ಕೂಡಿಗೆ, ಜ. ೨೧: ಕೂಡಿಗೆ ಕೊಡವ ಕೂಟದ ವಾರ್ಷಿಕ ಮಹಾಸಭೆ ಮತ್ತು ಸಂತೋಷ ಕೂಟ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ಫೀಲ್ಡ್ ರಿವರ್ ವೋ ಹೋಂಸ್ಟೇ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಶಾಲನಗರದ ಇಗ್ಗುತ್ತಪ್ಪ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಮಾತನಾಡಿ, ಇಂದಿನ ಯುವಜನಾಂಗ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು. ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ಪದಾಧಿಕಾರಿಗಳಾದ ಕೊಳುವಂಡ ಮಂದಪ್ಪ, ಪಟ್ಟಡ ಚುಮ್ಮಿ ಚಿಟ್ಟಿಯಪ್ಪ, ಮುಕ್ಕಾಟೀರ ಅಪ್ಪಣ್ಣ, ಐಮುಡಿಯಂಡ ರಮೇಶ್, ಮುಕ್ಕಾಟಿರ ದಿವ್ಯ ದೀಲಿಪ್, ಉದಿಯಂಡ ಧನು ತಿಮ್ಮಯ್ಯ, ಮಾಜಿ ಅಧ್ಯಕ್ಷ ಪಟ್ಟಡ ವೇಣು ಸೇರಿದಂತೆ ಇನ್ನಿತರರು ಇದ್ದರು.