ಮಡಿಕೇರಿ, ಜ. ೨೧: ಗುದದ್ವಾರದಲ್ಲಿ ರೂ.೪೪.೨ ಲಕ್ಷ ವೆಚ್ಚದ ಚಿನ್ನ ಅಡಗಿಸಿಕೊಂಡು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮಡಿಕೇರಿಯ ನಿವಾಸಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ದುಬೈನಿಂದ ಮಂಗಳೂರಿನ ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಮಡಿಕೇರಿಯ ನಿವಾಸಿ ಉಬೈದ್ ಬಲಿಯಾತ್ ಅಝೀಝ್ ಆಗಮಿಸಿದ್ದು, ಗುಪ್ತಚರ ವರದಿಯ ಹಿನ್ನೆಲೆ ಆತನನ್ನು ಕಸ್ಟಮ್ಸ್ ಅಧಿಕಾರಿ ಶೋಧಿಸಿದ್ದಾರೆ. ಈ ವೇಳೆ ‘ಪೇಸ್ಟ್’ ರೂಪದಲ್ಲಿ ತನ್ನ ಗುದದ್ವಾರದಲ್ಲಿ ೮೦೦ ಗ್ರಾಮ್ ತೂಕದ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡಲು ಯತ್ನಿಸುತ್ತಿದ್ದದ್ದು ಗೊತ್ತಾಗಿದೆೆ. ಚಿನ್ನವನ್ನು ವಶಕ್ಕೆ ಪಡೆದು ಆರೋಪಿ ಉಬೈದ್ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಉಬೈದ್ ದುಬೈನಿಂದ ಏರ್ ಇಂಡಿಯಾ ವಿಮಾನ (Iಘಿ ೧೮೧೪) ಮೂಲಕ ಮಂಗಳೂರಿಗೆ ಆಗಮಿಸಿದ್ದು ಖಚಿತ ಮಾಹಿತಿಯ ಮೇರೆಗೆ ಅವನನ್ನು ಅಧಿಕಾರಿಗಳು ಶೋಧಿಸಿದಾಗ ೮೦೦ ಗ್ರಾಮ್ ತೂಕದ ರೂ. ೪೪.೨ ಲಕ್ಷ ಬೆಲೆ ಬಾಳುವ ೨೪ ‘ಕ್ಯಾರೆಟ್’ ಶುದ್ಧತೆಯ ಚಿನ್ನ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ನ ಜಂಟಿ ಆಯುಕ್ತ ಜೋನಾಸ್ ಜಾರ್ಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.