ಮಡಿಕೇರಿ, ಜ. ೨೧: ಪೌತಿ ಖಾತೆ ಸಂಬAಧ ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಸಹಾಯಕನೊಬ್ಬ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದ ಘಟನೆ ನಡೆದಿದೆ.ಕಟ್ಟೆಮಾಡುವಿನ ಎಂ.ಡಿ. ವಿನೋದ್ ಎಂಬವರ ತಂದೆ ಹಾಗೂ ಅವರ ಸಹೋದರರಿಗೆ ಸೇರಿದ ೮೫ ಸೆಂಟ್ ಜಾಗ ಕಟ್ಟೆಮಾಡು ಗ್ರಾಮದಲ್ಲಿದ್ದು, ಇತ್ತೀಚೆಗೆ ವಿನೋದ್ ಅವರ ಚಿಕ್ಕಪ್ಪ ಗೋವಿಂದ ಎಂಬವರು ಮೃತರಾದ ಹಿನ್ನೆಲೆಯಲ್ಲಿ ಪೌತಿ ಖಾತೆಯಲ್ಲಿ ಗೋವಿಂದ ಅವರ ಹೆಸರನ್ನು ತೆಗೆದು ಅವರ ಪತ್ನಿ ಜಾನಕಿ ಹಾಗೂ ಪುತ್ರಿ ಪ್ರಮತಾ ಅವರುಗಳ ಹೆಸರನ್ನು ಸೇರಿಸಬೇಕಿತ್ತು.ಇದಕ್ಕಾಗಿ ಮಡಿಕೇರಿ ತಾಲೂಕು ಕಚೇರಿಯ ಹೋಬಳಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಗೋಡಿನ ಗ್ರಾಮ ಸಹಾಯಕ ಕಟ್ಟೆಮಾಡುವಿನ ಎಂ.ಡಿ. ವಿನೋದ್ ಎಂಬವರ ತಂದೆ ಹಾಗೂ ಅವರ ಸಹೋದರರಿಗೆ ಸೇರಿದ ೮೫ ಸೆಂಟ್ ಜಾಗ ಕಟ್ಟೆಮಾಡು ಗ್ರಾಮದಲ್ಲಿದ್ದು, ಇತ್ತೀಚೆಗೆ ವಿನೋದ್ ಅವರ ಚಿಕ್ಕಪ್ಪ ಗೋವಿಂದ ಎಂಬವರು ಮೃತರಾದ ಹಿನ್ನೆಲೆಯಲ್ಲಿ ಪೌತಿ ಖಾತೆಯಲ್ಲಿ ಗೋವಿಂದ ಅವರ ಹೆಸರನ್ನು ತೆಗೆದು ಅವರ ಪತ್ನಿ ಜಾನಕಿ ಹಾಗೂ ಪುತ್ರಿ ಪ್ರಮತಾ ಅವರುಗಳ ಹೆಸರನ್ನು ಸೇರಿಸಬೇಕಿತ್ತು.ಇದಕ್ಕಾಗಿ ಮಡಿಕೇರಿ ತಾಲೂಕು ಕಚೇರಿಯ ಹೋಬಳಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಗೋಡಿನ ಗ್ರಾಮ ಸಹಾಯಕ ಅವರುಗಳ ಸಹಿಯನ್ನು ಅಂಚೆ ಮೂಲಕ ದಾಖಲಾತಿ ಕಳುಹಿಸಿ ತರಿಸಿಕೊಡುವುದಾಗಿ ವಿನೋದ್ ಹೇಳಿದರೂ ಕೂಡ ಇದ್ಯಾವುದರ ಅಗತ್ಯವಿಲ್ಲ (ಮೊದಲ ಪುಟದಿಂದ) ಮೂರು ಸಾವಿರ ನೀಡಿದರೆ ತಾನೇ ಎಲ್ಲವನ್ನು ಸರಿಮಾಡಿಕೊಡುವದಾಗಿ ಹೆಚ್.ಎಸ್. ಮಣಿ ಲಂಚದ ಬೇಡಿಕೆ ಇಟ್ಟಿದ್ದ.
ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಕೊಂಚ ಕಡಿಮೆ ಮಾಡುವಂತೆ ವಿನೋದ್ ಮನವಿ ಮಾಡಿದಾಗ ಕೊನೆಗೆ ೨೫೦೦ ರೂ. ನೀಡುವಂತೆ ಮಣಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ವಿನೋದ್ ಎಸಿಬಿಗೆ ದೂರು ನೀಡಿದ್ದರು. ನಂತರ ಇಂದು ಮಡಿಕೇರಿ ತಾಲೂಕು ಕಚೇರಿ ಬಳಿಯ ಜೆರಾಕ್ಸ್ ಅಂಗಡಿಯಲ್ಲಿ ವಿನೋದ್ ಅವರಿಂದ ೨೫೦೦ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ಮಾಡಿದ ಎಸಿಬಿ ಪೊಲೀಸರು ಗ್ರಾಮ ಸಹಾಯಕ ಮಣಿಯನ್ನು ಬಂಧಿಸಿದ್ದಾರೆ.
ಎಸಿಬಿ ಎಸ್‌ಪಿ ಸುಮನ್ ಡಿ. ಪನ್ನೇಕರ್ ನಿರ್ದೇಶನದಂತೆ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣವರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸುಮನ ಮತ್ತು ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.