ಮಡಿಕೇರಿ, ಜ. ೨೦: ಕನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ವತಿಯಿಂದ ೧೯ ವರ್ಷದೊಳಗಿನವರ ಕೊಡಗು ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆ ಶಿಬಿರ ಏರ್ಪಡಿಸಲಾಗಿದೆ. ತಾ. ೨೪ ರಂದು ಬೆಳಿಗ್ಗೆ ೮ ಗಂಟೆಯಿAದ ಮಡಿಕೇರಿಯ ಕೊಡಗು ವಿದ್ಯಾಲಯ ಮೈದಾನದಲ್ಲಿ ಆಯ್ಕೆ ಶಿಬಿರ ನಡೆಯಲಿದೆ. ೨೦೦೧ರ ಸೆಪ್ಟೆಂಬರ್ ೧ರ ನಂತರ ಜನಿಸಿದ ಆಟಗಾರರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ. ೯೯೪೫೨೭೩೬೮೮, ೯೮೪೫೫೦೫೨೦೦, ೯೯೮೦೦೬೦೩೨೨ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಾಂಡರ‍್ಸ್ ಕ್ಲಬ್‌ನ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.