ಕಡಂಗ, ಜ. ೨೧: ಸುನ್ನಿ ವಿದ್ಯಾರ್ಥಿ ಒಕ್ಕೂಟ ಇದರ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾ ಸಭೆ ಕೊಟ್ಟಮುಡಿಯ ಮರ್ಕಝುಲ್ ಹಿದಾಯದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಶಾಫಿ ಸಅದಿ ಸೋಮವಾರಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಮುಜೀಬ್ ಕೊಂಡAಗೇರಿ, ಕೋಶಾಧಿಕಾರಿ ಯಾಗಿ ಅಬ್ದುಲ್ ರಹೀಂ ಹೊಸತೋಟ ಅವರನ್ನೊಳಗೊಂಡ ಸಮಿತಿಯನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಕೊಡಗು ಜಿಲ್ಲಾ ನಾಇಬ್ ಖಾಝಿ ಶೈಖುನಾ ಮಹಮ್ಮೂದ್ ಮುಸ್ಲಿಯಾರ್ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದ ಸಭೆಯ ಉದ್ಘಾಟನೆಯನ್ನು ಕೊಡಗು ಮುಸ್ಲಿಂ ಜಮಾಅತ್ ನಾಯಕ ಹಫೀಳ್ ಸಅದಿ ನೆರವೇರಿಸಿದರು.
ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಕಿಲ್ಲೂರ್ ತಂಙ್ಙಳ್ ಆಶೀರ್ವಚನ ನೀಡುತ್ತಾ ಎಸ್‌ಎಸ್ ಎಫ್ ಸಾಮಾಜಿಕ ಚಟುವಟಿಕೆಗಳು ಮಾತ್ರವಲ್ಲದೆ ಇಸ್ಲಾಮಿನ ನೈಜ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅಕ್ರಮ ದುಶ್ಚಟಗಳಿಂದ ವಿದ್ಯಾರ್ಥಿ- ಯುವಕರನ್ನು ಹಿಂದೆ ಸರಿಸಿ ಸಮಾಜದಲ್ಲಿ ಉತ್ತಮ ಯುವ ಸಮೂಹವನ್ನು ಸೃಷ್ಟಿಸಲು ಎಸ್‌ಎಸ್‌ಎಫ್‌ಗೆ ಸಾಧ್ಯವಾಗಿದ್ದು ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಶಾಲಗೊಳಿಸಿ ಉತ್ತಮ ಸಮಾಜವನ್ನು ಸೃಷ್ಟಿಸಲು ಇನ್ನಷ್ಟು ಪಣತೊಡಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ವೈಎಸ್‌ನ ಅಬ್ದುಲ್ಲ ಸಖಾಫಿ, ವಿ.ಪಿ. ಮೊಯಿದೀನ್, ಕೋಶಾಧಿಕಾರಿ ಅಹ್ಮದ್‌ಹಾಜಿ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಸಖಾಫಿ ಹಂಝ ಸಖಾಫಿ ಬೆಂಗಳೂರು, ಮುಹಮ್ಮದ್ ಹಾಜಿ, ಅಬುಬಕ್ಕರ್ ಹಾಜಿ, ಇಸ್ಮಾಯಿಲ್ ಸಖಾಫಿ, ಯಾಕೂಬ್ ಮಾಸ್ಟರ್, ಉಸ್ಮಾನ್ ಹಾಜಿ ಮುಂತಾದ ಗಣ್ಯರು ಹಿತವಚನ ನೀಡಿದರು.
ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಂ
iÀiÁದ ಮಹಮ್ಮೂದ್ ಉಸ್ತಾದರನ್ನು ಸನ್ಮಾನಿಸಲಾಯಿತು. ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ರವರು ಉಸ್ತುವಾರಿಗಳಾಗಿ ಆಗಮಿಸಿ ಸಭೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಘಟನೆಯ ಧ್ವಜವನ್ನು ಹಸ್ತಾಂತರಿಸುವ ಮೂಲಕ ನೂತನ ಸಾಲಿನ ಮಂಡಳಿಗೆ ಅಧಿಕಾರ ವಹಿಸಿಕೊಡಲಾಯಿತು. ಕಾರ್ಯದರ್ಶಿ ಮುಸ್ತಫಾ ನೆಲ್ಲಿಹುದಿಕೇರಿ ಸ್ವಾಗತ ಹಾಗೂ ಮುಜೀಬ್ ಕೊಂಡAಗೇರಿ ವಂದನಾರ್ಪಣೆ ನಡೆಸಿದರು.