ಸೋಮವಾರಪೇಟೆ, ಜ.೨೦: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭ ಇಲ್ಲಿನ ಪತ್ರಿಕಾಭವನದಲ್ಲಿ ನಡೆಯಿತು.
ತಾಲೂಕು ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಐವರು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅವರು ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಭಾಜನರಾದ ‘ಶಕ್ತಿ’ಯ ಸೋಮವಾರಪೇಟೆ ತಾಲೂಕು ವರದಿಗಾರ ವಿಜಯ್ ಹಾನಗಲ್, ಸಂಘದ ಮಾಜಿ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ಸ್ಥಾಪಿಸಿರುವ ಮಾನವೀಯ ವರದಿಗೆ ಕೂಡಿಗೆಯ ‘ಶಕ್ತಿ’ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದರೊಂದಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಪರಿಸರ ವನ್ಯಜೀವಿ ಪ್ರಶಸ್ತಿಯನ್ನು ‘ಪ್ರಜಾಸತ್ಯ’ ಪತ್ರಿಕೆಯ ಸೋಮವಾರಪೇಟೆ ವರದಿಗಾರ ಹೆಚ್.ಈ. ರವಿ, ಎಸ್.ಎ. ಮುರುಳೀಧರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ‘ಪ್ರಜಾವಾಣಿ’ ವರದಿಗಾರ ಎಂ.ಎಸ್. ಸುನಿಲ್, ಹೆಚ್.ಆರ್. ಹರೀಶ್ ಕುಮಾರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು ಶನಿವಾರಸಂತೆ ವಿಭಾಗದ ‘ವಿಜಯಕರ್ನಾಟಕ’ ಪತ್ರಿಕೆ ವರದಿಗಾರ ಚೆರಿಯಮನೆ ಸುರೇಶ್ ಅವರುಗಳಿಗೆ ನೀಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತ ರೈ ಉದ್ಘಾಟಿಸಿ ಮಾತನಾಡಿ, ಸಂಕಷ್ಟದಲ್ಲಿರುವ ಕಾರ್ಯನಿರತ ಗ್ರಾಮೀಣ ಪತ್ರಕರ್ತರಿಗೆ ಸರಕಾರದ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸಂಘದೊAದಿಗೆ ಮಾತುಕತೆ ನಡೆಸುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಷ್ಟಿçÃಯ ಸಮಿತಿ ಸದಸ್ಯ ಎಸ್.ಎ.ಮುರುಳೀಧರ್, ವೀಕ್ಷಕರಾಗಿ ಆಗಮಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ತಾಲೂಕು ಸಂಘದ ಖಜಾಂಚಿ ಬಿ.ಎ.ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ತಾಲೂಕು ಪತ್ರಕರ್ತರ ಸಂಘದ ದತ್ತಿ ನಿಧಿಗೆ ಉದ್ಯಮಿ ಚಾಮೇರ ಪವನ್ ದೇವಯ್ಯ ಅವರು ಒಂದು ಲಕ್ಷ ರೂ.ಗಳನ್ನು ನೀಡಿದರು.