರೀಶ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳನ್ನು ಒಗ್ಗೂಡಿಸುವ ಮತ್ತು ಫೆ. ೧೪ರ ಪ್ರೇಮಿಗಳ ದಿನಾಚರಣೆಯಿಂದ ಯುವಜನತೆ ಹೊರಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಪಂದ್ಯಾಟ ಆಯೋಜಿಸಲಾಗಿದೆ. ಮೊದಲ ಸುತ್ತಿನ ನಾಕೌಟ್ ಪಂದ್ಯಾಟ ೪ ಓವರ್‌ಗೆ ಸೀಮಿತವಾಗಿದ್ದು ಕ್ವಾರ್ಟರ್, ಸೆಮಿ ಮತ್ತು ಫೈನಲ್ ಪಂದ್ಯಾಟ ೬ ಓವರ್‌ಗೆ ಸೀಮಿತಗೊಳಿಸಲಾಗಿದೆ. ಆಸಕ್ತ ತಂಡಗಳು ಮೈದಾನ ಶುಲ್ಕ ರೂ. ೨,೨೦೦ ಪಾವತಿಸಿ, ಫೆ. ೫ ರೊಳಗೆ ತಂಡದ ಹೆಸರು ನೋಂದಣಿ ಮಾಡಿಕೊಳ್ಳತಕ್ಕದ್ದು ಎಂದು ವಿವರಿಸಿದರು. ಅಂದು ಬೆಳಿಗ್ಗೆ ೮.೩೦ ಗಂಟೆಗೆ ಗೋಪೂಜೆ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಕ್ರೀಡಾಪಟುಗಳು ಆಧಾರ್‌ಕಾರ್ಡ್ ಕಡ್ಡಾಯವಾಗಿ ತರತಕ್ಕದ್ದು. ಕ್ರೀಡಾಕೂಟದಲ್ಲಿ ಕೋವಿಡ್-೧೯ ಸಂಬAಧಿಸಿದAತೆ ಸರ್ಕಾರದ ಮಾರ್ಗಸೂಚಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಲಾಗುವುದು ಎಂದು ತಿಳಿಸಿದರು. ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೩೩,೩೩೩ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೨೨,೨೨೨ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು. ಇದರೊಂದಿಗೆ ವೈಯಕ್ತಿಕವಾಗಿ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್, ಪಂದ್ಯಶ್ರೇಷ್ಠ ಸೇರಿದಂತೆ ಇತರೆ ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೪೮೦೪೯೯೭೬೬, ೯೯೪೫೯೪೮೯೯೨ ಹಾಗೂ ಗೂಗಲ್ ಪೇ ಮತ್ತು ಫೋನ್ ಪೇ ಮಾಡಲು ೯೬೬೩೮೨೮೧೦೦ ಸಂಪರ್ಕಿಸಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್, ಉಪಾಧ್ಯಕ್ಷ ಅರುಣ್, ಖಜಾಂಚಿ ಮನೀಶ್, ಸಹಕಾರ್ಯದರ್ಶಿ ಬೊಟ್ಟೋಳಂಡ ಜಗದೀಶ್ ಇದ್ದರು.