ಸುಂಟಿಕೊಪ್ಪ, ಜ. ೨೦: ‘ನಮ್ಮ ಸುಂಟಿಕೊಪ್ಪ’ ನೂತನ ಆಡಳಿತ ಮಂಡಳಿ ಪದಗ್ರಹಣ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳಿಗೆ ಸನ್ಮಾನಿಸಲಾಯಿತು. ಸಂತಮೇರಿ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ‘ನಮ್ಮ ಸುಂಟಿಕೊಪ್ಪ’ದ ಅಧ್ಯಕ್ಷÀ ಡೆನ್ನಿಸ್ ಡಿಸೋಜ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ೨೦ ಮಂದಿ ಸದಸ್ಯರುಗಳು ರಾಜಕೀಯ ರಹಿತವಾಗಿ ಅಭಿವೃದ್ಧಿ ದೃಷ್ಟಿಕೋನದಿಂದ ಕೆಲಸ ಮಾಡಬೇಕಾಗಿದೆ. ಸುಂಟಿಕೊಪ್ಪ ಬೆಳೆಯುತ್ತಿರುವ ಪಟ್ಟಣವಾಗಿದೆ ಎಲ್ಲಾ ಸದಸ್ಯರುಗಳು ಒಂದಾಗಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಭೇಟಿಯಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ೫೦ ಎಕ್ರೆ ಸರಕಾರಿ ಜಾಗವನ್ನು ಮಂಜೂರು ಮಾಡಿಸಿಕೊಂಡು ಅದನ್ನು ಇನ್ನಿತರ ಅಭಿವೃದ್ಧಿಗೆ ಬಳಸಿಕೊಳ್ಳಲು ಮುಂದಾಗಬೇಕೆAದು ಸಲಹೆ ನೀಡಿದರು. ನಮ್ಮ ಸುಂಟಿಕೊಪ್ಪದ ಸದಸ್ಯರುಗಳು ಪಂಚಾಯತ್ ರಾಜ್ ವ್ಯವಸ್ಥೆಯ ಕೈಪಿಡಿಯನ್ನು ನೂತನ ಗ್ರಾ.ಪಂ.ಸದಸ್ಯರುಗಳಿಗೆ ವಿತರಿಸಿದರು. ನೂತನ ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ, ಪಿ.ಆರ್.ಸುನಿಲ್‌ಕುಮಾರ್, ಶಬ್ಬೀರ್, ರಫೀಕ್‌ಖಾನ್, ಜಿನಾಸುದ್ದೀನ್, ಆಲಿಕುಟ್ಟಿ,ಪ್ರಸಾದ್‌ಕುಟ್ಟಪ್ಪ, ನಾಗರತ್ನ ಸುರೇಶ್, ಗೀತಾ, ಮಂಜುಳ ಶಿವಮ್ಮ ಮಹೇಶ್, ಹಸೀನಾ, ರೇಷ್ಮ, ಮಂಗಳ, ವನಿತಾ, ವಸಂತಿ ಹಾಗೂ ಶಾಂತಿ ಅವರನ್ನು ಸನ್ಮಾನಿಸಲಾಯಿತು.