ಮಡಿಕೇರಿ, ಜ. ೨೧ : ದೇಶದಲ್ಲಿ ವಾಣಿಜ್ಯ ಬೆಳೆಯಾಗಿ ಪರಿಗಣಿಸಲ್ಪಟ್ಟಿರುವ ವಿದೇಶಿ ವಿನಿಮಯದಲ್ಲಿ ದೇಶದ ಆರ್ಥಿಕತೆಗೂ ಸಹಕಾರಿಯಾಗಿರುವ ಪ್ರಮುಖ ಬೆಳೆಗಳಲ್ಲಿ ಕಾಫಿಯೂ ಒಂದಾಗಿದೆ. ಈ ಕಾಫಿ ಬೆಳೆಯನ್ನು ದೇಶದ ಎಲ್ಲಾ ಭಾಗದಲ್ಲಿ ಬೆಳೆಯಲಾಗದು. ಬದಲಾಗಿ ಹೆಚ್ಚಿನ ಪಾಲು ಕರ್ನಾಟಕ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ. ಕರ್ನಾಟಕದೊಂದಿಗೆ ನೆರೆಯ ಕೇರಳ, ತಮಿಳುನಾಡು, ಪಾಂಡಿಚೇರಿ ಹಾಗೂ ಈಶಾನ್ಯದ ಕೆಲವು ಭಾಗಗಳಲ್ಲಿ ಮಾತ್ರ ಕಾಫಿ ಉತ್ಪಾದಿಸಲ್ಪಡುತ್ತದೆ. ಅದರಲ್ಲೂ ದೇಶದಲ್ಲಿ ಕರ್ನಾಟಕ ಉತ್ಪಾದನೆಯಲ್ಲಿ ಮೊದಲ ಸ್ಥಾನ ಹೊಂದಿದ್ದರೆ, ಈ ರಾಜ್ಯದಲ್ಲಿ ಕೊಡಗು ಜಿಲ್ಲೆಯದ್ದು ಸಿಂಹಪಾಲು. ಕೊಡಗಿನೊಂದಿಗೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಭಾಗದಲ್ಲಿ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ. ಕಾಫಿ ಮಾರಾಟಕ್ಕೆ ಸಂಬAಧಿಸಿದAತೆ ಈ ಹಿಂದೆ ೧೯೯೧ರ ತನಕವೂ ಕಾಫಿ ಮಂಡಳಿಯ ನಿಯಂತ್ರಣವಿತ್ತು. ಬೆಳೆಗಾರರು ತಾವು ಉತ್ಪಾದಿಸಿದ ಕಾಫಿಯನ್ನು ಎಲ್ಲೆಂದರಲ್ಲಿ ಅಥವಾ ತಮಗೆ ಬೇಕಾದಂತೆ ಮಾರಾಟ ಮಾಡಲು ಅವಕಾಶಗಳಿರಲಿಲ್ಲ. ಟಿ.ಪಿ.೩, ಫಾರಂ ಸೇರಿದಂತೆ ಕೆಲವು ನಿಬಂಧನೆಗೊಳಪಟ್ಟು, ಮಾರಾಟ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಬೆಲೆಯೂ ಚೀಲವೊಂದಕ್ಕೆ ೩೦೦-೫೦೦ ಮಾತ್ರ ಲಭ್ಯವಾಗುತ್ತಿತ್ತು. ವರ್ಷದಲ್ಲಿ ಇನ್ನೊಂದಿಷ್ಟು ಅಲ್ಪಮೊತ್ತ ಬೋನಸ್ ರೂಪದಲ್ಲಿ ಸಿಗುತ್ತಿದ್ದುದು ಇತಿಹಾಸವಾಗಿದೆ.ಮುಕ್ತ ಮಾರುಕಟ್ಟೆಇದಾದ ಬಳಿಕ ಕೆಲವು ಬೆಳೆಗಾರ ಪ್ರಮುಖರು, ಸಂಘ-ಸAಸ್ಥೆಗಳ ನಿರಂತರ ಹೋರಾಟ - ಪ್ರಬಲವಾದ ಬೇಡಿಕೆಯ ಪರಿಣಾಮವಾಗಿ ೧೯೯೧ರ ಸಂದರ್ಭದಲ್ಲಿ ಶೇ.೩೦ರಷ್ಟು ಬೆಳೆಯನ್ನು ಫ್ರೀ ಸೇಲ್ ಕೋಟಾ (ಎಫ್.ಎಸ್.ಕ್ಯು)ದಂತೆ ಮುಕ್ತ ಮಾರಾಟಕ್ಕೆ ಅವಕಾಶ ದೊರೆಯಿತು. ಇದು ೧೯೯೪ರ ಅವಧಿಯಲ್ಲಿ ಶೇ.೭೦, ಬಳಿಕ ೧೯೯೬ರ ವೇಳೆಗೆ ಶೇ.೧೦೦ರಷ್ಟು ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಯಿತು. ಈ ಸಂದರ್ಭದಲ್ಲಿ ಕಾಫಿಯ ಬೆಲೆಯಲ್ಲಿ ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಭಾರೀ ಇಳಿಕೆ ಎಂಬAತೆ ೫೦ ಕೆ.ಜಿ.ಯ ರೋಬಸ್ಟಾ ಚೀಲವೊಂದಕ್ಕೆ ರೂ. ೪ ಸಾವಿರದ (ರೋಬಸ್ಟಾ)ವರೆಗೂ ಬೆಲೆ ಹೆಚ್ಚಾಗಿದ್ದು, ಅರೇಬಿಕಾಗೆ ರೂ. ೭ ಸಾವಿರದಷ್ಟು ಧಾರಣೆ ಬಂದಿತ್ತು. ಇದರಿಂದ ಕಾಫಿ ಯಾವ ರೀತಿಯಲ್ಲಿ ನಿಯಂತ್ರಣದಲ್ಲಿತ್ತು ಎಂಬುದು ಬಹಿರಂಗಗೊAಡು ಬೆಳೆಗಾರರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು.

ಮತ್ತೆ ಏರಿಳಿತ

ಆರಂಭದಲ್ಲಿ ರೂ. ೪ ಸಾವಿರದಷ್ಟು ಹಾಗೂ ರೂ. ೭ ಸಾವಿರದಷ್ಟು (ಅರೇಬಿಕಾ) ಏರಿಕೆಯಾಗಿದ್ದ ಬೆಲೆ ನಂತರದ ವರ್ಷದಲ್ಲಿ ಮತ್ತೆ ಕುಸಿತ ಕಂಡಿತ್ತು. ವ್ಯಾಪಾರಿಗಳ ನಿಯಂತ್ರಣ, ಮಧ್ಯವರ್ತಿಗಳ ಹಿಡಿತ ಇದಕ್ಕೆ ಕಾರಣವೆಂಬ ಅಭಿಪ್ರಾಯವೂ ಕೇಳಿಬಂದಿತ್ತು. ಏಕಾಏಕಿ ರೂ. ೧,೪೦೦, ರೂ. ೪೫೦, ರೂ. ೭೦೦ ಈ ರೀತಿಯಲ್ಲಿ ಏರಿಳಿತದ ಬಳಿಕ ಸುಮಾರು ೨೦೦೦ನೇ ಇಸವಿಯಿಂದ ಬೆಲೆ ಒಂದಷ್ಟು ಸ್ಥಿರತೆ ಕಂಡಿತು. ಈ ಸಂದರ್ಭದಿAದ ಈತನಕ ಅಂದರೆ ಸುಮಾರು ೨೫ ವರ್ಷಗಳ ಸುದೀರ್ಘ ಅವಧಿಯಲ್ಲಿ ಕಾಫಿಯ ಬೆಲೆ ಮತ್ತೆ ಏರಿಕೆಯಾಗಿಯೇ ಇಲ್ಲ. ಇದು ರೂ. ೨೪೦೦, ೨೮೦೦, ೩೦೦೦, ೩೨೦೦ ಈ ರೀತಿಯಾಗಿ ಮಾತ್ರ ಈತನಕವೂ ಮುಂದುವರಿಯುತ್ತಾ ಬರುತ್ತಿದೆ.

ಎಲ್ಲವೂ ಹಲವುಪಟ್ಟು ಹೆಚ್ಚಳ

ಕಾಫಿ ಧಾರಣೆ ಮಾತ್ರ ಕೇವಲ ಇದೇ ಮೊತ್ತಕ್ಕೆ ಸೀಮಿತವಾಗಿ ನಿಂತ ನೀರಿನಂತಾಗಿದೆ. ಆದರೆ, ಕಾಫಿ ಬೆಳೆಗೆ ಸಂಬAಧಿಸಿದ ಎಲ್ಲಾ ನಿರ್ವಹಣಾ ವೆಚ್ಚಗಳು ಮಾತ್ರ ಹಲವು ಪಟ್ಟು ಹೆಚ್ಚಾಗುತ್ತಲೇ ಹೋಗುತ್ತಿದೆ. ಉದಾಹರಣೆಗೆ ಕಾರ್ಮಿಕರ ವೇತನ ರೂ. ೧೦೦-೧೫೦ರಿಂದ (ಮೊದಲ ಪುಟದಿಂದ) ರೂ.೪೦೦-೫೦೦, ಗೊಬ್ಬರ ರೂ. ೪೦೦-೫೦೦ರಿಂದ ೧೫೦೦-೨೦೦೦, ಡೀಸೆಲ್ ರೂ. ೩೦ರಿಂದ ರೂ. ೮೦, ಥಾಟ್ ರೂ.೩೫ರಿಂದ ರೂ. ೧೫೦-೩೦೦, ಈ ರೀತಿಯಾಗಿ ಬಹುತೇಕ ಎಲ್ಲವೂ ಭಾರೀ ಏರಿಕೆಯಾಗಿದ್ದರೆ ಕಾಫಿಗೆ ಮಾತ್ರ ಬೆಲೆ ಹೆಚ್ಚಾಗಿಲ್ಲ. ಇದಕ್ಕೆ ಕಾರಣಗಳೇನು ಎಂಬ ಜಿಜ್ಞಾಸೆ ಈಗಲೂ ಬೆಳೆಗಾರರನ್ನು ಕಾಡುತ್ತಿದೆ.

ಹವಾಮಾನ ವೈಪರೀತ್ಯ : ವನ್ಯಜೀವಿಗಳ ಉಪಟಳ

ನಿರ್ವಹಣಾ ವೆಚ್ಚಗಳು ತೀರಾ ದುಬಾರಿಯಾಗುತ್ತಲೇ ಹೋಗುತ್ತಿರುವುದು ಒಂದೆಡೆಯಾದರೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಠಿಯಂತಹ ಕಾರಣಗಳು, ಕಾಡಾನೆ, ಕಾಡೆಮ್ಮೆ, ಮಂಗಗಳAತಹ ವನ್ಯಜೀವಿಗಳ ಉಪಟಳದಿಂದಲೂ ಬೆಳೆಗಾರರು ಕಂಗೆಡುತ್ತಿದ್ದಾರೆ.

ಇನ್ನಿತರ ಹಲವಾರು ಬೆಳೆಗಳಿಗೆ ಹೋಲಿಸಿದರೆ ಈ ಸುದೀರ್ಘ ಅವಧಿಯಲ್ಲಿ ಅವುಗಳ ಧಾರಣೆ ಹೆಚ್ಚಾಗಿದೆ. ಉದಾಹರಣೆಗೆ ಬೆಳೆಗಾರರು ಮಾತಿಗೆ ಹೇಳುವಂತೆ ೧೯೯೮- ೨೦೦೦ದಲ್ಲಿ ರೂ. ೧೫ರಷ್ಟಿದ್ದ ತೊಗರಿಬೇಳೆಯ ಧಾರಣೆ ಇದೀಗ ರೂ. ೧೦೫-೧೧೦ರಷ್ಟಿದೆ. ಆದರೆ ಕಾಫಿಗೆ ಮಾತ್ರ ಬೆಲೆ ವರ್ಷಾನುಗಟ್ಟಲೆಯಿಂದ ಹೆಚ್ಚಾಗುತ್ತಲೆ ಇಲ್ಲ...! ಕಾಫಿಯನ್ನೇ ಅವಲಂಬಿತರು ಅತ್ತ ತೋಟಗಳನ್ನು ಬಿಡಲೂ ಆಗದೆ ಇತ್ತ ನಿರ್ವಹಣೆ ಮಾಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿರುವುದು ಈಗಿನ ವಾಸ್ತವವಾಗಿದೆ.

ಚರ್ಚೆಗೆ ಗ್ರಾಸವಾಗಿರುವ ಕೇರಳ ಸರಕಾರದ ಬೆಂಬಲ ಬೆಲೆ

ಇದೀಗ ಕೇರಳ ಸರಕಾರ ಕಾಫಿಗೆ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಪ್ರಕಟಿಸುವುದಾಗಿ ಹೇಳಿರುವುದು ಕೊಡಗು ಸೇರಿದಂತೆ ರಾಜ್ಯದ ಬೆಳೆಗಾರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳ ಸರಕಾರ ಏಪ್ರಿಲ್‌ನಿಂದ ಬೆಂಬಲ ಬೆಲೆ ನೀಡುವುದಾಗಿ ಹೇಳಿದೆ. ರೋಬಸ್ಟಾ ಕಾಫಿಗೆ ಪ್ರತಿ ಕೆ.ಜಿ.ಗೆ ರೂ. ೯೦ರಷ್ಟನ್ನು ಮಿನಿಮಮ್ ಸಪೋರ್ಟ್ ಪ್ರೆöÊಸ್ ಆಗಿ ನೀಡುವುದಾಗಿ ಕೇರಳ ಹೇಳಿದ್ದು, ಇದರಂತೆ ಬೆಳೆಗಾರರಿಗೆ ಚೀಲವೊಂದಕ್ಕೆ ರೂ. ೪೫೦೦ ಬೆಲೆ ದೊರೆತಂತಾಗಲಿದೆ. ಇದನ್ನು ಕೇರಳ ಯಾವ ರೀತಿಯಲ್ಲಿ ಜಾರಿಗೆ ತರಬಹುದು ಎಂಬುದೂ ಇನ್ನೂ ಸ್ಪಷ್ಟತೆೆಯಾಗಿಲ್ಲ. ಬೆಳೆದ ಎಲ್ಲಾ ಕಾಫಿಗೆ ಈ ಧಾರಣೆ ಸಿಗಲಿದೆಯೇ ಅಥವಾ ಇಂತಿಷ್ಟು ಪ್ರಮಾಣಕ್ಕೆ ಎಂಬ ನಿಬಂಧನೆ ಮಾಡಲಿದೆಯೇ ಎಂಬುದು ಅಸ್ಪಷ್ಟವಾಗಿದೆ.

ಕೇರಳ ಸರಕಾರ ಈ ಕ್ರಮ ಜಾರಿಗೆ ತರುವುದಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಲ್ಲಿ ಏತಕ್ಕಾಗಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದಷ್ಟೇ ಇದೀಗ ಪ್ರಶ್ನಾರ್ಹವಾಗಿದೆ. ಕೇರಳ ಸರಕಾರದ ನಿಲುವಿನಿಂದಾಗಿ ಇನ್ನಿತರ ಕಡೆಯಲ್ಲೂ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.