ಚೆಟ್ಟಳ್ಳಿ, ಜ. ೨೧: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಉಪಯೋಗವಾಗಲು ಹೊದ್ದೂರಿನಲ್ಲಿ ಹೈಟೆಕ್ ಮಾದರಿ ಡಿಜಿಟಲ್ ಗ್ರಂಥಾಲಯ ಓದುವ ಬೆಳಕು ಯೋಜನೆಯ ಮೂಲಕ ಕಾರ್ಯಾರಂಭವಾಗಿದೆ. ರೂ. ೮ ಲಕ್ಷ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಅತ್ಯಾಧುನಿಕವಾಗಿ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿಗೆ ರಾಜ್ಯ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು. ಮಾಧ್ಯಮ ದೊಂದಿಗೆ ಮಾತನಾಡಿ ನವೆಂಬರ್ ತಿಂಗಳಿನಿAದ ಪಂಚಾಯತ್ ರಾಜ್ ಇಲಾಖೆ ಮೂಲಕ ಪ್ರಾರಂಭವಾಗಿರುವ ಓದುವ ಬೆಳಕು ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲೂ ಡಿಜಿಟಲ್ ಲೈಬ್ರರಿ ಪ್ರಾರಂಭಿಸಿ ೬ ರಿಂದ ೧೮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ನೋಂದಾವಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಗಳಲ್ಲೂ ಗ್ರಂಥಾಲಯ ಪ್ರಾರಂಭವಾಗಲಿದ್ದು ಗ್ರಂಥಾಲಯದ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷಿö್ಮÃ ಚಂದ್ರಶೇಖರ್ ಮಾತನಾಡಿ, ಗ್ರಂಥಾಲಯದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಂಚಾಯಿತಿ ಮೂಲಕ ಪಡೆದುಕೊಳ್ಳಬೇಕೆಂದರು. ಪಂಚಾಯಿತಿ ಆಡಳಿತಾಧಿಕಾರಿ ಪಿ.ಪಿ. ಕವಿತಾ ಮಾತನಾಡಿ, ಅತ್ಯಾಧುನಿಕವಾಗಿ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ೪ ಸಾವಿರ ಪುಸ್ತಕಗಳು ಗ್ರಂಥಾಲಯದಲ್ಲಿದ್ದು ಪ್ರತಿಯೊಬ್ಬರು ಪುಸ್ತಕ ಓದುವ ಜ್ಞಾನ ಬೆಳೆಸಿಕೊಂಡು ಪಡಿಸಿಕೊಳ್ಳಬೇಕಾಗಿ ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷಿö್ಮÃ ಚಂದ್ರಶೇಖರ್ ಮಾತನಾಡಿ, ಗ್ರಂಥಾಲಯದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಂಚಾಯಿತಿ ಮೂಲಕ ಪಡೆದುಕೊಳ್ಳಬೇಕೆಂದರು. ಪಂಚಾಯಿತಿ ಆಡಳಿತಾಧಿಕಾರಿ ಪಿ.ಪಿ. ಕವಿತಾ ಮಾತನಾಡಿ, ಅತ್ಯಾಧುನಿಕವಾಗಿ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ೪ ಸಾವಿರ ಪುಸ್ತಕಗಳು ಗ್ರಂಥಾಲಯದಲ್ಲಿದ್ದು ಪ್ರತಿಯೊಬ್ಬರು ಪುಸ್ತಕ ಓದುವ ಜ್ಞಾನ ಬೆಳೆಸಿಕೊಂಡು ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾದ ಹೆಚ್.ಹೆಚ್. ಹಂಸ, ಹೆಚ್.ಕೆ. ಮೊಣ್ಣಪ್ಪ, ಎಂ.ವೈ. ಮಾಹಿನ್, ವಿ.ಕೆ. ಅಜಯ್ ಕುಮಾರ್, ಮೊಯ್ದು, ಮಾಹಿನ್, ಕುಸುಮಾವತಿ, ಲಕ್ಷಿö್ಮ, ಅನಿತಾ, ನವೀನ್, ಗ್ರಂಥಪಾಲಕಿ ಸಣ್ಣಮ್ಮ, ಪಂಚಾಯಿತಿ ಸಿಬ್ಬಂದಿಗಳಾದ ತಾರಾವತಿ, ಬಾಬು, ಹರೀಶ್‌ಕುಮಾರ್, ಮಿಲನ, ಸುಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.