ಗೋಣಿಕೊಪ್ಪ ವರದಿ, ಜ. ೨೧: ಹಾಕಿ ಕೂರ್ಗ್ ವತಿಯಿಂದ ಪಾಲಂದಿರ ಅಪ್ಪಯ್ಯ ಜ್ಞಾಪಕಾರ್ಥ ೩ನೇ ವರ್ಷದ ಮಹಿಳಾ ಹಾಕಿ ಲೀಗ್ ತಾ. ೨೩ ರಿಂದ ತಾ. ೨೬ ರವರೆಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಕೋರಲ್ ವಾಟರ್ಸ್, ಬುಟ್ಟಿಯಂಡ ಫ್ಯಾಮಿಲಿ, ಕೈಕೇರಿ ಗಲ್ಸ್, ಪವಿನ್ ಪೊನ್ನಣ್ಣ ಫೌಂಡೇಷನ್, ಎವರ್ ಸ್ಟಾರ್ ಹಾಗೂ ಅಕೆಮಿ ಕಾಫಿ ತಂಡಗಳು ಭಾಗವಹಿಸಲಿವೆ.

ತಾ. ೨೩ ರಂದು ಮಧ್ಯಾಹ್ನ ೨.೩೦ ಗಂಟೆಗೆ ದಾನಿ ಪಾಲಂದೀರ ಪಾರ್ವತಿ ಅಪ್ಪಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಇ. ಕಾಳಯ್ಯ, ಉಪಾಧ್ಯಕ್ಷೆ ಯಮುನಾ ಚೆಂಗಪ್ಪ, ಪದ್ಮಶ್ರೀ ಪುರಸ್ಕೃತ ಮೊಳ್ಳೇರ ಗಣೇಶ್, ಹಿರಿಂ

iÀÄ ಅಂತರರಾಷ್ಟಿçÃಯ ಹಾಕಿ ಆಟಗಾರ ಮಂಡೇಪAಡ ಮೊಣ್ಣಪ್ಪ, ಹಾಕಿ ಕರ್ನಾಟಕ ಸದಸ್ಯ ಕೆ.ಕೆ. ಕೃತಿಕಾ, ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಹರ್ಷಿತಾ ಭಾಗವಹಿಸಲಿದ್ದಾರೆ ಎಂದು ಹಾಕಿ ಕೂರ್ಗ್ ಪ್ರಕಟಣೆ ತಿಳಿಸಿದೆ.